‘ಮಹಿಳಾಪರ ಕಾನೂನು ದುರುಪಯೋಗ ಆತಂಕಕಾರಿ’

Source Credit NewsKannada.com

‘ಮಹಿಳಾಪರ ಕಾನೂನು ದುರುಪಯೋಗ ಆತಂಕಕಾರಿ’


HSA
  ¦   


Feb 15, 2020 04:29:04 PM (IST)

ಉಜಿರೆ: ಹೆಣ್ಣುಮಕ್ಕಳ ಪರವಾಗಿ ಅಸ್ತಿತ್ವದಲ್ಲಿರುವ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಥಿತಿ ಆತಂಕಕಾರಿ ಎಂದು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.

ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಶನಿವಾರ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳಾ ದೌರ್ಜನ್ಯ ತಡೆ ಹಾಗೂ ಸಬಲೀಕರಣ’ ಕುರಿತು ಅವರು ಮಾತನಾಡಿದರು.

ಮದುವೆಯಾದ ನಂತರ ಹೊಸ ಕೌಟುಂಬಿಕ ವಾತಾವರಣ ಪ್ರವೇಶಿಸಿದ ನಂತರ ಹೊಂದಾಣಿಕೆಗೆ ಸಂಬಂಧಿಸಿದಂತೆ ಸಹಜವಾಗಿಯೇ ಎದುರಾಗುವ ಸಮಸ್ಯೆಯನ್ನೇ ನೆಪವಾಗಿಸಿಕೊಂಡು ವಿವಾಹಿತ ಮಹಿಳೆಯರು ಪತಿಯ ಕುಟುಂಬದ ಸದಸ್ಯರ ವಿರುದ್ಧ ಸುಳ್ಳು ದೂರುಗಳನ್ನು ನೀಡುತ್ತಾರೆ. ತಮ್ಮ ಪರವಾಗಿ ಇರುವ ಕಾನೂನನ್ನು ಹೆಣ್ಣುಮಕ್ಕಳು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಿಚ್ಛೇದನದಂತಹ ಪ್ರಕರಣಗಳೇ ಹೆಚ್ಚಾಗಿ ವರದಿಯಾಗುತ್ತಿವೆ. ಮಕ್ಕಳಿಗೆ ಎಳವೆಯಿಂದಲೇ ಹೆತ್ತವರೊಂದಿಗೆ ಒಡನಾಡುವ ಮನೋಭಾವ ರೂಢಿಸಬೇಕು. ಸಂಬಂಧಗಳ ಮಹತ್ವ ಪರಿಚಯಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಕೌಟುಂಬಿಕ ಬಿಕ್ಕಟ್ಟಿನ ಕಾರಣಕ್ಕಾಗಿಯೇ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದರು.

ವಿವಿಧ ರಂಗಗಳನ್ನು ಮಹಿಳೆ ಪ್ರತಿನಿಧಿಸುತ್ತಿದ್ದಾಳೆ. ಆದರೆ ಅವಳ ಮೇಲಾಗುತ್ತಿರುವ ದೌರ್ಜನ್ಯ ಇನ್ನೂ ನಿಂತಿಲ್ಲ. ಹೆಣ್ಣಿಗೆ ವಿದ್ಯಾಭ್ಯಾಸ ಮಾತ್ರವಲ್ಲ, ಸಮಸ್ಯೆಗಳನ್ನು ಎದುರಿಸುವ ಸ್ಥೈರ್ಯವನ್ನೂ ಕಲಿಸಿಕೊಡುವುದು ಮುಖ್ಯ. ಮಕ್ಕಳನ್ನು ಬೆಳೆಸುವ ಕಾಲಕ್ಕೇ ಹೆಣ್ಣು-ಗಂಡು ಎಂಬ ತಾರತಮ್ಯ ಭಾವನೆ ತೊರೆಯಬೇಕು. ಹಾಗಾದಾಗ ಮಾತ್ರ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ದೃಷ್ಟಿಕೋನ ಬದಲಾಗಿ ಅವಳ ಮೇಲಿನ ದೌರ್ಜನ್ಯಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದರು.

ಬಿಹಾರ, ಹರಿಯಾಣ ರಾಜ್ಯಗಳಲ್ಲಿ ಇಂದಿಗೂ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ದೊರೆತಿಲ್ಲ. ಅವಳು ಹೇಗಿರಬೇಕು ಎಂಬುದನ್ನು ಬೇರೆಯವರೇ ಅಲ್ಲಿ ನಿರ್ಧರಿಸುತ್ತಾರೆ. ಅಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡದಿರುವುದು. ಅವಳ ಆಯ್ಕೆಯ ಸ್ವಾತಂತ್ರ್ಯ ಇಲ್ಲದಿರುವುದೇ ಅಲ್ಲಿ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಹೇಳಿದರು. 

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಶುಭಾರಾಣಿ ಸ್ವಾಗತಿಸಿದರು. ರಕ್ಷಾ ನಿರೂಪಿಸಿದರು. ಅಮ್ರೀನ್ ವಂದಿಸಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಯಿಂದ ಬಂದು ಮತ್ತೆ ಶೈನ್ ಶೆಟ್ಟಿ ಮಾಡ್ತಾ ಇರೋ ಕೆಲಸ ನೋಡಿ..

Sat Feb 15 , 2020
Source Credit RJ News Kannada ಜೀವನದಲ್ಲಿ ಗೆಲುವು ಅನ್ನೋದು ಕೆಲವೊಮ್ಮೆ ಕೆಲವರಿಗೆ ಅಹಂ ಎಂಬುದನ್ನ ತಂದುಬಿಡುತ್ತದೆ.‌ ಗೆದ್ದೆ ಎಂಬ ಅಹಂಕಾರದಲ್ಲಿ ಹಳೆಯ ಜೀವನವನ್ನು ಮರೆತು ಬೇರೆಯದ್ದೇ ರೀತಿಯಲ್ಲಿ ವರ್ತಿಸೋಕೆ ಶುರು ಮಾಡ್ತಾರೆ.. ಆದರೆ ಶೈನ್ ಶೆಟ್ಟಿ ಅದೆಲ್ಲದರಿಂದ ದೂರ ಎನ್ನಬಹುದು.. ಬಿಗ್ ಬಾಸ್ ಗೆದ್ದ ಬಳಿಕ ತನ್ನ ಹಳೆಯ ಕೆಲಸಕ್ಕೆ ಮರಳಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ತನ್ನ ಕಷ್ಟದ ಜೀವನದಲ್ಲಿ ಕೈ ಹಿಡಿದ ಗಲ್ಲಿ ಕಿಚನ್ ನಲ್ಲಿ ಮರಳಿ ಕೆಲಸಕ್ಕೆ ಹಾಜರಾಗಿದ್ದಾರೆ.. Pin it […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links