ಮೇಕಪ್‌ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ

Source Credit Kannada.boldsky.com

ಸ್ವಚ್ಛಗೊಳಿಸುವುದು ತಮಾಷೆಯಲ್ಲ!

ನೀವು ಒಂದು ಸಲ ಮೇಕಪ್ ಹಾಕಿಕೊಂಡ ಬಳಿಕ ಹೊರಗಡೆ ಹೋದರೆ ಆಗ ಖಂಡಿತವಾಗಿಯೂ ಧೂಳು ಮುಖದ ಮೇಲೆ ಬಂದು ಕುಳಿತುಕೊಳ್ಳುವುದು. ಚರ್ಮದ ಮೇಲೆ ಧೂಳು, ಕೊಳೆ ಮತ್ತು ಕಲ್ಮಷವು ಸೇರಿಕೊಳ್ಳುವುದು. ಇದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದು ಅತೀ ಅಗತ್ಯವಾಗಿ ಇರುವುದು. ಇದಕ್ಕೆ ಬೇಕಾದಲ್ಲಿ ನೀವು ಮಾಸ್ಕ್ ಬಳಸಬಹುದು. ಮೇಕಪ್ ಹಚ್ಚಿಕೊಂಡು ಸ್ವಚ್ಛ ಮಾಡಿದರೆ ಆಗ ಅದು ಚರ್ಮದ ಮೇಲಿನ ಪದರ ಹೆಚ್ಚಿಸುವುದು. ಇದರಿಂದಾಗಿ ಧೂಳಿನಿಂದಾಗಿ ಮೊಡವೆಗಳು ಮೂಡಬಹುದು. ಚರ್ಮಕ್ಕೆ ಮೇಕಪ್ ಎನ್ನುವುದು ಬಾಹ್ಯ ಅಂಶವಾಗಿರುವುದು. ಇದು ಧೂಳಿನಂತೆ ಅದಕ್ಕೆ ಒಂದು ಬಾಹ್ಯ ಅಂಶ. ಮೇಕಪ್ ಚರ್ಮದ ರಂಧ್ರಗಳ ಮೇಲೆ ಕುಳಿತುಕೊಂಡು ಮೊಡವೆ ಉಂಟು ಮಾಡುವುದು.

ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು

ಮೇಕಪ್ ಮುಖದ ಮೇಲೆ ಹಚ್ಚಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಒಂದು ಅಹಿತಕರ ಭಾವನೆ ಉಂಟು ಮಾಡುವುದು. ಮುಖದ ಮೇಲಿನ ಮೇಕಪ್ ಹಾಸಿಗೆ, ತಲೆದಿಂಬು ಮತ್ತು ಹೊದಿಕೆಗೆ ಅಂಟಿಕೊಳ್ಳುವುದು. ತುಂಬಾ ಅನ್ಯೋನ್ಯತೆಯ ಸಮಯದಲ್ಲಿ ಮೇಕಪ್ ಇದ್ದರೆ ಆಗ ಫೌಂಡೇಶನ್, ಲಿಪ್ ಸ್ಟಿಕ್ ನಿಮ್ಮ ಹಾಗೂ ಆತನ ಮೈಮೇಲೆ ಹರಡುವುದು ಮತ್ತು ಇದರಿಂದ ನೀವು ವಿಚಿತ್ರವಾಗಿ ಕಾಣಿಸಬಹುದು. ಅದೇ ರೀತಿಯಾಗಿ ಬ್ಯಾಕ್ಟೀರಿಯಾ ಕೂಡ ಇದರಿಂದ ಹರಡಬಹುದು. ಮೇಕಪ್ ಜತೆಗೆ ಅಂತಿಕೊಂಡಿರುವ ಎಣ್ಣೆಯಂಶವು ಚರ್ಮದಲ್ಲಿ ಮೊಡವೆ ಉಂಟು ಮಾಡುವುದು. ಕೆಲವರಿಗೆ ಮೊದಲ ಡೇಟ್‌ಗೆ ಹೋಗುವ ವೇಳೆ ಮೇಕಪ್ ಧರಿಸಿಕೊಂಡಿರಬೇಕು ಎಂದು ಆತ್ಮವಿಶ್ವಾಸವಿಲ್ಲದೆ ಹೇಳಬಹುದು. ಆದರೆ ನಿಮ್ಮ ಸಂಗಾತಿಯು ನಿಮ್ಮನ್ನು ಮೆಚ್ಚಿದ್ದರೆ ಆಗ ಈ ಕೃತಕ ಸೌಂದರ್ಯದ ಅಗತ್ಯವಿಲ್ಲ.

ಜಿಮ್ ಗೆ ಹೋಗುವುದು

ಮೇಕಪ್ ಹಾಕಿಕೊಂಡು ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದು ತುಂಬಾ ಕೆಟ್ಟ ವಿಚಾರ. ಯಾಕೆಂದರೆ ವ್ಯಾಯಾಮದ ವೇಳೆ ಹೆಚ್ಚಿನ ಬೆವರು ಹರಿಯುವುದು. (ನೀವು ವಾಟರ್ ಪ್ರೂಫ್ ಮೇಕಪ್ ಧರಿಸಿಕೊಂಡರೆ ಅದು ಚಿಂತೆ ಇಲ್ಲ). ಆದರೆ ಚರ್ಮದ ದೃಷ್ಟಿಯಿಂದ ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ಯಾಕೆಂದರೆ ಇದು ಚರ್ಮದಲ್ಲಿ ಮೊಡವೆ ಉಂಟು ಮಾಡುವುದು. ವ್ಯಾಯಾಮದಿಂದ ಚರ್ಮವು ಬಿಸಿಯಾಗುವುದು, ಮೇದೋಗ್ರಂಥಿಗಳ ಸ್ರಾವ ಮೆತ್ತಗಾಗಿಸುವುದು ಮತ್ತು ಇವೆರಡು ಮಿಶ್ರಣವಾಗಿ ಚರ್ಮದ ರಂಧ್ರಗಳನ್ನು ತುಂಬುವುದು. ಇದರಿಂದಾಗಿ ಮುಖದ ಮೇಲೆ ಮೊಡವೆ ಹಾಗೂ ಬೊಕ್ಕೆಗಳು ಮೂಡುವುದು.

ದೀರ್ಘ ಸಮಯದ ವಿಮಾನ ಪ್ರಯಾಣ ವೇಳೆ

ಸಣ್ಣ ಅವಧಿಯ ವಿಮಾನ ಪ್ರಯಾಣವಾಗಿದ್ದರೆ ಮೇಕಪ್ ಹಚ್ಚುವುದರಿಂದ ಹೆಚ್ಚೇನೂ ಸಮಸ್ಯೆ ಇಲ್ಲ. ಆದರೆ ದೀರ್ಘಕಾಲದ ಪ್ರಯಾಣವಾಗಿದ್ದರೆ ಆಗ ನಿದ್ರೆ ಬರುವ ಕಾರಣದಿಂದಾಗಿ ಮೇಕಪ್ ಅನ್ನು ಧರಿಸಲೇಬಾರದು. ಮೇಕಪ್ ಹಚ್ಚಬಾರದು ಯಾಕೆಂದರೆ ವಿಮಾನದ ಕ್ಯಾಬಿನ್ ಚರ್ಮದಲ್ಲಿರುವಂತಹ ಹೆಚ್ಚಿನ ಎಲ್ಲಾ ಮೊಶ್ಚಿರೈಸ್ ಅನ್ನು ಹೀರಿಕೊಳ್ಳುವುದು. ಇದರಿಂದ ನಿರ್ಜಲೀಕರಣ ಉಂಟಾಗುವುದು. ವಿಮಾನದಲ್ಲಿನ ಸಮಯವನ್ನು ಚರ್ಮದ ಆರೈಕೆಗೆ ಬಳಸಿಕೊಳ್ಳಿ. ನೀವು ಮಾಸ್ಕ್ ಇತ್ಯಾದಿಗಳನ್ನು ಬಳಸಬೇಡಿ. ಇದು ನಿಮ್ಮ ಚರ್ಮಕ್ಕೆ ಮತ್ತಷ್ಟು ಹಾನಿ ಉಂಟುಮಾಡುವುದು.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎರಡು ವರ್ಷವಾಯ್ತು, ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣ ಏನಾಯ್ತು?

Sat Dec 14 , 2019
Source Credit Oneindia.com Pin it Email https://nirantharanews.com/%e0%b2%ae%e0%b3%87%e0%b2%95%e0%b2%aa%e0%b3%8d%e2%80%8c-%e0%b2%b9%e0%b2%9a%e0%b3%8d%e0%b2%9a%e0%b2%bf%e0%b2%a6%e0%b2%be%e0%b2%97-%e0%b2%8e%e0%b2%82%e0%b2%a6%e0%b2%bf%e0%b2%97%e0%b3%82-%e0%b2%88/#eHBhcmVzaG1lc3R ಕೋಮುಗಲಭೆ ವೇಳೆ ಕೊಲೆ ಮಾಡಿದ್ದ ಶಂಕೆ ಕೋಮುಗಲಭೆ ವೇಳೆಯೇ ಅನ್ಯಕೋಮಿನ ಜನರು ಕೊಲೆ ಮಾಡಿರಬಹುದೆಂದು ಆರೋಪಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದು, ಹಲವೆಡೆ ಗಲಭೆಗೆ ಸಹ ಕಾರಣವಾಗಿತ್ತು. ಘಟನೆ ನಡೆದ ವೇಳೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ನಾಯಕರು ಬೀದಿಗಿಳಿದು, ‘ರಾಜ್ಯ ಸರ್ಕಾರದ ಮೇಲೆ ತಮಗೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಒತ್ತಾಯ ಮಾಡಿದ್ದರ ಪರಿಣಾಮ 2017ರ ಡಿಸೆಂಬರ್ 13ರಂದು ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿತ್ತು. ಆದರೆ, ಸಿಬಿಐ ತನಿಖೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links