ಮೂಲೆ ಗುಂಪಾದ ದೀಪಿಕಾ.. ಇದಕ್ಕೆ ಹೇಳೋದು ಟೈಮ್‌ ಅಂತ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರಲ್ಲಿ ಮನೆಯಲ್ಲಿ‌ ಒಂದು ಕಾಲದಲ್ಲಿ ಅಂದರೆ ಕೆಲವೇ ವಾರಗಳ ಹಿಂದೆಯಷ್ಟೇ ಹೈಲೈಟ್ ಆಗಿದ್ದ ದೀಪಿಕಾ ಇಂದು ಮೂಲೆಗುಂಪಾಗಿದ್ದಾರೆ.‌.

ಮೂರು ವಾರಗಳ ಹಿಂದೆಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸದಸ್ಯರಲ್ಲಿ ದೀಪಿಕಾರದ್ದೇ ಪ್ರಮುಖ ಆಕರ್ಷಣೆಯಾಗಿತ್ತು.. ಆದರೆ ಟೈಮ್ ಅನ್ನೋದು ಕೆಟ್ಟರೆ ಏನ್ ಬೇಕಾದರೂ ಆಗಬಹುದು ಎಂಬುದಕ್ಕೆ ದೀಪಿಕಾ ಅವರೇ ನೈಜ್ಯ ಉದಾಹರಣೆ..

ಹೌದು ತಮ್ಮ ಖಡಕ್ ನಡವಳಿಕೆ ಹಾಗೂ ಡ್ರೆಸ್ಸಿಂಗ್ ಸ್ಟೈಲ್ ಮೂಲಕವೇ ಎಲ್ಲರಿಗೂ ಇಷ್ಟವಾಗಿದ್ದರು.. ಮನೆಯ ಸದಸ್ಯರು ಕೂಡ ದೀಪ್ಸ್ ದೀಪ್ಸ್ ಎಂದು ಹಿಂದೆ ಬಿದ್ದಿದ್ದರು.. ಆದರೆ ಮೂರು ವಾರಗಳಿಂದ ದೀಪಿಕಾ ಮೂಲೆಗುಂಪಾದಂತೆ ಕಾಣುತ್ತಿದೆ.. ದೀಪಿಕಾ ಅವರ ತಾಯಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಪ್ರೇಕ್ಷಕರ ಸಪೋರ್ಟ್ ಕೂಡ ಸ್ವಲ್ಪ ಕಡಿಮೆ ಯಾಗಿತ್ತು ಎಂಬುದು ಸುಳ್ಳಲ್ಲ..

ಆನಂತದ ಶೈನ್ ಕೂಡ ದೀಪಿಕಾರಿಂದ ದೂರ ಸರಿದರು.. ಶೈನ್ ತಾಯಿ ಬಂದು ಸೂಕ್ಷ್ಮವಾಗಿ ಮಗನಿಗೆ ಬುದ್ದಿ ಹೇಳಿದ ನಂತರ ದೀಪಿಕಾರಿಂದ ಸಂಪೂರ್ಣವಾಗಿ ದೂರಾದರು..

ಅಲ್ಲಿಯವರೆಗೂ ಶೈನ್ ಹಾಗೂ ದೀಪಿಕಾ ನಡುವಿನ ಕಂಟೆಂಟ್ ಗಳನ್ನು ಹೆಚ್ಚಾಗಿ ತೋರುತ್ತಿದ್ದ ಬಿಗ್ ಬಾಸ್ ಆನಂತರ ಅವರು ಕೂಡ ಕೊಂಚ ಅವಾಯ್ಡ್ ಮಾಡಿದರೆನ್ನಬಹುದು.. ಟೈಮ್ ಕೆಡೋದು ಅನ್ನೋದು ಇದಕ್ಕೆ ಇರಬೇಕು.. ಅಂದ ಚೆಂದವಾಗಿ ರೆಡಿ ಆಗ್ತಿದ್ದ ದೀಪಿಕಾರ ಬಾಯಿಗೆ ಪೆಟ್ಟು ಬಿತ್ತು..

ಇಷ್ಟು ಸಾಲದು ಎಂಬಂತೆ ಮೊನ್ನೆ ತೀವ್ರ ಜ್ವರದಿಂದಲೂ ಕೂಡ ದೀಪಿಕಾ ಬಳಲಿದರು. ಇದೇ ಕಾರಣಕ್ಕೆ ಕೆಲ ಟಾಸ್ಕ್‌ ಕೂಡ ದೀಪಿಕಾ ಮಾಡಲಿಲ್ಲ.. ಕೆಲ ವಾರಗಳ ಹಿಂದೆ ದೀಪಿಕಾ ಫಿನಾಲೆಯಲ್ಲಿ ಗೆದ್ದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುವಂತಿದ್ದ ಸಂದರ್ಭ ಇದೀಗ ಫಿನಾಲೆಗೆ ಬರೋದೆ ಡೌಟ್ ಎನ್ನುವಂತಾಗಿದೆ.. ಬಹುತೇಕರ ನೆಚ್ಚಿನ ಸ್ಪರ್ಧಿಯಾಗಿದ್ದ ದೀಪಿಕಾ ಇಂದು ಮೂಲೆಗುಂಪಾಗಿದ್ದಾರೆನ್ನಬಹುದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಈ ವಾರದ ಎಲಿಮಿನೇಷನ್ ನಿಂದ ಮೊದಲು ಸೇಫ್ ಆದ ಇಬ್ಬರು ಸ್ಪರ್ಧಿಗಳು ಇವರೇ ನೋಡಿ..

Sat Jan 18 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರ 14ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದ್ದು, ಬಿಗ್ ಮನೆಯಲ್ಲಿ ಮೊದಲಿಗೆ ಇಬ್ಬರು ಸದಸ್ಯರು ಸೇಫ್ ಆಗಿದ್ದಾರೆ.. ಹೌದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಾರದ ಮನೆಯ ಆಗುಹೋಗುಗಳನ್ನು ಚರ್ಚಿಸಿ ನಂತರ ಎಲಿಮಿನೇಷನ್ ಪ್ರಕ್ರಿಯೆ ಶುರು ಮಾಡಿದ್ದಾರೆ.. Pin it Email https://nirantharanews.com/%e0%b2%ae%e0%b3%82%e0%b2%b2%e0%b3%86-%e0%b2%97%e0%b3%81%e0%b2%82%e0%b2%aa%e0%b2%be%e0%b2%a6-%e0%b2%a6%e0%b3%80%e0%b2%aa%e0%b2%bf%e0%b2%95%e0%b2%be-%e0%b2%87%e0%b2%a6%e0%b2%95%e0%b3%8d%e0%b2%95/#UGhvdG9HcmlkXzE ಅದರಂತೆ ಮೊದಲಿಗೆ ಅತಿ ಹೆಚ್ಚು ಓಟ್ ಪಡೆದ ಇಬ್ಬರು ಸದಸ್ಯರನ್ನು ಸೇಫ್ ಮಾಡಲಾಗಿದೆ.. ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ಇಲ್ಲದ ಕಾರಣ ಈ ವಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links