ಮೋದಿ ಮತ್ತು ಶಾ ‘ರಾಹುಕೇತು’ಗಳು, ದೇಶಕ್ಕೆ ಗ್ರಹಣ ಹಿಡಿದಿದ್ದೇ ಇವರಿಂದ

Source Credit Oneindia.com

Dharwad

oi-Balaraj Tantri

|

ಧಾರವಾಡ, ಡಿ 26: ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯ ವಿರುದ್ದ ಬೀದಿಗಿಳಿದಿರುವ ಕಾಂಗ್ರೆಸ್, ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ದ ಕಿಡಿಕಾರುತ್ತಿದೆ.

ನಗರದಲ್ಲಿನ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, “ಅಮಿತ್ ಶಾ ಮತ್ತು ನರೇಂದ್ರ ಮೋದಿಯವರಿಗೆ ಏನಾದರೂ ಸಂವಿಧಾನದ ಬಗ್ಗೆ ಅರಿವಿದೆಯಾ” ಎಂದು ಪ್ರಶ್ನಿಸಿದ್ದಾರೆ.

“ಮೋದಿ ಮತ್ತು ಅಮಿತ್ ಶಾ, ರಾಹುಕೇತುಗಳು ಇದ್ದಂತೆ. ದೇಶಕ್ಕೆ ಗ್ರಹಣ ಹಿಡಿದಿದ್ದೇ ಇವರಿಬ್ಬರಿಂದ, ಯುವ ಸಮುದಾಯ ಈ ಗ್ರಹಣದಿಂದ ದೇಶಕ್ಕೆ ಮುಕ್ತಿ ಸಿಗಲು, ಹೋರಾಟಕ್ಕೆ ಇಳಿದಿದೆ” ಎಂದು ಉಗ್ರಪ್ಪ ಹೇಳಿದರು.

“ಕಾಂಗ್ರೆಸ್ ಮುಕ್ತ್ ಭಾರತ್ ಮಾಡುತ್ತೇವೆ ಎಂದು ಹೊರಟಿದ್ದ ಈ ಇಬ್ಬರು ಜೋಡಿಗಳಿಗೆ, ದೇಶದ ಮತದಾರ ಸರಿಯಾದ ಪಾಠವನ್ನು ಕಲಿಸುತ್ತಿದ್ದಾನೆ. ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿದೆ” ಎಂದು ಉಗ್ರಪ್ಪ ಲೇವಡಿ ಮಾಡಿದರು.

“ದೇಶದಲ್ಲಿ ಈಗ ಆರಂಭವಾಗಿರುವ ಹೋರಾಟಗಳು ಅಂತ್ಯವಲ್ಲ, ಇದು ಆರಂಭ. ಮೊದಲ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ವಿರುದ್ದ ನಡೆದಿತ್ತು. ಎರಡನೇ ಸ್ವಾತ್ಯಂತ್ಯ ಸಂಗ್ರಾಮ ಮತೀಯವಾದಿಗಳ ವಿರುದ್ದ ನಡೆಯಲಿದೆ” ಎಂದು ಉಗ್ರಪ್ಪ ಎಚ್ಚರಿಸಿದ್ದಾರೆ.

“ತಮ್ಮನ್ನು ಚಾಯ್ ವಾಲಾ ಎಂದು ಈ ದೇಶದ ಪ್ರಧಾನಿ ಕರೆಸಿಕೊಳ್ಳುತ್ತಾರೆ. ಆದರೆ, ಅವರ ಪಕ್ಷದ ಸಂಸದ, ಪಂಚರ್ ಹಾಕುವವರಿಗೆ ಅವಮಾನ ಮಾಡುತ್ತಾರೆ. ಇವರೆಲ್ಲಾ ಮನುಷ್ಯರಾ” ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಶೀಘ್ರದಲ್ಲೇ ಎಜೆ ಆಸ್ಪತ್ರೆಯಲ್ಲಿ ‘ರೊಬೊಟ್ ಸಹಾಯಕ’ ಶಸ್ತ್ರಚಿಕಿತ್ಸಾ ವ್ಯವಸ್ಥೆ

Fri Dec 27 , 2019
Source Credit NewsKannada.com ಶೀಘ್ರದಲ್ಲೇ ಎಜೆ ಆಸ್ಪತ್ರೆಯಲ್ಲಿ ‘ರೊಬೊಟ್ ಸಹಾಯಕ’ ಶಸ್ತ್ರಚಿಕಿತ್ಸಾ ವ್ಯವಸ್ಥೆ HSA   ¦    Dec 27, 2019 02:49:37 PM (IST) Pin it Email https://nirantharanews.com/%e0%b2%ae%e0%b3%8b%e0%b2%a6%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b6%e0%b2%be-%e0%b2%b0%e0%b2%be%e0%b2%b9%e0%b3%81%e0%b2%95%e0%b3%87%e0%b2%a4%e0%b3%81%e0%b2%97%e0%b2%b3/#cm9ib3RvX25ucl9 ಮಂಗಳೂರು: ಶೀಘ್ರದಲ್ಲಿಯೇ ಮಂಗಳೂರು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ರೊಬೊಟ್ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು ಎಂದು ಡಾ.ಪ್ರಶಾಂತ್ ಮಾರ್ಲಾ ಕೆ. ತಿಳಿಸಿದರು. ಡ ವಿನ್ಸಿ 4 ನೇ ತಲೆಮಾರಿನ ರೊಬೊಟ್ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆ ಎನ್ನುವ ಅತ್ಯಂತ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನ ಇದಾಗಿದ್ದು, ಎ.ಜೆ.ಆಸ್ಪತ್ರೆಯು ದೇಶದಲ್ಲಿಯೇ ಈ ಸೌಲಭ್ಯವನ್ನು ಹೊಂದಿರುವ 4ನೇ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links