ಮೊದಲ ಬಾರಿಗೆ ವಾಸುಕಿ ವಿರುದ್ಧ ತಿರುಗಿ ಬಿದ್ದ ಶೈನ್.. ಮಾತಿಗೆ ಮಾತು ಕೊಟ್ಟ ವಾಸುಕಿ..

Source Credit RJ News Kannada

ಬಿಗ್ ಬಾಸ್ ಈ ಸೀಸನ್ ನಲ್ಲಿ ಮನೆಯಲ್ಲಿ ಆಪ್ತಮಿತ್ರರು ಎಂದೇ ಫೇಮಸ್ ಆಗಿರುವ ವಾಸುಕಿ ಹಾಗೂ ಶೈನ್ ನಡುವೆ ಭಿನ್ನಾಭಿಪ್ರಾಯ ಮೂಡಿ ಮಾತಿಗೆ ಮಾತು ಬೆಳೆಯುವ ಮಟ್ಟಕ್ಕೆ ಬಂದು ನಿಂತಿದೆ..

ಹೌದು ಶೈನ್ ಹಾಗೂ ವಾಸುಕಿ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಸ್ಪರ್ಧಿಗಳಲ್ಲಿ ಇಬ್ಬರು ಎನ್ನಲಾಗುತ್ತಿದೆ.. ಪ್ರೇಕ್ಷಕರ ಸಪೋರ್ಟ್ ಕೂಡ ಹೆಚ್ಚಾಗಿದೆ.. ಇಬ್ಬರು ಮೊದಲ ದಿನದಿಂದಲೂ ಕ್ಲೋಸ್ ಆಗಿದ್ದರು..‌ ಆದರೆ ಈ ನಡುವೆ ವಾಸುಕಿ ಮೈಂಡ್ ಗೇಮ್ ಆಡ್ತಾ ಇದಾರೆ ಶೈನ್ ಗೆ ಮೋಸ ಮಾಡಿದ್ದಾರೆ ಎಂದು ಚಂದನ್ ಆಚಾರ್ ಕೂಡ ಹೇಳಿದ್ದರು.. ಆದರೆ ಶೈನ್ ಮಾತ್ರ ಯಾವುದನ್ನು ಮನಸ್ಸಿಗೆ ಹಾಕಿಕೊಂಡಿರಲಿಲ್ಲ.. ಇಬ್ಬರ ಸ್ನೇಹ ಹಾಗೆ ಇತ್ತು.. ಆದರೆ ನಿನ್ನೆ ಮಧ್ಯರಾತ್ರಿ 1 ಗಂಟೆಯಲ್ಲಿ ಇಬ್ಬರ ನಡುವೆಯೂ ಮಾತಿನ ಜಟಾಪಟಿ ನಡೆದಿದೆ..

ಹೌದು ನಿನ್ನೆ ಟಾಸ್ಕ್ ಮಧ್ಯೆ ಈ ಘಟನೆ ನಡೆದಿದೆ.. ಈ ವಾರ ಶೈನ್ ಶೆಟ್ಟಿ ಮನೆಯ ಕ್ಯಾಪ್ಟನ್ ಆಗಿದ್ದರು.. ಮನೆಯಲ್ಲಿ ಇದ್ದ ತಂಡದಲ್ಲಿ ಒಂದು ತಂಡದ ಕ್ಯಾಪ್ಟನ್ ಆಗಿ ವಾಸುಕಿ ಇದ್ದರು..‌ ಮೊನ್ನೆ ಬಿಗ್ ಬಾಸ್ ಎರಡೂ ತಂಡಕ್ಕೆ ಚಟುವಟಿಕೆಯೊಂದನ್ನು ನೀಡಿದ್ದರು.. ಎದುರಾಳಿ ತಂಡಕ್ಕೆ ಕೊಟ್ಟಿದ್ದ ಕ್ಯೂಬ್ ಗಳನ್ನು ಮುಚ್ಚಿಡಬೇಕಾಗಿತ್ತು..

ಜೊತೆಗೆ ತಮ್ಮ ತಮ್ಮ ತಂಡದ ಕ್ಯೂಬ್ ಗಳನ್ನು ಕಂಡು ಹಿಡಿಯುವ ಜವಬ್ದಾರಿಯನ್ನು ನೀಡಲಾಗಿತ್ತು.. ಕಿತ್ತಾಟ ಜಗಳಗಳ ನಡುವೆ ಟಾಸ್ಕ್ ಹೇಗೋ ಸಾಗುತಿತ್ತು.. ಆದರೆ ನಿನ್ನೆ ಮಧ್ಯರಾತ್ರಿ ಇದೇ ಟಾಸ್ಕ್ ವಿಚಾರಕ್ಕೆ ಶೈನ್ ಹಾಗೂ ವಾಸುಕಿ ನಡುವೆ ಮಾತು ಶುರು ಆಗಿದೆ..

ಭೂಮಿ ಕೈಯಲ್ಲಿ ಇದ್ದ ಕ್ಯೂಬ್ ಅನ್ನು ವಾಸುಕಿ ಕಂಡುಹಿಡಿದು ಕ್ಯಾಪ್ಟನ್ ಗೆ ತಿಳಿಸಿದ್ದಾರೆ.. ಆ ಸಮಯದಲ್ಲಿ ಕ್ಯಾಪ್ಟನ್ ಬಂದು ನೋಡಿದ್ದಾರೆ.. ಆದರೆ ಒಬ್ಬರ ಕೈಯಲ್ಲಿ 5 ನಿಮಿಷಗಳ ವರೆಗೆ ಕ್ಯೂಬ್ ಇಟ್ಟುಕೊಳ್ಳಬಹುದಾಗಿದೆ.. ಅದರಂತೆ ಅಂದಾಜಿನ 5 ನಿಮಿಷದ ಬಳಿಕ ಭೂಮಿ ಅದನ್ನು ವರ್ಗಾಯಿಸಿದ್ದಾರೆ.. ಆದರೆ ವಾಸುಕಿ ನಾನು ಹೇಳಿದ ಕೂಡಲೆ ಅದನ್ನು ಭೂಮಿ ಇಂದ ತೆಗೆದುಕೊಳ್ಳಬೇಕಿತ್ತು.. ಅದಾಗಲೇ 5 ನಿಮಿಷ ಆಗಿತ್ತು ಎಂದು ಶೈನ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಅಷ್ಟೇ ಅಲ್ಲದೆ ನಾನು ಬಹಳಷ್ಟು ಬಾರಿ ಕರೆದೆ ನೀವ್ ಬರಲೇ ಇಲ್ಲ ಎಂದಿದ್ದಾರೆ..

ಆಗ ಮಾತನಾಡಿದ ಶೈನ್ “ವಾಸುಕಿ ನೀವ್ ನನ್ನ ಒಂದೇ ಬಾರಿ ಕರೆದಿದ್ದು, ಆ ಒಂದು ಸಲ ನಾನ್ ಬಂದ್ ನೋಡಿದಿನಿ ಎಂದರು ಶೈನ್.. ಆಗ ಮಾತನಾಡಿದ ವಾಸುಕಿ “ನೀವ್ ಹೇಳಿದಾಗ ಬಂದ್ ನೋಡಕ್ ಆಗಲ್ಲ ಅಂತ ಹೇಳಿದ್ರಿ ಎಂದರು.. ಮತ್ತೆ ಮಾತನಾಡಿದ ಶೈನ್ “ನೀವು ನನ್ನ್ ಹತ್ರ ಬಂದ್ ಹೇಳಿದ್ದು ಒಂದೇ ಸಲ ಆ ಸಮಯದಲ್ಲಿ ನಾನು ಬಂದು ನೋಡಿದ್ದೀನಿ.. ಆದರೆ ನೀವು 20 ಸೆಕೆಂಡ್ ಆಯ್ತು.. 30 ಸೆಕೆಂಡ್ ಆಯ್ತು ಅವರತ್ರ ಇರೋ ಕ್ಯೂಬ್ ಇಸ್ಕೊಳಿ ಅಂದ್ರೆ ಹೇಗೆ ಇಸ್ಕೋಳಕೆ ಆಗತ್ತೆ ವಾಸುಕಿ ಎಂದರು.. ಇದಕ್ಕೆ ಮತ್ತೆ ವಾಸುಕಿ “5 ನಿಮಿಷ ಆಗಿಲ್ಲ ಅಂತ ನಿಮಗೆ ಹೇಗೆ ಗೊತ್ತಾಗತ್ತೆ.. ಅವರು ಯಾವಾಗ ಎತ್ತಿಕೊಂಡು ಹೋದರು ಅಂತ ನಿಮಗೆ ಹೇಗೆ ಗೊತ್ತಾಗತ್ತೆ.. 5 ನಿಮಿಷ ಹೇಗ್ ಗೊತ್ತಾಗತ್ತೆ ಅಂತ ಶೈನ್ ಅನ್ನ ಪ್ರಶ್ನೆ ಮಾಡಿದರು..

ಮಾತಿಗೆ ಮಾತು ಬೆಳಿತು.. ವಾಸುಕಿ ತನ್ನದೇ ಸರಿ ಎಂದರು.. ಶೈನ್ ತಾನು ತಪ್ಪು ಮಾಡಿಲ್ಲ ಎಂದರು..‌ ಕೊನೆಗೆ ಸುಮ್ ಸುಮ್ನೆ ಮಾತಾಡ್ ಬೇಡಿ ವಾಸುಕಿ.. ಅದು ಸರಿ ಇಲ್ಲ.. ನಾನು ಸರಿಯಾಗಿ ಕೆಲಸ ಮಾಡಿದ್ದೀನಿ ಎಂದ ಶೈನ್ ಮಾತಿಗೆ.. 5 ನಿಮಿಷ ಆಗಿದೆ ಅಂತ ನಿಮಗೆ ಹೇಗ್ ಗೊತ್ತಾಗತ್ತೆ ಅಂತ ವಾಸುಕಿ ಪ್ರಶ್ನೆ ಹಾಕಿದರು.. ಮರಳಿ ನೀವು ಹೇಗೆ ಅಂದಾಜಲ್ಲಿ ಹೇಳ್ತೀರೋ ನಾನು ಕೂಡ ಅಂದಾಜಿನಲ್ಲಿ ಲೆಕ್ಕ ಹಾಕ್ತೀನಿ ಅಷ್ಟೇ ಎಂದರು.. ಯಾರ್ ಎಲ್ಲಿ ತೆಗೆದುಕೊಳ್ತಾರೆ ಅನ್ನೋದನ್ನು ನೋಡೋದು ನನ್ನ ಕರ್ತವ್ಯ ಅಲ್ಲ ವಾಸುಕಿ ಎಂದರು..‌ ಹೀಗೆ ಒಂದತ್ತು ನಿಮಿಷ ಇಬ್ಬರ ನಡುವೆ ಅಡುಗೆ ಮನೆಯಲ್ಲಿ ವಾದ ಪ್ರತಿವಾದಗಳು ನಡೆದವು.. ಆತಕ್ಷಣ ವಾಸುಕಿ ಅಲ್ಲಿಂದ ಹೊರ ಹೋದರು.. ಆನಂತರ ಇಬ್ಬರು ಸುಮ್ಮನಾದರೂ ಕೂಡ ಇಬ್ಬರೂ ಕೂಡ ಪ್ರಬಲ ಸ್ಪರ್ಧಿಗಳೇ ಆದ್ದರಿಂದ ಮೊದಲ ಬಾರಿಗೆ ವೈಮನಸ್ಸು ಬಂದಿರೋದ್ರಿಂದ ಒಳಗೆ ಬಿಗ್ ಬಾಸ್ ವಿನ್ನರ್ ಪಟ್ಟಕ್ಕಾಗಿ ಶೀತಲ ಸಮರ ನಡೆಯೋದಂತೂ ಖಂಡಿತ ಎನ್ನಬಹುದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಉಡುಪಿ ಸರ್ವಜ್ಞ ಪೀಠವೇರಿದ ಆದಮಾರು ಮಠದ ಈಶಪ್ರಿಯ ತೀರ್ಥರು

Sat Jan 18 , 2020
Source Credit NewsKannada.com YK   ¦    Jan 18, 2020 09:55:36 AM (IST) ಉಡುಪಿ: ಆದಮಾರು ಮಠದ ಈಶಪ್ರಿಯ ತೀರ್ಥರು ಕೃಷ್ಣಮಠದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಆದಮಾರು ಮಠದ ಪರ್ಯಾಯ ಆರಂಭಗೊಂಡಿದೆ. ಇಂದು ಬೆಳಿಗ್ಗೆ 10ಗಂಟೆಗೆ ಶ್ರೀಗಳು ಕೃಷ್ಣನಿಗೆ  ಮೊದಲ ಮಹಾಪೂಜೆಯನ್ನು ನೆರವೇರಿಸಲಿದ್ದಾರೆ. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.  ರಾಜಾಂಗಣದಲ್ಲಿ ನಡೆಯುವ ದರ್ಬಾರ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಪೀಠಾರೀಓಹಣ ಮುನ್ನಾ ವೈಭವದ ಮೆರವಣಿಗೆ ನಡೆಯಿತು. Source […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links