ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ

ಎಸ್.ಪಿ.ಬಿ ಬೇಸರ

ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ.ಬಿಯೂ ಭಾಗಿಯಾಗಿದ್ದರು. ಆದರೆ ಎಸ್ ಪಿ ಬಿಗೆ ಮಾತ್ರ ಮೋದಿ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಅವಾಕಶ ಸಿಕ್ಕಿಲ್ಲ. ಆದರೆ ಬಾಲಿವುಡ್ ಸ್ಟಾರ್ ಮಾತ್ರ ಪ್ರಧಾನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ. ಎಸ್.ಪಿ.ಬಿಯನ್ನು ಫೋಟೋದಿಂದ ದೂರ ಇಟ್ಟ ಅಸಲಿ ಕಾರಣವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಡುವ ಮೂಲಕ ಖ್ಯಾತ ಗಾಯಕ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲಿ ನಡೆದಿದ್ದೇನು?

ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಕಾರ್ಯಕ್ರಮಕ್ಕೆ ಗಾನ ಗಂಧರ್ವ, ಪದ್ಮಭೂಷಣ ಡಾ.ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೂ ಆಹ್ವಾನ ನೀಡಲಾಗಿತ್ತು. ಕರೆಯಂತೆ ಎಸ್ ಪಿ ಬಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಕಾರ್ಯಕ್ರಮಕ್ಕೆ ಎಂಟ್ರಿಯಾಗುತ್ತಿದ್ದಂತೆ ಬಾಲಸುಬ್ರಮಣ್ಯಂ ಮೊಬೈಲ್ ಅನ್ನು ಸೆಕ್ಯೂರಿಟಿಯವರು ಕಿತ್ತುಕೊಂಡಿದ್ದಾರೆ. ಒಳಗೆ ಮೊಬೈಲ್ ಬಳಸುವಹಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಒಳಗೆ ನೋಡಿದೆ ಬಾಲಿವುಡ್ ಸ್ಟಾರ್ ಬಳಿ ಮೊಬೈಲ್ ಇದೆ. ಪ್ರಧಾನಿ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸಪಡುತ್ತಿದ್ದಾರೆ. ಇದನ್ನು ನೋಡಿ ಬೇಸರಗೊಂಡ ಬಾಲಸುಬ್ರಮಣ್ಯಂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಎಸ್.ಪಿ.ಬಿ ಹೇಳಿದ್ದೇನು?

“ರಾಮೋಜಿ ರಾವ್ ಜೀ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಎಂಟ್ರಿಯಾದ ನಂತರ, ನನ್ನ ಫೋನ್ ಅನ್ನು ಭದ್ರತ ಸಿಬಂದಿ ಬಳಿಯೆ ಬಿಡುವಂತೆ ಹೇಳಿದರು. ಅದಕ್ಕಾಗಿಯೆ ಟೋಕನ್ ಕೂಡ ನೀಡಿದರು. ಆದರೆ ಅದೆ ಕಾರ್ಯಕ್ರಮದಲ್ಲಿ ಸ್ಟಾರ್ಸ್ ಪ್ರಧಾನ ಮಂತ್ರಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡಿ ದಿಗ್ಭ್ರಾಂತನಾದೆ. ಇಂಥಹ ಘಟನೆಗಳು ಪ್ರಶ್ನೆ ಮಾಡುವಂತೆ ಮಾಡುತ್ತೆ” ಎಂದು ಬರೆದುಕೊಂಡಿದ್ದಾರೆ.

ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗುತ್ತಿದೆ

ಈ ಕಾರ್ಯಕ್ರಮವಾದ ನಂತರ ದಕ್ಷಿಣ ಭಾರತೀಯ ಚಿತ್ರರಂಗದ ಅನೇಕ ಕಲಾವಿದರು ಬೇಸರ ಹೊರಹಾಕಿದ್ದರು. ಬಾಲಿವುಡ್ ಚಿತ್ರರಂಗಕ್ಕೆ ಸಿಕ್ಕ ಬೆಂಬಲ ಮತ್ತು ಸಹಕಾರ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಿಗುತ್ತಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ರಾಮ್ ಚರಣ್ ಪತ್ನಿ ಉಪಾಸನಾ, ನಟ ಜಗ್ಗೇಶ್ ಸೇರಿದಂತೆ ಅನೇಕರು ಇದರ ವಿರುದ್ಧ ಧ್ವನಿ ಎತ್ತಿದ್ದರು.

Niranthara News

Leave a Reply

Your email address will not be published. Required fields are marked *

Next Post

ಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭ

Sun Nov 3 , 2019
Source Credit Filmibeat.com Pin it Email https://nirantharanews.com/%e0%b2%ae%e0%b3%8b%e0%b2%a6%e0%b2%bf-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%85%e0%b2%b8%e0%b2%ae%e0%b2%be%e0%b2%a7%e0%b2%be%e0%b2%a8-%e0%b2%b9%e0%b3%8a%e0%b2%b0/#YW1iYWFyLTEtMTU ಮದುಮಗನಿಗೆ ಅಭಿನಂದನೆಗಳು. ನಿಮ್ಮ ಬಾಳ ಸಂಗಾತಿಯ ಬಗ್ಗೆ ಏನು ಹೇಳುತ್ತೀರಿ? ವಂದನೆಗಳು. ನನ್ನವಳ ಹೆಸರು ಪಾರುಲ್ ಶುಕ್ಲಾ. ನಾವಿಬ್ಬರು ಇಂದು ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದರೂ ನಮ್ಮ ಪ್ರೇಮಕ್ಕೆ ದಶಕದ ಹಿನ್ನೆಲೆ ಇದೆ! ಪಾರುಲ್ ಪ್ರಸ್ತುತ ಖಾಸಗಿ ವಾಹಿನಿಯೊಂದರಲ್ಲಿ ವೃತ್ತಿಯಲ್ಲಿದ್ದಾರೆ. ಆಕೆ ಮೂಲತಃ ಮುಂಬೈ ಹುಡುಗಿಯಾದರೂ ಕುಟುಂಬ ಸಮೇತ ಬೆಂಗಳೂರಲ್ಲಿ ವಾಸವಾಗಿದ್ದಾರೆ. ಮಾತೃಭಾಷೆ ಹಿಂದಿಯಾದರೂ ಕನ್ನಡ ಚೆನ್ನಾಗಿ ಮಾತನಾಡಬಲ್ಲಳು. ಈಗ ನನ್ನ ಮಾತೃಭಾಷೆ ತುಳುವನ್ನು ಕೂಡ ಕಲಿತುಕೊಂಡಿದ್ದಾಳೆ. ಹತ್ತು ವರ್ಷಗಳ ಕಾಲ ಆಕೆ ನನ್ನನ್ನು ಸಹಿಸಿಕೊಂಡಿರುವುದೇ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links