“ಮಾಯಕೊಂಡಕ್ಕೆ ಆನಗೋಡು ಸೇರಿಸಿದರೆ ಗೋಲಿಬಾರ್ ಮರುಕಳಿಸುತ್ತೆ”

Source Credit Oneindia.com

Davanagere

oi-Lekhaka

By ದಾವಣಗೆರೆ ಪ್ರತಿನಿಧಿ

|

ದಾವಣಗೆರೆ, ಜನವರಿ 4: “ಮಾಯಕೊಂಡ ತಾಲೂಕು ಕೇಂದ್ರವನ್ನಾಗಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಆನಗೋಡು ಹೋಬಳಿಯನ್ನು ಮಾಯಕೊಂಡ ತಾಲೂಕಿಗೆ ಸೇರಿಸಬಾರದು. ಹಾಗೇನಾದ್ರೂ ಮಾಡಿದ್ರೆ, 1992ರ ಗೋಲಿಬಾರು ಮರುಕಳಿಸುತ್ತೆ” ಎಂದು ಜಿಲ್ಲಾಧಿಕಾರಿಗಳ ಮುಂದೆ ರೈತ ಮುಖಂಡ ಚಿನ್ನಸಮುದ್ರದ ಶೇಖರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿ ಸಭೆಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ.

ಮಾಯಕೊಂಡ ಪ್ರತ್ಯೇಕ ತಾಲೂಕು ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ದಾವಣಗೆರೆಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಭೆ ನಡೆದಿತ್ತು. ಜಿಲ್ಲಾಧಿಕಾರಿ ಈ ಸಭೆ ನೇತೃತ್ವ ವಹಿಸಿದ್ದರು. ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳ ಮುಂದೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶೇಖರ್ ನಾಯ್ಕ್, “ಮಾಯಕೊಂಡ ಕ್ಷೇತ್ರವನ್ನು ತಾಲ್ಲೂಕು ಮಾಡಲು ವಿರೋಧವಿಲ್ಲ. ಆದರೆ ಮಾಯಕೊಂಡ ತಾಲ್ಲೂಕಿಗೆ ಆನಗೋಡು ಹೋಬಳಿ ಸೇರ್ಪಡೆ ಮಾಡಿದರೆ ಗೋಲಿಬಾರ್ ಮತ್ತೆ ಮರುಕಳಿಸುತ್ತದೆ” ಎಂದು ವೇದಿಕೆ ಮೇಲೆಯೇ ಅವರಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಮುಂದೆಯೇ ಈ ರೀತಿ ಹೇಳಿದ್ದನ್ನು ಖಂಡಿಸಿ ಇತರ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಶೇಖರ್‌ ನಾಯ್ಕ್ ಅವರನ್ನು ಸಭೆಯಿಂದ ಹೊರಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಭೆಯಲ್ಲಿ ಗೊಂದಲ ಸೃಷ್ಠಿಯಾದ ಹಿನ್ನಲೆ ಜಿಲ್ಲಾಧಿಕಾರಿಗಳೇ ಸಭೆಯಿಂದ ಹೊರ ನಡೆದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೌಶಲ್ಯಾಧಾರಿತ ಶಿಕ್ಷಣ ಪ್ರಸ್ತುತ ಅವಶ್ಯಕತೆ: ಡ್ರೋನ್ ಪ್ರತಾಪ್

Sat Jan 4 , 2020
Source Credit NewsKannada.com ಕೌಶಲ್ಯಾಧಾರಿತ ಶಿಕ್ಷಣ ಪ್ರಸ್ತುತ ಅವಶ್ಯಕತೆ: ಡ್ರೋನ್ ಪ್ರತಾಪ್ HSA   ¦    Jan 04, 2020 04:37:00 PM (IST) Pin it Email https://nirantharanews.com/%e0%b2%ae%e0%b2%be%e0%b2%af%e0%b2%95%e0%b3%8a%e0%b2%82%e0%b2%a1%e0%b2%95%e0%b3%8d%e0%b2%95%e0%b3%86-%e0%b2%86%e0%b2%a8%e0%b2%97%e0%b3%8b%e0%b2%a1%e0%b3%81-%e0%b2%b8%e0%b3%87%e0%b2%b0%e0%b2%bf/#ZHJvbmUtcHJhdGF ಉಜಿರೆ: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಧಾರಿತ ಮತ್ತು ಪ್ರಯೋಗಾತ್ಮಕತೆಯ ಆವಶ್ಯಕತೆಯಿದೆ. ಪದವಿಪೂರ್ವ ಹಂತದವರೆಗೆ ಉಚಿತ ಶಿಕ್ಷಣ ಹಾಗೂ ಪದವಿ ಕಾಲೇಜುಗಳು ತಮ್ಮದೇ ಆದ ಪಠ್ಯಕ್ರಮವನ್ನು ಅಳವಡಿಸಿಕೊಂಡರೆ ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಅಂತರಾಷ್ಟ್ರೀಯ ಮಟ್ಟದ ಯುವವಿಜ್ಞಾನಿ ಡ್ರೋನ್ ಪ್ರತಾಪ್ ತಿಳಿಸಿದರು. ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links