ಯುವಜನ ಮೇಳ ರಾಷ್ಟ್ರಭಕ್ತಿ ಬೀಜ ಬಿತ್ತುವಂತಾಗಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Source Credit NewsKannada.com

ಯುವಜನ ಮೇಳ ರಾಷ್ಟ್ರಭಕ್ತಿ ಬೀಜ ಬಿತ್ತುವಂತಾಗಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ


DA
  ¦   


Jan 18, 2020 06:49:18 PM (IST)

ಬೆಳ್ತಂಗಡಿ: ಭಾರತದ ಪ್ರತಿಯೊಬ್ಬ ಪ್ರಜೆಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಈಗಾಗಲೇ ದೇಶದ ಪ್ರಧಾನ ಮಂತ್ರಿ ಹಾಗೂ ಗೃಹಮಂತ್ರಿಗಳು ಮಾತು ಕೊಟ್ಟಿರುವುದರಿಂದ ಎನ್‍ಆರ್‍ಸಿ ಕಾಯಿದೆಯ ಬಗ್ಗೆ ಯಾವುದೇ ಭಾರತೀಯ ಪ್ರಜೆ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬೆಳ್ತಂಗಡಿ ತಾಲೂಕಿನ ಬಳಂಜದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಶನಿವಾರ ಅವರು ಉದ್ಘಾಟಿಸಿ ಮಾತನಾಡಿದರು.

ಯುವಕರಲ್ಲಿ ಜಾಗೃತಿ, ಸಾಂಸ್ಕೃತಿಕ ಪ್ರಜ್ಞೆಯನ್ನು ಉತ್ತೇಜಿಸಲು ಮೇಳವನ್ನು ಆಯೋಜಿಸಲಾಗುತ್ತದೆ. ರಾಜ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಳಂಜದಲ್ಲೇ ಮೊದಲ ಬಾರಿಗೆ ಯುವಜನ ಮೇಳವನ್ನು ಆಯೋಜಿಸುತ್ತಿರುವುದು ಸಂತಸ ತಂದಿದೆ. ಹೀಗಾಗಿ ಹೆಮ್ಮೆಯಿಂದ, ಪ್ರೀತಿಯಿಂದ, ಅಭಿಮಾನದಿಂದ, ಪಾರಂಪಾರಿಕವಾಗಿ ಮೇಳವನ್ನು ಉದ್ಘಾಟಿಸಿದ್ದೇನೆ ಎಂದರು.

ವ್ಯಕ್ತಿಗಿಂತ ಮೊದಲು ರಾಷ್ಟ್ರ ಎಂಬ ಭಾವನೆಯಿಂದ ಪ್ರತಿಯೊಬ್ಬರೂ ದೇಶದಲ್ಲಿ ಸೇವೆ ಮಾಡಬೇಕು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ರಾಷ್ಟ್ರ ಚಿಂತನೆಯನ್ನು ಮಾಡಬೇಕು. ಯುವಜನ ಮೇಳವು ರಾಷ್ಟ್ರ ಭಕ್ತಿಯ ಬೀಜವನ್ನು ಬಿತ್ತುವಂತಾಗಲಿ. ಸದಾ ಜಾಗೃತನಾಗಿರುವ ಪ್ರಜೆಯಿಂದಲೇ ಪ್ರಜಾಪ್ರಭುತ್ವಗಟ್ಟಿಯಾಗಿರಲು ಸಾಧ್ಯ ಎಂದರು.

ದ.ಕ.ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಕಲೆಗಳನ್ನು ಪ್ರೋತ್ಸಾಹಿಸುವ ಮನಸ್ಸುಗಳು ಹೆಚ್ಚಾಗಬೇಕು. ಇದಕ್ಕಾಗಿ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಬಳಂಜದಲ್ಲಿ ನಡೆಯುವಂತಹ ಯುವಜನಮೇಳಕ್ಕೆ ಹಲವಾರು ಸಂಘ ಸಂಸ್ಥೆಗಳು ಜೊತೆ ಸೇರಿರುವುದು ಅಭಿನಂದನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಅವರು,  ಜಿಲ್ಲಾಮಟ್ಟದ ಯುವಜನಮೇಳವು ಬಳಂಜ, ತೆಂಕಕಾರಂದೂರು, ನಾಲ್ಕೂರು ಗ್ರಾಮಸ್ಥರ ಕೊಡುಗೆಯಿಂದ ಯಶಸ್ವಿಗೊಳ್ಳುತ್ತಿದೆ. ಇದೊಂದು ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದಿಂದ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರುವಂತಾಗಬೇಕು ಎಂದರು.

ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ.ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಶುಭ ಹಾರೈಸಿದರು.

ಜಿ.ಪಂ ಸದಸ್ಯರಾದ ಕೊರಗಪ್ಪ ನಾಯ್ಕ, ತುಂಗಪ್ಪ ಬಂಗೇರ, ನಮಿತಾ, ಸೌಮ್ಯಲತಾ, ಮಮತಾ ಎಂ ಶೆಟ್ಟಿ, ತಾ.ಪಂ ಸದಸ್ಯೆ ವಿನೂಷಾ ಪ್ರಕಾಶ್, ಕೇಶವತಿ, ವಸಂತಿ, ತಾ.ಪಂ ಸದಸ್ಯ ಸುಧೀರ್ ಸುವರ್ಣ, ಬಳಂಜ ಗ್ರಾ,ಪಂ ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕ, ಸದಸ್ಯರುಗಳಾದ ಯಶೋಧರ ಶೆಟ್ಟಿ, ಯಶೋಧರ ದೇವಾಡಿಗ, ರೇವತಿ, ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಯುವಜನ ಒಕ್ಕೂಟ ಬೆಂಗಳೂರು ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ, ತಾಲೂಕು ಯುವಜನ ಒಕ್ಕೂಟದ  ಪ್ರಭಾಕರ ಶೆಟ್ಟಿ ಉಪ್ಪಡ್ಕ, ಯುವಜನಮೇಳ ಸಮಿತಿ ಅಧ್ಯಕ್ಷ ವಿನು ಬಳಂಜ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್, ಕೋಶಾಧಿಕಾರಿ ರಾಕೇಶ್ ಹೆಗ್ಡೆ, ಸ್ವಾಗತ ಸಮಿತಿ ಸಂಚಾಲಕ ರಂಜಿತ್ ಹೆಚ್.ಡಿ, ವೇದಿಕೆ ಸಮಿತಿ ಸಂಚಾಲಕ ಹರೀಶ್ ದೇವಾಡಿಗ ಹಾಣಿಂಜ, ಆರ್ತಿಕ ಸಮಿತಿ ಸಂಚಾಲಕ ದಿನೇಶ್ ಪಿ.ಕೆ, ವಸತಿ ಸಮಿತಿ ಸಂಚಾಲಕ ಸಂಜೀವ ಆಚಾರ್ಯ, ಆಹಾರ ಸಮಿತಿ ಸಂಚಾಲಕ ಗುರುಪ್ರಸಾದ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಸ್ವಾಗತಿಸಿದರು.   ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ ಪ್ರಸ್ತಾಪಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ತಾ.ಪಂ ಬೆಳ್ತಂಗಡಿ ಇದರ ಪ್ರಭಾಕರ ನಾರಾವಿ, ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಸಹಕರಿಸಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಸ್ ಡಿಪಿಐ, ಪಿಎಫ್ ಐ ನಿಷೇಧಕ್ಕೆ ಆಗ್ರಹಿಸಿ ಮನವಿ

Sat Jan 18 , 2020
Source Credit NewsKannada.com DA   ¦    Jan 18, 2020 08:11:55 PM (IST) ಬೆಳ್ತಂಗಡಿ: ರಾಜ್ಯದ ಹಿಂದೂ ಮುಖಂಡರ ಹತ್ಯೆ ಸಂಚನ್ನು ಖಂಡಿಸಿ, ಕೂಡಲೇ ಸಂಚನ್ನು ರೂಪಿಸಿದ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಗಳನ್ನು ದೇಶದಾದ್ಯಂತ ನಿಷೇಧಿಸಬೇಕೆಂದು ಆಗ್ರಹಿಸಿ ಇಂದು ಬೆಳ್ತಂಗಡಿ ತಾಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂರ್ದಭ ಭಜರಂಗದಳ ಸಂಯೋಜಕರಾದ ಸಂತೋಷ್ ಅತ್ತಾಜೆ, ಸಹ ಸಂಯೋಜಕರಾದ ರಮೇಶ್ ಧರ್ಮಸ್ಥಳ,ತಾಲೂಕು ಗೋರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ,ವಿ.ಹಿಂ.ಪ ತಾಲೂಕು ಕಾರ್ಯದರ್ಶಿ ನವೀನ್ ನೆರಿಯ,ಸಹ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ಮತ್ತು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links