ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಯಕ್ಷಗಾನದ ಹರಕೆ ಹೊತ್ತಿದ್ದ ವೈದ್ಯ: ಈಡೇರಿಸಿದ ಕಟೀಲು ದೇವಿ

Source Credit NewsKannada.com


HSA
  ¦   


Feb 14, 2020 06:06:47 PM (IST)

ಮಂಗಳೂರು: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಯಕ್ಷಗಾನ ಬಯಲಾಟ ಹರಕೆ ಹೊತ್ತಿದ್ದ ವೈದ್ಯರೊಬ್ಬರು ಈಗ ಸೇವೆಯಾಟವನ್ನು ಫೆ.19ರಂದು ಪುತ್ತೂರು ನಗರದ ಬೊಳುವಾರು ಬೈಲ್ ನಲ್ಲಿ ಆಡಿಸಲಿದ್ದಾರೆ.

ಶ್ರೀ ದೇವಿ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದವರು ಫೆ.19ರಂದು ಆಡಿತೋರಿಸಲಿರುವರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ತುಂಬಾ ವೈರಲ್ ಆಗುತ್ತಿದೆ.

ಡಾ. ಉದಯಶಂಕರ್ ಭಟ್ ಮತ್ತು ಅವರ ಪತ್ನಿ ದೀಪಶ್ರೀ ಅವರು ಕಳೆದ ಲೋಕಸಭೆ ಚುನಾವಣೆ ವೇಳೆ ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗಬೇಕು ಎಂದು ಹರಕೆ ಹೊತ್ತುಕೊಂಡಿದ್ದರು. ಈಗ ಬೇಡಿಕೆ ಈಡೇರಿದೆ.

ಅಂದು ಸಂಜೆ 6.30ರಿಂದ ರಾತ್ರಿ 8.30ರ ತನಕ ಉದಯಶಂಕರ್ ಭಟ್ ಮತ್ತು ದೀಪಶ್ರೀ ದಂಪತಿ ಪುತ್ರಿ ತನ್ವಿಯವರು ಭರತನಾಟ್ಯ ಪ್ರದರ್ಶಿಸಲಿದ್ದಾರೆ ಎಂದು ಯಕ್ಷಗಾನದ ಆಹ್ವಾನ ಪತ್ರಿಕೆಯಲ್ಲಿ ಹೇಳಲಾಗಿದೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 32 ರ್ಯಾಂಕ್

Fri Feb 14 , 2020
Source Credit NewsKannada.com ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 32 ರ್ಯಾಂಕ್ Feb 14, 2020 06:01:29 PM (IST) Pin it Email https://nirantharanews.com/%e0%b2%ae%e0%b3%8b%e0%b2%a6%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%8a%e0%b2%ae%e0%b3%8d%e0%b2%ae%e0%b3%86-%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%af%e0%b2%be/#YWx2YXMxX25ld3N ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2019-20ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಹೋಮಿಯೋಪತಿ ಮೆಡಿಕಲ್ ಸೈನ್ಸ್ ಪದವಿ ಪರೀಕ್ಷೆಗಳ ಫಲಿತಾಂಶವು ಬಿಡುಗಡೆಯಾಗಿದ್ದು, ಆಳ್ವಾಸ್ ಹೋಮಿಯೋಪತಿ ಕಾಲೇಜು 32 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ. ಸಮಗ್ರವಾಗಿ ದ್ವಿತೀಯ ವರ್ಷದ ಬಿಎಚ್‍ಎಮ್‍ಎಸ್ ವಿದ್ಯಾರ್ಥಿನಿ ಎಮ್.ಎಸ್ ಮಹಾಲಕ್ಷ್ಮಿ 8ನೇ ರ್ಯಾಂಕ್, ನಾಲ್ಕನೇ ವರ್ಷದ ಅಪರ್ಣಾ ಗೋಪಿನಾಥ್ ಐದನೇ ರ್ಯಾಂಕ್ ಹಾಗೂ ಅರ್ಚನಾ ಎನ್. ವಿ ಏಳನೇ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links