ಮೈಸೂರಿನಲ್ಲಿ ವಿಶೇಷವಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ನಿಖಿಲ್ ರೇವತಿ.. ಫೋಟೋ ಗ್ಯಾಲರಿ ನೋಡಿ..

Source Credit RJ News Kannada

ದೊಡ್ಡ ಗೌಡರ ಮೊಮ್ಮಗ ನಿಖಿಲ್ ಹಾಗೂ ರೇವತಿ ಅವರ ಮದುವೆಯ ನಿಶ್ಚಿತಾರ್ಥ ಮೊನ್ನೆ ಮೊನ್ನೆಯಷ್ಟೇ ಅದ್ಧೂರಿಯಾಗಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ‌ ನೆರವೇರಿದೆ.. ಮದುವೆ ದಿನಾಂಕ ಕೂಡ ನಿಗದಿಯಾಗಿದ್ದು ಏಪ್ರಿಲ್ 17 ರಂದು ಚನ್ನಪಟ್ಟಣದಲ್ಲಿ ಅದ್ಧೂರಿ ವೇದಿಕೆಯಲ್ಲಿ ಜನಗಳ ನಡುವೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

ಇನ್ನು ಇದೀಗ ನಿಶ್ಚಿತಾರ್ಥವಾದ ನವ ಜೋಡಿಗೆ ವ್ಯಾಲೆಂಟೈನ್ಸ್ ಡೇ ಸಂಭ್ರಮ.. ನಿಖಿಲ್ ಹಾಗೂ ರೇವತಿ ಅವರು ತಮ್ಮ ಮೊದಲ ವ್ಯಾಲೆಂಟೈನ್ಸ್ ಡೇ ಅನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ..

ಹೌದು ನಿಖಿಲ್ ಹಾಗೂ ರೇವತಿ ಜೋಡಿ ತಮ್ಮ ಮೊದಲ ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ನೆನಪಿನಲ್ಲಿರಬೇಕೆಂದು ಮೈಸೂರಿಗೆ ಆಗಮಿಸಿ ಅಲ್ಲಿ ಆಚರಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೆ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಸನ್ನಿಧಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ನಂತರ ಬೆಂಗಖೂರಿಗೆ ತೆರಳಿದ್ದಾರೆ..

ನಂತರ ಬೆಂಗಳೂರಿನ ಆರ್ ಆರ್ ನಗರದ ರಾಜರಾಜೇಶ್ವರಿ ನಗರದಲ್ಲಿನ ರಾಜರಾಜೇಶ್ವರಿ ತಾಯಿ ಸನ್ನಿಧಿಗೆ ಭೇಟಿ ಕೊಟ್ಟು ಅಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ.. ಸದ್ಯ ರಾಜರಾಜೇಶ್ವರಿ ದೇವಾಲಯದಲ್ಲಿ ನೆಲದ ಮೇಲೆ ಕೂತು ನಿಖಿಲ್ ಹಾಗೂ ರೇವತಿ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಎಲ್ಲಾ ಲವರ್ ಗಳು ಕಾಫಿ ಡೇ, ಪಬ್ಬು ಅಂತ ಸುತ್ತುತ್ತಿದ್ದರೆ.. ನಿಖಿಲ್ ಜೋಡಿ ವಿಶೇಷವಾಗಿ ಟೆಂಪಲ್ ರನ್ ಮಾಡುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸಿಕೊಂಡಿದ್ದಾರೆ..

ಈ ಬಗ್ಗೆ ನಿಖಿಲ್ ಅವರು “ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ಆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾನು ಹಾಗು ರೇವತಿಯವರು ಅಮ್ಮನ ಆಶೀರ್ವಾದ ಪಡೆದ ಸುಂದರ ಕ್ಷಣಗಳು.” ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ತಾಂಡಗಳ ಅಭಿವೃದ್ಧಿಗಾಗಿ 100 ಕೋಟಿ ಮೀಸಲು: ಸಿಎಂ

Fri Feb 14 , 2020
Source Credit Oneindia.com Pin it Email https://nirantharanews.com/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf%e0%b2%b6%e0%b3%87%e0%b2%b7%e0%b2%b5%e0%b2%be%e0%b2%97%e0%b2%bf-%e0%b2%b5%e0%b3%8d/#Wg== Davanagere oi-Lekhaka By ದಾವಣಗೆರೆ ಪ್ರತಿನಿಧಿ | Published: Friday, February 14, 2020, 21:13 [IST] ದಾವಣಗೆರೆ, ಫೆಬ್ರವರಿ 14: ಸಂತ ಸೇವಾಲಾಲ್ ರ 281 ನೇ ಜಯಂತಿಯನ್ನು ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಆಚರಿಸಲಾಯಿತು. ಸೇವಾಲಾಲ್ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಂದಿನ ಎರಡು ವರ್ಷಗಳಲ್ಲಿ ಲಂಬಾಣಿ ತಾಂಡಗಳನ್ನು ಕಂದಾಯ ತಾಂಡಗಳಾಗಿ ಮಾಡುತ್ತೇನೆಂದು ಭರವಸೆ ನೀಡಿದರು. ಲಂಬಾಣಿ ಕಲೆ, ಸಂಸ್ಕೃತಿ, ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಲಂಬಾಣಿ ಕಲೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links