ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ

Source Credit Filmibeat.com

Gossips

oi-Bharath Kumar K

|

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಚಿತ್ರರಂಗಕ್ಕೆ ಬರ್ತಾರೆ ಎಂಬ ಸುದ್ದಿ ಬಹಳ ದಿನದಿಂದ ಸದ್ದು ಮಾಡ್ತಿದೆ. ಹಿಂದಿ ಚಿತ್ರವೊಂದನ್ನು ನಿರ್ಮಿಸುತ್ತಾರೆ ಅಥವಾ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತಿದೆ.

ಇದೀಗ, ಅದಕ್ಕಿಂತ ವಿಶೇಷವಾದ ಸುದ್ದಿಯೊಂದು ಹೊರಬಿದ್ದಿದೆ. ಈ ಸುದ್ದಿ ನಿಜವೇ ಆದರೆ, ಧೋನಿ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಂಬೈ ಮಿರರ್ ವರದಿ ಮಾಡಿರುವ ಪ್ರಕಾರ ಎಂ ಎಸ್ ಧೋನಿ ಟಿವಿ ನಿರ್ಮಾಣ ಸಂಸ್ಥೆ ಸ್ಥಾಪಿಸಲು ಯೋಚಿಸಿದ್ದಾರಂತೆ. ಈ ಶೋ ಮೂಲಕ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ ಸೈನಿಕರ ಜೀವನ ಕಥೆಯನ್ನು ಜನರ ಮುಂದೆ ತರಲು ನಿರ್ಧರಿಸಿದ್ದಾರಂತೆ.

ಯೋಧರ ಜೀವನ, ಅವರು ನಡೆದ ಬಂದ ಹಾದಿಗಳನ್ನು ಈ ಟಿವಿ ಶೋನಲ್ಲಿ ಪ್ರಸ್ತತಪಡಿಸಲು ಧೋನಿ ಚಿಂತಿಸಿದ್ದಾರಂತೆ. ಪ್ರಮುಖವಾಗಿ ಪರಮವೀರ ಮತ್ತು ಅಶೋಕ ಚಕ್ರ ಪ್ರಶಸ್ತಿಗಳನ್ನ ಪಡೆದಿರುವ ಯೋಧರ ಸ್ಫೂರ್ತಿದಾಯಕ ಕಥೆಗಳನ್ನು ಈ ಕಾರ್ಯಕ್ರಮದ ಮೂಲಕ ಜನರ ಮುಂದೆ ತೆರೆದಿಡುವ ಉದ್ದೇಶ ಹೊಂದಿದ್ದಾರಂತೆ.

ಸದ್ಯ, ಇಂತಹದೊಂದು ಕಾರ್ಯಕ್ರಮಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಲಾಗುತ್ತಿದೆ ಎಂಬ ಮಾತಿದೆ. ಪ್ರೀ-ಪ್ರೊಡಕ್ಷನ್ ಹಂತದ ಕೆಲಸ ಆರಂಭವಾಗಿದ್ದು, ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಣೆಯಾಗಲಿದೆಯಂತೆ.

ಅಂದ್ಹಾಗೆ, ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಭಾರತದ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಈ ಮಧ್ಯೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ಬಂದಿದ್ದಾರೆ.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ಭಾರತಕ್ಕೆ ವಾಪಸ್ ಬಂದ ಕೂಡಲೇ ಸರ್ಪ್ರೈಸ್ ಕೊಡ್ತಾರೆ ಅನುಷ್ಕಾ ಶೆಟ್ಟಿ

Thu Dec 12 , 2019
Source Credit Filmibeat.com Pin it Email https://nirantharanews.com/%e0%b2%ae%e0%b2%b9%e0%b2%a4%e0%b3%8d%e0%b2%b5%e0%b2%a6-%e0%b2%aa%e0%b3%8d%e0%b2%b0%e0%b2%be%e0%b2%9c%e0%b3%86%e0%b2%95%e0%b3%8d%e0%b2%9f%e0%b3%8d-%e0%b2%97%e0%b3%86-%e0%b2%95%e0%b3%88-%e0%b2%b9/#MWFudXNoa2FzaGV ಸ್ಲಿಮ್ ಆಗಲಿದ್ದಾರೆ ‘ದೇವಸೇನಾ’ ದೇವಸೇನಾ ಅನುಷ್ಕಾ ಶೆಟ್ಟಿ ತಮ್ಮ ದೇಹದ ತೂಕ ಇಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ವರ್ಕೌಟ್ ಕೂಡ ಮಾಡುತ್ತಿದ್ದಾರಂತೆ. ಸದ್ಯ ವಿದೇಶದಲ್ಲಿರುವ ಅನುಷ್ಕಾ, ಅಲ್ಲಿಂದ ವಾಪಸ್ ಬಂದ್ಮೇಲೆ ಈ ವಿಷಯದಲ್ಲಿ ಸರ್ಪ್ರೈಸ್ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. Pin it Email https://nirantharanews.com/%e0%b2%ae%e0%b2%b9%e0%b2%a4%e0%b3%8d%e0%b2%b5%e0%b2%a6-%e0%b2%aa%e0%b3%8d%e0%b2%b0%e0%b2%be%e0%b2%9c%e0%b3%86%e0%b2%95%e0%b3%8d%e0%b2%9f%e0%b3%8d-%e0%b2%97%e0%b3%86-%e0%b2%95%e0%b3%88-%e0%b2%b9/#MmFudXNoa2FzaGV ಖುಷ್ ಆಗ್ತಾರೆ ಫ್ಯಾನ್ಸ್ ಒಂದು ವೇಳೆ ಅನುಷ್ಕಾ ಶೆಟ್ಟಿ ಅವರು ತಮ್ಮ ದೇಹದ ತೂಕ ಇಳಿಸಿಕೊಂಡು, ಮೊದಲಿನಂತೆ ಫಿಟ್ ಆಗಿ ಕಾಣಿಸಿಕೊಂಡರೆ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗುತ್ತಾರೆ. ಅನುಷ್ಕಾ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links