ಮೋದಿ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ: ಹೊರಟ್ಟಿ

Source Credit Oneindia.com

Hubballi

oi-Puttappa Koli

|

ಹುಬ್ಬಳ್ಳಿ, ಡಿಸೆಂಬರ್ 22: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮುನ್ನ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು, ಸಾಧಕ ಬಾಧಕಗಳ ಪರಿಶೀಲನೆ ನಡೆಸದೆ ದಿಢೀರ್ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಹೊರಟ್ಟಿಯವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದೆ. ದೇಶದ ಪ್ರಧಾನಿಯಾದವರಿಗೆ ಹಾಗೂ ಗೃಹ ಸಚಿವರಿಗೆ ಪೌರತ್ವ ಕಾಯ್ದೆಯ ಕುರಿತು ಜಾಗೃತಿ ವಹಿಸಬೇಕಿತ್ತು, ಒಂದು ಸಮುದಾಯವನ್ನು ಬಿಟ್ಟು ಕಾಯಿದೆ ರೂಪಿಸಿರುವುದು ಬೇರೆ ಅರ್ಥ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುವ ವೇಳೆ ಗೋಲಿಬಾರ್ ನಡೆಸಿರುವುದು ದುರ್ದೈವದ ಸಂಗತಿ, ಪೊಲೀಸರು ಆತ್ಮ ರಕ್ಷಣೆಗೆ ಮಾಡಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.

2008 ರಲ್ಲಿ ಇದೇ ಬಿಜೆಪಿ ಸರ್ಕಾರವಿದ್ದಾಗ ಗೊಬ್ಬರಕ್ಕಾಗಿ ಪ್ರತಿಭಟನೆ ಸಂದರ್ಭದಲ್ಲಿಯೂ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು, ಇದರಿಂದ ಜನ ಸರ್ಕಾರದ ಮೇಲಿರುವ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಯಾವುದೇ ಸರ್ಕಾರವಿದ್ದಿದ್ದರೂ ಇದೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಪೌರತ್ವ ತಿದ್ದುಪಡಿ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪಕ್ಷ ರಾಜಕಾರಣದಿಂದ ಯಾವುದೇ ದೇಶ ಮುಂದುವರೆಯಲು ಸಾಧ್ಯವಿಲ್ಲ, ಈಗಿನ ಯಾವುದೇ ಪಕ್ಷದಲ್ಲಿ ಮೌಲ್ಯಗಳು ಉಳಿದಿಲ್ಲ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪೂಜಾರಿಯೇ ದೇವರು, ಭಕ್ತರೇ ಇಲ್ಲಿ ಪೂಜಾರಿಯ ದಾರಿಗೆ ಹಾಸು!

Sun Dec 22 , 2019
Source Credit Oneindia.com Pin it Email https://nirantharanews.com/%e0%b2%ae%e0%b3%8b%e0%b2%a6%e0%b2%bf-%e0%b2%86%e0%b2%a8%e0%b3%86-%e0%b2%a8%e0%b2%a1%e0%b3%86%e0%b2%a6%e0%b2%bf%e0%b2%a6%e0%b3%8d%e0%b2%a6%e0%b3%87-%e0%b2%a6%e0%b2%be%e0%b2%b0%e0%b2%bf-%e0%b2%8e/#Wg== Davanagere oi-Lekhaka By ದಾವಣಗೆರೆ ಪ್ರತಿನಿಧಿ | Published: Sunday, December 22, 2019, 17:54 [IST] ದಾವಣಗೆರೆ, ಡಿಸೆಂಬರ್.22: ದಲಿತರು ಅಂದರೆ ಅಸ್ಪೃಶ್ಯರು, ತುಳಿತಕ್ಕೆ ಒಳಗಾದವರು ಅನ್ನುವ ಮಾತಿದೆ. ಆದರೆ ಹರಪ್ಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ದಲಿತರೇ ಭಕ್ತರ ಪಾಲಿಗೆ ದೇವರ ಸಮಾನ. ದಲಿತ ಪೂಜಾರಿಯ ಪಾದಸ್ಪರ್ಶಕ್ಕಾಗಿ ಸಾವಿರಾರು ಭಕ್ತರು ಹಾತೊರೆಯುತ್ತಾರೆ. ಇಲ್ಲಿ ಪೂಜಾರಿ ಭಕ್ತರ ಮೇಲೆ ನಡೆದುಕೊಂಡು ಹೋದರೆ, ಭಕ್ತರ ಇಷ್ಟಾರ್ಥಗಳು ಈಡೇರುತ್ತವೇ ಎಂಬುದು ಇಲ್ಲಿನ ನಂಬಿಕೆಯಾಗಿದೆ. ಶಕ್ತಿದೇವತೆ ದಂಡಿ ದುಗಮ್ಮ ದೇವಿಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links