ಮೂರ್ಜೆ ಸುನಿತಾ ಪ್ರಭು ಪ್ರಧಾನ ಮಂತ್ರಿ ಬಾಲ ಪುರಸ್ಕಾರ  ಪ್ರಶಸ್ತಿಗೆ ಆಯ್ಕೆ

Source Credit NewsKannada.com


HSA
  ¦   


Jan 16, 2020 06:15:51 PM (IST)

ಮಂಗಳೂರು: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾದ ಪ್ರದಾನ ಮಂತ್ರಿ ಬಲ ಪುರಸ್ಕಾರ ಪ್ರಶಸ್ತಿ ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು ರವರಿಗೆ ಒಲಿದಿದೆ. ಈ ಪುರಸ್ಕಾರ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಪ್ರತಿಭಾನ್ವಿತೆಯಾಗಿರುವ ಈಕೆ 2019 ರಲ್ಲಿ ಫಿನೀಕ್ಸ್ (ಅಮೇರಿಕಾದಲ್ಲಿ ) ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ ಲಭಿಸಿದೆ. ಪ್ರಸಕ್ತ ಮಂಗಳೂರಿನ ಸಿಎಫ್ ಎಎಲ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮೂರ್ಜೆ ಸುನಿತಾ ಪ್ರಭು ಬೆಳ್ತಂಗಡಿಯ ಉದ್ಯಮಿ ವಿನಾಯಕ ವುಡ್ ಇಂಡಸ್ಟ್ರೀಸ್ ನ ಮಾಲಕ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿ. ಉಜಿರೆ ಶ್ರೀ ಮಂಜುನಾಥೇಶ್ವರ ಸಿ ಬಿ ಯಸ್ ಸಿ ಶಾಲೆಯ ಹಳೆ ವಿದ್ಯಾರ್ಥಿನಿ.

 ಜನವರಿ 22ರಂದು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ಅವರಿಂದ ಈ ಬಾಲ ಪುರಸ್ಕಾರ ಪಡೆಯಲಿದ್ದಾರೆ . ಜೊತೆಗೆ ಜನವರಿ 26 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲೂ ಭಾಗವಹಿಸಲಿದ್ದು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಪೋಷಕರಿಂದ ದೇಶ ವಿದೇಶಗಳ ಗಣ್ಯ ಅತಿಥಿಗಳನ್ನುಭೇಟಿಯಾಗುವ ಅವಕಾಶವಿದೆ. 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಚೈತ್ರಾ ಕೊಟ್ಟೂರ್ ಅವರಿಗೆ ಸಿಕ್ತು ರವಿ ಬೆಳೆಗೆರೆ ಅವರಿಂದ ಭರ್ಜರಿ ಉಡುಗೊರೆ..

Thu Jan 16 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರಲ್ಲಿ ಎರಡನೇ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ರವಿ ಬೆಳೆಗೆರೆ ಅವರು ಇದ್ದದ್ದು ಒಂದೇ ವಾರವಾದರೂ ಮನೆಯ ಎಲ್ಲಾ ಸದಸ್ಯರಿಗೆ ಬಹಳ ಕ್ಲೋಸ್ ಆಗಿದ್ದರು.. ಆರೋಗ್ಯ ಸಮಸ್ಯೆ ಇದ್ದ ಕಾರಣ ಸದಸ್ಯರಾಗಿ ಬಂದವರು ಅಥಿತಿಯಾಗಿ ಒಂದೇ ವಾರಕ್ಕೆ ಮರಳಿದರು.. Pin it Email https://nirantharanews.com/%e0%b2%ae%e0%b3%82%e0%b2%b0%e0%b3%8d%e0%b2%9c%e0%b3%86-%e0%b2%b8%e0%b3%81%e0%b2%a8%e0%b2%bf%e0%b2%a4%e0%b2%be-%e0%b2%aa%e0%b3%8d%e0%b2%b0%e0%b2%ad%e0%b3%81-%e0%b2%aa%e0%b3%8d%e0%b2%b0%e0%b2%a7/#UGhvdG9HcmlkXzE ಇನ್ನು ಇದ್ದ ಒಂದು ವಾರದಲ್ಲಿ ತಮ್ಮ ಜೀವನದ ಅನೇಕ ಅನುಭವಗಳನ್ನು ಸ್ಟಾರ್ ನಟರ ಜೀವನ ಕತೆಗಳನ್ನು ಹಂಚಿಕೊಂಡಿದ್ದರು.. ಮನೆಯ ಸದಸ್ಯರೂ ಕೂಡ ರವಿ ಬೆಳೆಗೆರೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links