ಮನ ಮುಟ್ಟುವ ‘ರುದ್ರಿ’ ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ

Source Credit Filmibeat.com

* ಒಂದು ವರ್ಷದ ಬಳಿಕ ‘ರುದ್ರಿ’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲು ಕಾರಣ ಏನು?

– ಹೌದು ಒಂದು ವರ್ಷ ಆಯಿತು. ‘ಮಾಸ್ತಿಗುಡಿ’ ಸಿನಿಮಾಕ್ಕೆ ತುಂಬಾ ಒಳ್ಳೆ ಕೆಲಸ ಮಾಡಿದ್ದೆವು. ತುಂಬಾ ಇಷ್ಟಪಟ್ಟು ಸಂಗೀತ ಮಾಡಿದ್ದೆ. ಆದರೆ ನೀರಿನಲ್ಲಿ ಬಿದ್ದು ಆ ಹುಡುಗರು ಸತ್ತಿದ್ದನ್ನು ನೋಡಲು ಆಗಲಿಲ್ಲ. ಈಗಲೂ ಆ ದೃಶ್ಯ ಕಣ್ಣ ಮುಂದೆಯೇ ಇದೆ. ಆ ನಂತರ ಯಾಕೋ ಮನಸ್ಸಿಗೆ ಬೇಸರ ಆಗಿ ಸಂಗೀತ ನಿರ್ದೇಶನ ಮಾಡಿರಲಿಲ್ಲ. ‘ರುದ್ರಿ’ ಹೊಸತನದಿಂದ ಕೂಡಿರುವ ಸಿನಿಮಾ. ಇಲ್ಲಿ ಒಂದು ರೀತಿಯ ಆಕ್ರೋಶ ಇದೆ. ನೋವು ಇದೆ. ಹೆಣ್ಣು ಮಗಳೊಬ್ಬಳ ಕನಸುಗಳನ್ನು ಕಿತ್ತುಕೊಂಡ ಆಕ್ರಂದನ ಇದೆ. ಇವೆಲ್ಲ ಭಾವಗಳಿಗೆ ಸಂಗೀತದ ಸ್ಪರ್ಶ ನೀಡುವುದು ಸವಾಲಿನ ಕೆಲಸ. ಈ ಸವಾಲನ್ನು ನಾನು ಪ್ರೀತಿಯಿಂದ ಸ್ವೀಕರಿಸಿದೆ.

ಈ ಸಿನಿಮಾಗೆ ಹಾಡುವಾಗ ಆದ ಅನುಭವ?

– ಅದೊಂದು ಅಪೂರ್ವ ಕ್ಷಣ. ಆ ಹಾಡನ್ನು ಹಾಡುವಾಗ ಕಣ್ಣಲ್ಲಿ ನೀರು ಬಂತು. ಪದಗಳಿಗೆ ಜೀವ ತುಂಬುವ ಪುಣ್ಯದ ಕೆಲಸ ನಾನು ಮಾಡುತ್ತಿದ್ದೇನೆ ಎಂಬ ಧನ್ಯತಾ ಭಾವ ಮೂಡಿತು. “ಯಾರೋ ಬರೆದ ಹಣೆಬರಹವೋ ಈಕೆ, ಸುಂದರ ಹೂವಿದೆ, ಅರಳೋ ಮುನ್ನವೇ ಬಾಡಿದೆ” ಈ ಹಾಡನ್ನು ಹಾಡಿದ್ದೇನೆ. ನೀವು ಕೇಳಿ ಖಂಡಿತಾ ಇಷ್ಟಪಡುತ್ತೀರಾ..

ಸಾಧು ಅವರಿಗೆ ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳಿ ಎಂದರೆ ನಟನೆನಾ ಅಥವಾ ಸಂಗೀತ ನಿರ್ದೇಶನವಾ?

– ಒಳ್ಳೆಯ ಪ್ರಶ್ನೆ. ಸಾಧು ತನ್ನ ಬಗ್ಗೆ ಹಾಗೂ ಜೀವನದ ಬಗ್ಗೆ ಯೋಚನೆ ಮಾಡಿದರೆ ಅದು ನಟನೆನೇ. ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ ಕಣ್ರೀ. ಹೆಸರು ಮಾಡಬಹುದು. ಮನಸ್ಸಿನ ತೃಪ್ತಿಗೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಬಹುದು. ಆದರೆ ನಟಿಸಿದರೆ ಮಾತ್ರ ದುಡ್ಡು. ಹಾಗಾಗಿ ಜೀವನಕ್ಕಾಗಿ ನಟನೆ, ತೃಪ್ತಿಗಾಗಿ ಸಂಗೀತ.

ರುದ್ರಿ ಸಂಗೀತದಲ್ಲಿ ಸಿಕ್ಕ ತೃಪ್ತಿ?

– ಮೊದಲಿಗೆ ಕಥೆಯಲ್ಲಿರುವ ಭಾವ ಇಷ್ಟ ಆಯಿತು. ನಿರ್ದೇಶಕರು ನಮ್ಮ ಸ್ನೇಹಿತರು, ಅವರ ಪ್ರೀತಿಗಾಗಿ ಸಿನಿಮಾ ಮಾಡಲು ಒಪ್ಪಿದ್ದೆ. ಆದರೆ ಹೋಗುತ್ತಾ ಹೋಗುತ್ತಾ ಈ ಸಿನಿಮಾದ ಹಾಡುಗಳು ಮನಸ್ಸನ್ನು ಕಾಡಿತು.

ಈ ಸಿನಿಮಾ ಸಂಗೀತದ ವಿಶೇಷ?

– ಈ ಸಿನಿಮಾದ ಹಾಡುಗಳು ಸಿನಿಮ್ಯಾಟಿಕ್ ಆಗಿಲ್ಲ. ಇಲ್ಲಿ ಒಂದು ನೈಜ ಕಥೆ ಇದೆ. ಅದಕ್ಕೆ ತಕ್ಕಂತೆ ನೈಜ ಭಾವನೆಗಳಿಂದ ಸಿನಿಮಾ ವ್ಯಕ್ತವಾಗಿದೆ. ಹಾಗಾಗಿ ಸಂಗೀತ ಕೂಡ ನಾವು ಮನಸ್ಸಿಗೆ ಹತ್ತಿರವಾಗುವಂತೆಯೇ ನೈಜವಾಗಿದೆ. ಪ್ಯಾಥೊ ಭಾವಕ್ಕಾಗಿ ಕೆಲವು ವಿಶೇಷ ವಾದ್ಯಗಳನ್ನು ಬಳಕೆ ಮಾಡಿದ್ದೇವೆ. ಬೇಸರ ಆದಾಗ ಈ ಹಾಡು ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ ನೋಡಿ. ‘ಕಿರಗೂರಿನ ಗಯ್ಯಾಳಿಗಳು’, ‘ಎದೆಗಾರಿಕೆ’ ಸಿನಿಮಾಕ್ಕಾಗಿ ಸಂಗೀತ ಮಾಡುವಾಗ ಆದ ಅನುಭವವೇ ಇಲ್ಲಿ ಆಯಿತು ಎಂದರೆ ತಪ್ಪಲ್ಲ.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಡೈರಕ್ಟರ್ ಆಗುವೆ ಎಂದು ಧೈರ್ಯವಾಗಿ ಹೇಳುವ ಅಂಗವಿಕಲ

Fri Jan 17 , 2020
Source Credit Filmibeat.com Pin it Email https://nirantharanews.com/%e0%b2%ae%e0%b2%a8-%e0%b2%ae%e0%b3%81%e0%b2%9f%e0%b3%8d%e0%b2%9f%e0%b3%81%e0%b2%b5-%e0%b2%b0%e0%b3%81%e0%b2%a6%e0%b3%8d%e0%b2%b0%e0%b2%bf-%e0%b2%b9%e0%b2%be%e0%b2%a1%e0%b3%81%e0%b2%97%e0%b2%b3/#MXByZW1ha2F2aXJ ರಾಯಚೂರಿನ ಹುಡುಗ ರಮೇಶ್ ಪ್ರೇಮಕವಿ ರಮೇಶ್ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು, ಹರ್ವಾಪೂರ ಎಂಬ ಪುಟ್ಟ ಗ್ರಾಮದವರು. ಪೋಲಿಯೋದಿಂದ ಹುಟ್ಟಿನಿಂದ ಕಾಲು ಕಳೆದುಕೊಂಡರು. ಹೀಗಿದ್ದ ರಮೇಶ್ 15 ವರ್ಷ ಇರುವಾಗಲೇ ಸಿನಿಮಾದಿಂದ ಸ್ಫೂರ್ತಿ ಪಡೆದು, ಸಿನಿಮಾದಲ್ಲಿಯೇ ಕೆಲಸ ಮಾಡುವ ಗುರಿ ಹೊಂದಿದರು. ನಿರ್ದೇಶಕರಾಗಬೇಕು ಎಂದು ನಿರ್ಧಾರ ಮಾಡಿದರು. Pin it Email https://nirantharanews.com/%e0%b2%ae%e0%b2%a8-%e0%b2%ae%e0%b3%81%e0%b2%9f%e0%b3%8d%e0%b2%9f%e0%b3%81%e0%b2%b5-%e0%b2%b0%e0%b3%81%e0%b2%a6%e0%b3%8d%e0%b2%b0%e0%b2%bf-%e0%b2%b9%e0%b2%be%e0%b2%a1%e0%b3%81%e0%b2%97%e0%b2%b3/#MnByZW1ha2F2aXJ 2007ರಲ್ಲಿ ಬೆಂಗಳೂರಿಗೆ ಬಂದೆ 2007ರಲ್ಲಿ 7ನೇ ಕ್ಲಾಸ್ ಓದುವಾಗ ರಮೇಶ್ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದು ಒಂದು ಸಂಸ್ಥೆಯಲ್ಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links