ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು

Source Credit Oneindia.com

ಮರದ ನೆರಳಲ್ಲಿ ಪಾಠ

7ನೇ ತರಗತಿಯ ಸುಮಾರು 25 ವಿದ್ಯಾರ್ಥಿಗಳು ಪ್ರತಿನಿತ್ಯ ಮರದ ನೆರಳಲ್ಲಿ ಕುಳಿತುಕೊಂಡು ಮಳೆ, ಗಾಳಿ ಹಾಗೂ ಬಿಸಿಲನ್ನು ಲೆಕ್ಕಿಸದೇ ಪಾಠ ಕೇಳುತ್ತಾರೆ. ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಹೇಳಿಕೊಳ್ಳುವಂತಿಲ್ಲ, ಶೌಚಾಲಯದ ವಿಷಯವಂತೂ ಹೇಳುವುದೇ ಬೇಡ. ಬಯಲಲ್ಲಿ ಶೌಚಾಲಯಕ್ಕೆ ಮಕ್ಕಳು ಹೋಗುತ್ತಾರೆ.

ಆರು ಬೋಧನಾ ಕೊಠಡಿಗಳು

ಶಾಲೆಯಲ್ಲಿ ಅಡುಗೆ ಕೊಣೆ, ಶಿಕ್ಷಕರ ಕಚೇರಿ ಬಿಟ್ಟು 6 ಬೋಧನಾ ಕೊಠಡಿಗಳಿವೆ. 1 ರಿಂದ 7ನೇ ತರಗತಿಯಿದ್ದು, ತರಗತಿ ಕೊರತೆಯಿಂದ 7ನೇ ತರಗತಿ ಮಕ್ಕಳಿಗೆ ಶಾಲಾ ಆವರಣದಲ್ಲಿ ಮರದ ಅಡಿಯಲ್ಲಿ ಪಾಠ ಕೇಳುವಂತಾಗಿದೆ.

ಕೊಠಡಿಗಳಿಗೆ ಹೋಗಲು ಒಂದು ಕಿ.ಮೀ ಕ್ರಮಿಸಬೇಕು

6 ಮತ್ತು 7 ನೇ ತರಗತಿಗಳಿಗೆ ಬೇರೆ ಕಡೆ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಇರುವ ಶಾಲೆಗೂ ಆ ಎರಡು ಕೊಠಡಿಗಳಿಗೂ ಸುಮಾರು ಒಂದು ಕಿ.ಮಿ. ದೂರ ಇದೆ. ವಿದ್ಯಾರ್ಥಿಗಳು ಆ ಕೊಠಡಿಯಲ್ಲಿ ಕುಳಿತು ಪಾಠ ಕೇಳಿದರೆ, ಮಧ್ಯಾಹ್ನದ ಬಿಸಿಯೂಟಕ್ಕೆ ಅಲ್ಲಿಂದ ಇಲ್ಲಿಯವರಿಗೂ ಮತ್ತೆ ಬರಬೇಕಾಗುತ್ತದೆ. ಜೊತೆಗೆ ಶಿಕ್ಷಕರು ತರಗತಿಗಳನ್ನು ಬದಲಾವಣೆ ಮಾಡಿಕೊಂಡು ಪಾಠ ಮಾಡುವುದಕ್ಕೂ ತೊಂದರೆಯಾಗುತ್ತದೆ. ಶಿಕ್ಷಣ ಇಲಾಖೆ ಇದರ ಕಡೆ ಗಮನ ಹರಿಸಿಲ್ಲ.

ಶಾಲೆ ಪಕ್ಕದಲ್ಲೇ ಮತ್ತೊಂದು ಸುಸಜ್ಜಿತ ವಸತಿ ಶಾಲೆ ನಿರ್ಮಾಣ

ಯರ್ರೇನಹಳ್ಳಿ ಗ್ರಾಮದ ಪಕ್ಕದಲ್ಲೇ ಸರ್ಕಾರದಿಂದ ಸುಮಾರು 15-16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ವಸತಿ ಶಾಲೆಯ ಕಟ್ಟಡ ಪ್ರಾರಂಭದ ಹೊಸ್ತಿಲಲ್ಲಿದೆ. ಆದರೆ ಪಕ್ಕದಲ್ಲೇ ಇರುವ ಯರ್ರೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯತ್ತ ಸರ್ಕಾರ ಗಮನ ಕೊಟ್ಟಿಲ್ಲ. ಈಗಲಾದರೂ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಈ ಅವ್ಯವಸ್ಥೆಯನ್ನು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೋಲಾರ: ಸಿಎಎ-ಎನ್‌ಆರ್‌ಸಿ ಪರ ಮೆರವಣಿಗೆ ಮಾಡುತ್ತಿದವರಿಗೆ ಲಾಠಿ ಏಟು

Sat Jan 4 , 2020
Source Credit Oneindia.com Pin it Email https://nirantharanews.com/%e0%b2%ae%e0%b2%b0%e0%b2%a6-%e0%b2%a8%e0%b3%86%e0%b2%b0%e0%b2%b3%e0%b3%87-%e0%b2%88-%e0%b2%ae%e0%b2%95%e0%b3%8d%e0%b2%95%e0%b2%b3%e0%b2%bf%e0%b2%97%e0%b3%86-%e0%b2%95%e0%b3%8d%e0%b2%b2%e0%b2%be/#Wg== Kolar oi-Manjunatha C | Published: Saturday, January 4, 2020, 19:58 [IST] ಕೋಲಾರ, ಜನವರಿ 04: ಪೌರತ್ವ ಕಾಯ್ದೆ (ಸಿಎಎ) ಪರವಾಗಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ನಗರದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಪರ ಬಿಜೆಪಿ ಬೆಂಬಲಿಗರು ಮತ್ತು ಹಿಂದೂ ಪರ ಸಂಘಟನೆಗಳ ಸದಸ್ಯರು ಮೆರವಣಿಗೆ ಮಾಡಿದರು. ಆದರೆ ಇವರನ್ನು ಅಡ್ಡಗಟ್ಟಿದ ಪೊಲೀಸರು ಲಾಠಿಬೀಸಿ ಗುಂಪು ಚದುರಿ ಚೆಲ್ಲಾ-ಪಿಲ್ಲಿ ಆಗುವಂತೆ ಮಾಡಿದ್ದಾರೆ. ನಗರದಲ್ಲಿ ಸಾಗಿಬಂದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links