ಮನೆ ಕಟ್ಟಿಸಿ ನೆರವಾಗಲು ಹೋದ್ರು ಜಗ್ಗೇಶ್..‌ ಆದರೆ ಆಗಿದ್ದೇ ಬೇರೆ..

Source Credit RJ News Kannada

ಒಬ್ಬರು ಒಳ್ಳೆಯದನ್ನ ಮಾಡ್ತಾ ಇದ್ದಾರೆ ಅಂದ್ರೆ ನಮ್ಮ ಕೆಲವು ಜನರಿಗೆ ಅದನ್ನ ಸಹಿಸೋ ಶಕ್ತಿಯೂ ಇಲ್ಲ ಅನ್ಸತ್ತೆ.. ಹೌದು ಸರಿಗಮಪ ಖ್ಯಾತಿಯ ದೇವರ ಮಕ್ಕಳಾದ ರತ್ನಮ್ಮ ಹಾಗೂ ಮಂಜಮ್ಮ‌ರ ಸೂರು ಸೋರುತ್ತಿದೆ ಮಳೆ ಬಂದರೆ ನೆನೆದುಕೊಂಡೇ ಇರುತ್ತೇವೆ ಎಂದು ಕಣ್ಣೀರಿಟ್ಟರು.. ಅವರ ಮಾತಿಗೆ ಎಲ್ಲರ ಮನ ಮಿಡಿಯಿತು..‌ಜಗ್ಗೇಶ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಮನೆ ಕಟ್ಟಲು ನೆರವಾಗುತ್ತೇನೆಂದರು..

ಹೇಳಿದ ಮಾತಿನಂತೆ ತಮ್ಮ ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘಕ್ಕೆ ಜವಬ್ದಾರಿಯನ್ನೂ ವಹಿಸಿದರು.. ಒಂದೇ ದಿನದಲ್ಲಿ ಕೆಲಸವೂ ಶುರು ಆಯಿತು.. ಕುಸಿಯುವ ರೀತಿಯಿದ್ದ ಸಂಪೂರ್ಣ ಮನೆಯನ್ನು ಹೊಡೆದು ಹಾಕಿ ಹೊಸದಾಗಿ ಕಟ್ಟಲು ಮುಂದಾದರು..

ಇದನ್ನೆಲ್ಲಾ ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡರು.. ಮನೆ ಕೆಲಸ ಶುರು ಆಗಿದೆ ಇನ್ನು 25 ದಿನಗಳಲ್ಲಿ ಮನೆ ನಿರ್ಮಾಣ ಸಂಪೂರ್ಣವಾಗಲಿದೆ.. ನಾನು ಹಾಗೂ ಪರಿಮಳ ಹೋಗಿ ಆ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡುತ್ತೇವೆ ಎಂದಿದ್ದರು..

ಜಗ್ಗೇಶ್ ಅವರ ಒಳ್ಳೆಯ ಗುಣ ಹಾಗೂ ಸಹಾಯ ಮಾಡಲು ಮೊದಲ ಹೆಜ್ಜೆ ಇಟ್ಟ ಅವರ ನಡೆಗೆ ಇಡಿ ನಾಡೇ ಹ್ಯಾಟ್ಸ್ ಆಫ್ ಹೇಳಿತ್ತು.. ಆದರೆ ಕೆಲ ಸಣ್ಣ ಮನಸ್ಸಿನ ವ್ಯಕ್ತಿಗಳು ಮಾತ್ರ ಮೊಸರಲ್ಲೂ ಕಲ್ಲು ಹುಡುಕೋ ಜನ ಜಗ್ಗೇಶ್ ಅವರ ಪೋಸ್ಟ್ ಕೆಳಗೆ.. ಕಟ್ಟಿಸುವಾಗ ಸ್ವಲ್ಪ ಗಟ್ಟಿಯಾದ ಮನೆ ಕಟ್ಸಿ.. 25 ದಿನದಲ್ಲಿ ಗಟ್ಟಿಯಾದ ಮನೆ ಕಟ್ಸೋಕಾಗತ್ತ ಈ ರೀತಿ ಕಮೆಂಟ್ ಗಳನ್ನು ಹಾಕಿ ತಮ್ಮ ಸಣ್ಣ ಮನಸ್ಥಿತಿಯನ್ನು ತೋರಿದ್ದರು..

ಇಂತವರಿಗೆ ಸ್ವತಃ ಜಗ್ಗೇಶ್ ಅವರೇ ಸರಿಯಾಗಿ ಉತ್ತರ ನೀಡಿದ್ದಾರೆ.. ಭಗವಂತ ಕೊಟ್ಟದ್ದರಲ್ಲಿ ನನ್ನ ಕೈನಲ್ಲಿ ಏನಾಗುವುದೋ ಅದನ್ನು ನಾನು ಮಾಡುತ್ತೇನೆ.. ನಿಮಗೆ ಸಾಧ್ಯವಾದರೆ ನಿಮ್ಮ ಮುಂದೆ ಕಾಣುವ ಇಂತಹ ಮಂದಿಗೆ ಸಹಾಯ ಮಾಡಿ ಎಂದು ಕಮೆಂಟ್ ಮೂಲಕವೇ ಉತ್ತರ ನೀಡಿದ್ದಾರೆ..

ಅಲ್ರಯಾ ಸೋರದೆ ಇರೋ ಅಂತ ಮನೆ ಒಂದಿದ್ದರೆ ಸಾಕು.. ಸಹಾಯ ಮಾಡ್ತೀನಿ‌ ಅಂತ ಸಾವಿರ ಜನ ಹೇಳಬಹುದು ಆದರೆ ಮುಂದೆ ಬಂದು ಸಹಾಯ ಮಾಡೋದು ಮಾತ್ರ ಕೆಲವರು.. ಅದರಲ್ಲಿ ಜಗ್ಗೇಶ್ ಕೂಡ ಒಬ್ಬರು.. ಅಂತದ್ರಲ್ಲಿ ಅಂತದ್ದೇ ಮನೆ ಕಟ್ಸಿ ಇಂತದ್ದೆ ಮನೆ ಕಟ್ಸಿ ಅಂತ ಹೇಳೋ ನೈತಿಕತೆ ಯಾರಿಗಾದ್ರು ಇದೆಯಾ? ಸಹಾಯ ಮಾಡ್ತಾ ಇರೋದು ಅವ್ರು.. ಅವರಿಗೆ ಸಾಧ್ಯ ಆಗೋ ತರ ಮನೆ ಕಟ್ಟುಸ್ತಾರೆ.. ಜನ ಒಳ್ಳೇದ್ ಮಾಡಿದಾಗ ಅವರ ಕೆಲಸವನ್ನ ಸಾಧ್ಯ ಆದ್ರೆ ಮೆಚ್ಚಿಕೊಳ್ಳಬೇಕು.. ಇಲ್ಲವಾದರೆ ಸುಮ್ಮನಾಗಬೇಕು.. ಈ ರೀತಿ ಅದು ಇದು ಕಮೆಂಟ್ ಮಾಡೋದಲ್ಲ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕಂಬಳ ಲೋಕದ ದಾಖಲೆಯ ಸರದಾರ ಶ್ರೀನಿವಾಸ ಗೌಡ

Fri Feb 14 , 2020
Source Credit NewsKannada.com ಕಂಬಳ ಲೋಕದ ದಾಖಲೆಯ ಸರದಾರ ಶ್ರೀನಿವಾಸ ಗೌಡ Deevith S K   ¦    Feb 14, 2020 09:30:48 AM (IST) Pin it Email https://nirantharanews.com/%e0%b2%ae%e0%b2%a8%e0%b3%86-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%b8%e0%b2%bf-%e0%b2%a8%e0%b3%86%e0%b2%b0%e0%b2%b5%e0%b2%be%e0%b2%97%e0%b2%b2%e0%b3%81-%e0%b2%b9%e0%b3%8b%e0%b2%a6/#dm90YV9tYWluX25 ಮೂಡುಬಿದಿರೆ : ಬಾಲ್ಯದಲ್ಲಿ ಕೋಣಗಳ ಲಾಲನೆ-ಪಾಲನೆಯಲ್ಲಿ ಆಸಕ್ತಿ ಹೊಂದಿ ಕೋಣಗಳತ್ತ ಆಕರ್ಷಿತರಾಗಿ ಅವುಗಳ ಆರೈಕೆ ಸಹಿತ ಓಟದೊಳಗೆ ಆಟವಾಡುತ್ತಿದ್ದ ಹುಡುಗ ಇಂದು ತೌಳವ ಸಂಸ್ಕೃತಿಯ ಪ್ರತೀಕ, ಜಾನಪದ ಕ್ರೀಡೆಯಾದ ಕಂಬಳದ ಕರೆಗಳಲ್ಲಿ ಕೋಣಗಳನ್ನು ಓಡಿಸುತ್ತಾ ಹಲವಾರು ದಾಖಲೆಗಳೊಂದಿಗೆ ಪದಕಗಳ ಸಿರಿಯನ್ನು ತನ್ನ ಮುಂಡಾಸಿಗೇರಿಸಿಕೊಳ್ಳುವ ಮೂಲಕ “ಕಂಬಳದ ಚಿನ್ನದ ಓಟಗಾರ” ಎಂಬ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links