ಮಹಾ ಕ್ಯಾಥೊಲಿಕ್ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

Source Credit NewsKannada.com

ಮಹಾ ಕ್ಯಾಥೊಲಿಕ್ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ


Jan 15, 2020 05:42:23 PM (IST)

ಮಂಗಳೂರು: ಫೆಬ್ರವರಿ 2ರಂದು ನಡೆಯುವ ಮಡಂತ್ಯಾರು ಕ್ಯಾಥೊಲಿಕ್ ಮಹಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಬಿಡುಗಡೆ ಮಾಡಿ ಶುಭಹಾರೈಸಿದರು.

ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಬುಧವಾರ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಥೋಲಿಕ್ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷರು ಪಾವ್ಲ್ ರೊಲ್ಫಿ ಡಿಕೋಸ್ತ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ವಂ|ಸ್ವಾಮಿ ಮ್ಯಾಕ್ಸಿಂ ನೊರೊನ್ಹಾ ವಿಕಾರ್ ಜೆರಾಲ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಂ| ಸ್ವಾಮಿ ಸ್ಟ್ಯಾನಿ ಪಿಂಟೊ, ಜೆ.ಆರ್. ಲೋಬೊ, ವಾಲ್ಟರ್ ಡಿಸೋಜ, ರೋಯ್ ಕ್ಯಾಸ್ತೆಲಿನೊ, ಲ್ಯಾನ್ಸಿ ಡಿಕುನ್ಹಾ, ಸುಶೀಲ್ ನ್ಹೊರೊನ್ಹಾ, ಮಾರ್ಸೆಲ್ ಮೊಂತೇರೊ, ಡೆನಿಸ್ ಡಿ’ಸಿಲ್ವಾ ಹಾಗೂ ಕಥೊಲಿಕ್ ಸಭಾ, ಐ.ಸಿ.ವೈ.ಎಮ್., ಸ್ತ್ರೀ ಸಂಘಟನೆಯ ಪದಾಧಿಕಾರಿಗಳು, ಕಥೊಲಿಕ್ ಸಭಾ ವಲಯ ಮತ್ತು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಬೆಳ್ತಂಗಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಈ ವೇಳೆ ಸಮಾವೇಶಕ್ಕೆ ಶುಭಹಾರೈಸಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರತಿನಿಧಿ ವಂ.ಸ್ವಾಮಿ ಬಿನೊಯ್ ಜೋಸೆಫ್, ಬೆಳ್ತಂಗಡಿ ಧರ್ಮಪ್ರಾಂತ್ಯದ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಂಗಳೂರಿನ ಸಿಎಎ ವಿರುದ್ದ ಪ್ರತಿಭಟನೆಗೆ 100 ಕ್ಕೂ ಅಧಿಕ ದೋಣಿಯಲ್ಲಿ ಆಗಮಿಸಿದ ಜನರು

Wed Jan 15 , 2020
Source Credit TheMangaloreMirror.in ಮಂಗಳೂರಿನ ಸಿಎಎ ವಿರುದ್ದ ಪ್ರತಿಭಟನೆಗೆ 100 ಕ್ಕೂ ಅಧಿಕ ದೋಣಿಯಲ್ಲಿ ಆಗಮಿಸಿದ ಜನರು ಮಂಗಳೂರು ಜನವರಿ 15: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ದೋಣಿ ಮೂಲಕ ಜನರು ಆಗಮಿಸಿದ್ದಾರೆ. ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿಯಲ್ಲಿ ಬೃಹತ್ ರ್‍ಯಾಲಿ ಮೂಲಕ ಜನರು ಬಂದಿದ್ದಾರೆ. ಈ ಮೈದಾನ ನೇತ್ರಾವತಿ ನದಿ ತೀರದಲ್ಲಿ ಇರುವುದರಿಂದ ದೋಣಿ ಮೂಲಕ ಕೈಯಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ, ಸಮಾವೇಶದಲ್ಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links