ಮಿನ್ನಿ ಮೌಸ್ ಮಹಿಳೆಯ ಫೈಟ್ ವೀಡಿಯೋ ವೈರಲ್

Source Credit Kannada.boldsky.com

Trends N Style

oi-Reena TK

|

ಡಿಸ್ನಿಯ ಜನಪ್ರಿಯ ಪಾತ್ರ ಮಿನ್ನಿ ಮೌಸ್ ರೀತಿ ವೇಷ ಧರಿಸಿದ ಮಹಿಳೆ ಸೆಕ್ಯೂರಿಟಿ ಮಹಿಳೆಯನ್ನು ಎಳೆದು ಹೊಡೆಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವೀಡಿಯೋ ಹತ್ತು ಸಾವಿರಕ್ಕೂ ಅಧಿಕ ರೀಟ್ವೀಟ್ ಆಗಿದ್ದು ನೆಟ್ಟಿಗರು ಮನಸ್ಸಿಗೆ ತೋಚಿದ್ದು ಕಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ಈ ಮಿನ್ನಿ ಮೌಸ್ ಪಾತ್ರದ ಮಹಿಳೆ, ಸೆಕ್ಯೂರಿಟಿ ಮಹಿಳೆಗೆ ಹೊಡೆಯಲು ಕಾರಣವೇನೆಂದು ಗೊತ್ತಿಲ್ಲ, ಆದರೆ ಈ ವೀಡಿಯೋ ನೋಡಿದವರು ಕಾರಣವಿಲ್ಲದೆ ಹೊಡೆಯಲ್ಲ, ಬಹುಶಃ ಕೆಲಸದಿಂದ ತೆಗೆದು ಹಾಕಿರಬಹುದು ಎಂದೆಲ್ಲಾ ಫನ್ನಿ ಕಮೆಂಟ್‌ ಮಾಡುತ್ತಿದ್ದಾರೆ.

38 ಸೆಕೆಂಡ್‌ನ ಈ ವೀಡಿಯೋ 5 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಬಿಳಿ ಮಹಿಳೆಯ ಕೂದಲನ್ನು ಎಳೆದು ಜಗ್ಗುತ್ತಾ ಹೊಡೆಯುತ್ತಿರುವ ಮಿನ್ನಿ ಮೌಸ್ ಪಾತ್ರದ ಮಹಿಳೆ, ಮಿಕಿ ಮೌಸ್ ಹಾಗೂ ಗೂಫಿ ಪಾತ್ರದ ಪುರುಷರು ಮಿನ್ನಿ ಮೌಸ್‌ನ ಸಮಧಾನ ಮಾಡಲು ಪ್ರಯತ್ನಿಸಿದರೂ, ಮಿನ್ನಿ ಮೌಸ್ ಕೋಪ ಎಷ್ಟಿತ್ತು ಎಂದರೆ ಆ ಸೆಕ್ಯೂರಿಟಿ ಮಹಿಳೆಯನ್ನು ಬೀಳಿಸಿ, ಅವಳ ಮೈ ಮೇಲೆ ಕುಳಿತು ಹೊಡೆಯುತ್ತಾಳೆ. ವೀಡಿಯೋದ ಕೊನೆಯಲ್ಲಿ ಮಿಕಿ ಹಾಗೂ ಗೂಫಿ ಜೊತೆ ಹೋಗುತ್ತಿರುವ ಮಿನ್ನಿ ಮೌಸ್ ಕಾಣುತ್ತದೆ.

ವೀಡಿಯೋ ನೋಡಿದವರು ಮಿನ್ನಿ ಮೌಸ್ ಮಾಡಿದ್ದೇ ಸರಿ ಎಂಬಂತೆ ಆಕೆ ಪರ ನಿಲ್ಲುತ್ತಿದ್ದಾರೆ. ಯಾರದು ಸರಿ, ಯಾರದು ತಪ್ಪು ಎನ್ನುವುದು ದೇವರಿಗೇ ಗೊತ್ತು….

GET THE BEST BOLDSKY STORIES!

Allow Notifications

You have already subscribed

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಆಹಾ! ಈ ಚಿಕನ್ ವಿಂಗ್ಸ್ ಟೇಸ್ಟ್ ಸೂಪರ್‌!

Fri Jan 31 , 2020
Source Credit Kannada.boldsky.com Pin it Email https://nirantharanews.com/%e0%b2%ae%e0%b2%bf%e0%b2%a8%e0%b3%8d%e0%b2%a8%e0%b2%bf-%e0%b2%ae%e0%b3%8c%e0%b2%b8%e0%b3%8d-%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af-%e0%b2%ab%e0%b3%88%e0%b2%9f%e0%b3%8d-%e0%b2%b5/#Z19hcnJvdy5qcGc Pin it Email https://nirantharanews.com/%e0%b2%ae%e0%b2%bf%e0%b2%a8%e0%b3%8d%e0%b2%a8%e0%b2%bf-%e0%b2%ae%e0%b3%8c%e0%b2%b8%e0%b3%8d-%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af-%e0%b2%ab%e0%b3%88%e0%b2%9f%e0%b3%8d-%e0%b2%b5/#Z19hcnJvdy5qcGc Recipes oi-Reena TK | Published: Friday, January 31, 2020, 16:27 [IST] ಫ್ರೀ ಸಮಯದಲ್ಲಿ ತಂಪಾದ ಪಾನೀಯ ಅಥವಾ ಬಿಸಿ-ಬಿಸಿಯಾದ ಟೀ ಜೊತೆ ಸವಿಯಲು ರುಚಿಕರವಾದ ನಾನ್‌ವೆಜ್‌ ಸ್ನ್ಯಾಕ್ಸ್ ಈ ಚಿಕನ್ ವಿಂಗ್ಸ್. ಚಿಕನ್ ವಿಂಗ್ಸ್‌ ಅಂದರೆ ಕೋಳಿಯ ರೆಕ್ಕೆಯ ಭಾಗ. ಇದನ್ನು ಪ್ರತ್ಯೇಕವಾಗಿ ಮಸಾಲೆ ಹಾಕಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ. ಈ ವೀಕೆಂಡ್‌ನಲ್ಲಿ ಚಿಕನ್‌ ವಿಂಗ್ಸ್ ರುಚಿ ನೋಡ ಬಯಸುವುದಾದರೆ ಇಲ್ಲಿದೆ ನೋಡಿ ಸರಳ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links