ಯಾವ ತಿಂಗಳ ಗರ್ಭಧಾರಣೆಗೆ ತುಂಬಾ ಕೆಟ್ಟದು?

Source Credit Kannada.boldsky.com

ಮೇನಲ್ಲಿ ಗರ್ಭಧರಿಸಿದರೆ ಅಕಾಲಿಕ ಹೆರಿಗೆ

ಮೇನಲ್ಲಿ ಗರ್ಭಧರಿಸಿದರೆ ಆಗ ಖಂಡಿತವಾಗಿಯೂ ಮಗು ಅಕಾಲಿಕ ಹೆರಿಗೆಯಾಗುವುದು ಎಂದು ರಾಷ್ಟ್ರೀಯ ಅಕಾಡಮಿ ಆಫ್ ಸೈನ್ಸ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಈ ಅಧ್ಯಯನಕ್ಕಾಗಿ ಸುಮಾರು 657050 ತಾಯಂದಿರ 1.4 ಮಿಲಿಯನ್ ಮಕ್ಕಳನ್ನು ಒಳಪಡಿಸಲಾಯಿತು ಮತ್ತು ಇಲ್ಲಿ ಮಕ್ಕಳು ಜನಿಸಿದ ದಿನಾಂಕವನ್ನು ಆಧರಿಸಿಕೊಂಡು ತಾಯಂದಿರುವ ಗರ್ಭ ಧರಿಸಿದ ಸಮಯವನ್ನು ನೋಡಲಾಯಿತು. ಮೇಯಲ್ಲಿ ಗರ್ಭ ಧರಿಸಿದ ಮತ್ತು ಜನವರಿ ಮತ್ತು ಫೆಬ್ರವರಿಯಲ್ಲಿ ಮೂರನೇ ತ್ರೈಮಾಸಿಕಕ್ಕೆ ಒಳಗಾದ ತಾಯಂದಿರು ಅಕಾಲಿಕ ಹೆರಿಗೆ ಆಗಿರುವ ಪ್ರಮಾಣ ಶೇ.10ರಷ್ಟಿತ್ತು.

ಜೂನ್ ನಲ್ಲಿ ಗರ್ಭ ಧರಿಸಿದರೆ ತಾಯಿಗೇ ಕಂಟಕ

ಜೂನ್ ಮಾಸ ಸಹ ಗರ್ಭ ಧರಿಸಲು ಸೂಕ್ತ ಸಮಯವಲ್ಲ. ಈ ತಿಂಗಳಲ್ಲಿ ಗರ್ಭ ಧರಿಸಿದ ತಾಯಂದಿರಿಗೆ ಗರ್ಭಧಾರಣೆ ವೇಳೆ ಮಾರಣಾಂತಿಕ ಸಮಸ್ಯೆ ಎದುರಾಗಬಹುದು ಅಥವಾ ಸಾವನ್ನಪ್ಪಬಹುದು. ಅಲ್ಲದೇ ಮಕ್ಕಳು ಅವಧಿಗೂ ಮುನ್ನವೇ ಹುಟ್ಟವ ಸಾಧ್ಯತೆ ಸಹ ಹೆಚ್ಚಿದೆ ಎಂದು ತಜ್ಞ ವೈದ್ಯರು ಸೂಚಿಸಿದ್ದಾರೆ. ಇದಕ್ಕೆ ವಿಟಮಿನ್ ಡಿ ಪ್ರಮಾಣ ಮತ್ತು ಕೀಟನಾಶಕಗಳು ಕಾರಣವಿರಬಹುದು ಎನ್ನುತ್ತಾರೆ.

ಇದು ಯಾಕೆ ಸಂಭವಿಸುವುದು?

ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಅತೀವ ಚಳಿಗಾಲದ ತಿಂಗಳುಗಳಾಗಿರುವುದು. ಹೀಗಾಗಿ ಈ ತಿಂಗಳುಗಳಲ್ಲಿ ಜ್ವರ ಮತ್ತು ಉರಿಯೂತದ ಸಮಸ್ಯೆಯು ಹೆಚ್ಚಾಗಿ ಇರುವುದು. ಇದರಿಂದಾಗಿ ಅಕಾಲಿಕ ಹೆರಿಗೆ ಆಗುವ ಸಾಧ್ಯತೆಯು ಇರುವುದು ಎಂದು ಅಧ್ಯಯನಗಳು ಹೇಳಿವೆ.

ಅಕಾಲಿಕ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಅಕಾಲಿಕ ಹೆರಿಗೆ ಆಗಿರುವ ಮಕ್ಕಳಲ್ಲಿ ಶ್ವಾಸಕೋಶ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿ ಇರುವುದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಶನ್ ಪ್ರಕಾರ, ಈ ಮಕ್ಕಳಿಗೆ ಜನನದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿರುವುದು.

ನೀವು ಏನು ಮಾಡಬಹುದು?

ವೈದ್ಯರಲ್ಲಿ ನೀವು ಜ್ವರದ ಔಷಧಿಯನ್ನು ಕೇಳಿ ಪಡೆಯಬಹುದು. ಗರ್ಭಿಣಿಯರು ಯಾವಾಗಲೂ ರೋಗಿಗಳಿಂದ ಹಾಗೂ ರೋಗಗಳಿಂದ ದೂರವಿರಬೇಕು. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಮತ್ತು ಕಣ್ಣು, ಬಾಯಿ ಮತ್ತು ಮೂಗಿನಿಂದ ಕೈಗಳನ್ನು ದೂರವಿಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಯಾವುದೇ ಆರೋಗ್ಯಕಾರಿ ಸಮಸ್ಯೆ ಎದುರಾದರೂ ಮನೆಮದ್ದಿಗೆ ಪ್ರಯತ್ನಿಸದೇ, ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಕಾಣಬೇಕು. ಇದೆಲ್ಲದರ ಪರಿಣಾಮವಾಗಿ ನೀವು ಆರೋಗ್ಯಕಾರಿ ಗರ್ಭಧಾರಣೆ ಮತ್ತು ಸಂಪೂರ್ಣ ಗರ್ಭಧಾರಣೆ ಸಮಯವನ್ನು ಆನಂದಿಸಬಹುದು.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಉದ್ಯೋಗಸ್ಥ ತಾಯಂದಿರಿಗೆ ಹಣ ಉಳಿತಾಯಕ್ಕೆ ಏಳು ಸೂತ್ರಗಳು

Thu Oct 31 , 2019
Source Credit Kannada.boldsky.com Pin it Email https://nirantharanews.com/%e0%b2%af%e0%b2%be%e0%b2%b5-%e0%b2%a4%e0%b2%bf%e0%b2%82%e0%b2%97%e0%b2%b3-%e0%b2%97%e0%b2%b0%e0%b3%8d%e0%b2%ad%e0%b2%a7%e0%b2%be%e0%b2%b0%e0%b2%a3%e0%b3%86%e0%b2%97%e0%b3%86-%e0%b2%a4%e0%b3%81/#MDEtMTU3MjQxNDc 1. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಲೆಕ್ಕ ಇಟ್ಟುಕೊಳ್ಳಿ ನೀವು ಖರ್ಚು ಕಡಿಮೆ ಮಾಡುವ ಬದಲು ಮೊದಲಿಗೆ ಹಣ ಹೆಚ್ಚಾಗಿ ಎಲ್ಲಿ ಖರ್ಚಾಗುತ್ತಾ ಇದೆ ಎಂದು ತಿಳಿದುಕೊಳ್ಳಬೇಕು. ಖರ್ಚುಗಳ ಬಗ್ಗೆ ಲೆಕ್ಕಪತ್ರ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದು ತುಂಬಾ ಸರಳ ಪ್ರಕ್ರಿಯೆ ಆಗಿದೆ. ನೀವು ಹೇಗೆ ಹಣ ಖರ್ಚು ಮಾಡುತ್ತಲಿದ್ದೀರಿ ಮತ್ತು ಎಲ್ಲಿ ಹಣ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿಯಬೇಕು. ಇಂದಿನ ದಿನಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಯಾವುದೇ ಆಪ್ ಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links