ಮಧ್ಯಮ ವರ್ಗದ ಹುಡುಗ ಅನಿರುದ್ಧ್ ಗೆ ಕೀರ್ತಿ ವಿಷ್ಣುವರ್ಧನ್ ಜೋಡಿಯಾಗಿದ್ದೇಗೆ ಗೊತ್ತಾ? ವಿಷ್ಣು ಅವರ ದೊಡ್ಡಗುಣ ನೋಡಿ..

Source Credit RJ News Kannada

ಅನಿರುದ್ಧ್ ಎನ್ನುವ ಹೆಸರು ಇದೀಗ ಬರಿ ಹೆಸರಾಗಿ ಉಳಿದಿಲ್ಲ.. ಕನ್ನಡ ಜನತೆಯ ಮನೆಮನದಲ್ಲಿ ಅಚ್ಚಿಳಿದಿದೆ.. ಪ್ರತಿದಿನ ಇವರನ್ನು ನೋಡುವ ಸಲುವಾಗಿ ರಾತ್ರಿ 8‌.30 ಆಗುವುದನ್ನೇ ಕಾದು ಕುಳಿತಿರುತ್ತಾರೆ..

ಇಂತಹ ಅನಿರುದ್ಧ್ ಅವರ ನಿಜ ಜೀವನದ ಕತೆ ನಿಜಕ್ಕೂ ರೋಮಾಂಚಕ.. ಹೆಣ್ಣೆಂದರೆ ಒಂದು ಶಕ್ತಿ.. ಹೆಣ್ಣೆಂದರೆ ಒಂದು ಆತ್ಮಾಭಿಮಾನ.. ಹೆಣ್ಣೆಂದರೆ ಸಹನೆ.. ಹೆಣ್ಣೆಂದರೆ ಕರುಣೆ.. ಹೆಣ್ಣೆಂದರೆ ಗೌರವ.. ಹೆಣ್ಣೆಂದರೆ..? ಬಣ್ಣಿಸಲು ನಾ ಬಹಳ ಚಿಕ್ಕವ.. ನನ್ನ ಜೀವನದ ಜ್ಯೋತಿ ಕೀರ್ತಿ ಅವರು ಎನ್ನುವ ಅನಿರುದ್ಧ್ ಅವರು ಕೀರ್ತಿ ವಿಷ್ಣುವರ್ಧನ್ ಅವರನ್ನು ಮದುವೆಯಾಗಿದ್ದಾದರೂ ಹೇಗೆ ಎಂಬುದು ಇಲ್ಲಿದೆ ನೋಡಿ..

ಅನಿರುದ್ಧ್ ಮಧ್ಯಮ ವರ್ಗದ ಕುಟುಂಬದ ಹುಡುಗ.. ಹುಟ್ಟಿದ್ದು ಧಾರವಾಡದಲ್ಲಿ.. ಅಪ್ಪ ಆರ್ಕಿಟೆಕ್ಟ್ ಆಗಿದ್ದರು.. ಇವರೂ ಕೂಡ ಅದನ್ನೇ ಓದಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು.. ಖಾಸಗಿ ಸಂಸ್ಥೆಯೊಂದರಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿಕೊಂಡರು.. ಹುಟ್ಟು ಪ್ರತಿಭಾವಂತನಾಗಿದ್ದ ಅನಿರುದ್ಧ್ ಅವರಿಗೆ ಒಂದೇ ಕೆಲಸದಲ್ಲಿ ಸುಮ್ಮನಿರಲು ಸಾಧ್ಯವಾಗುತ್ತಿರಲಿಲ್ಲ..

ತಮ್ಮ ಕೆಲಸ ಮುಗಿಸಿ ಸಂಜೆಯ ಮೇಲೆ ಇತರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು.. ಆರ್ಕಿಟೆಕ್ಟ್ ಒಬ್ಬನಲ್ಲಿ ಕಲಾ ಸರಸ್ವತಿ ಅಡಗಿ ಕೂತಿದ್ದಳು.. ರಂಗಭೂಮಿ ಕಲಾವಿದನಾಗಿ ಅನಿರುದ್ಧ್ ಗುರುತಿಸಿಕೊಂಡಿದ್ದರು.. ಅಭಿನಯ ಶಾರದೆ ಅನಿರುದ್ಧ್ ಅವರ ಕೈಹಿಡಿದಿದ್ದರು..

ಇವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅದರ ನಿರ್ದೇಶಕರು ಮತ್ಯಾರೂ ಅಲ್ಲ ವಿಷ್ಣುವರ್ಧನ್ ಅವರ ಅಣ್ಣ.. ಹೀಗೆ ಒಮ್ಮೆ ವಿಷ್ಣುವರ್ಧನ್ ಅವರು ನಾಟಕ ನೋಡಲು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿದ್ದರು.. ವೇದಿಕೆ ಮೇಲೆ ಅನಿರುದ್ಧ್ ಅವರ ನಟನೆ ನೋಡಿ ಬಹಳ ಮೆಚ್ಚಿಕೊಂಡು ಅದೇ ವೇದಿಕೆಯಲ್ಲಿ ಅನಿರುದ್ಧ್ ಅವರನ್ನು ಶಂಕರ್ ನಾಗ್ ಅವರಿಗೆ ಹೋಲಿಸಿದ್ದರು..

ಆ ಸಮಯದಲ್ಲಿ ಅನಿರುದ್ಧ್ ಅವರಿಗಾದ ರೋಮಾಂಚನ ಒಬ್ಬ ಕಲಾವಿದನಿಗೆ ಮತ್ತೇನು ಬೇಡ ಎನಿಸುವಷ್ಟು ಸಂತೋಷ ನೀಡಿತ್ತು.. ನಂತರ ಅನಿರುದ್ಧ್ ಅವರ ಗುಣ ಸ್ವಭಾವವನ್ನು ತಿಳಿದಿದ್ದ ವಿಷ್ಣುವರ್ಧನ್ ಅವರು ಖುದ್ದು ಅವರೇ ಅನಿರುದ್ಧ್ ಅವರ ಬಳಿ ತಮ್ಮ ಮಗಳು ಕೀರ್ತಿ ಅವರ ಮದುವೆ ವಿಷಯವನ್ನು ಪ್ರಸ್ತಾಪಿಸಿ ಅನಿರುದ್ಧ್ ಅವರ ಅಭಿಪ್ರಾಯವನ್ನು ಕೇಳಿದರು..

ಅದಾಗಲೇ ನಟನೆಯಲ್ಲಿ ಗುರುತಿಸಿಕೊಂಡಿದ್ದ ಅನಿರುದ್ಧ್ ಅವರು ಒಂದು ಸಿನಿಮಾ ಮುಗಿಸಿ‌ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದರು.. ಆಗ ವಿಷ್ಣುವರ್ಧನ್ ಅವರ ಮನೆಗೆ ಅವರನ್ನು ಭೇಟಿ ಮಾಡುವ ಸಲುವಾಗಿ ಹೋದರು.. ನಾನು ಮದ್ಯಮ ವರ್ಗದ ಕುಟುಂಬದಿಂದ ಬಂದವನು.. ಈಗ ತಾನೆ ನನ್ನ ವೃತ್ತಿ ಆರಂಭವಾಗಿದೆ.. ನೀವು ಬಹಳ ಪ್ರೀತಿಯಿಂದ ಮಗಳನ್ನು ಸಾಕಿದ್ದೀರಾ.. ಅವರು ನನ್ನೊಂದಿಗೆ ಹೊಂದಿಕೊಳ್ಳುತ್ತಾರಾ? ಅವರ ಜೀವನ ಶೈಲಿಯನ್ನು ಭರಿಸಲು ನನ್ನಿಂದ ಕಷ್ಟವಾಗಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ..

ಆದರೆ ದೊಡ್ಡ ಗುಣದ ಒಡೆಯ ವಿಷ್ಣುವರ್ಧನ್ ಅವರು ಅನಿರುದ್ಧ್ ಅವರ ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಒಂದೇ ಒಂದು ಮಾತು ಹೇಳಿದರು.. “ಅದಾಗಲೇ ದೊಡ್ಡ ಹೆಸರು ಮಾಡಿ ಸೂಪರ್ ಸ್ಟಾರ್ ಆಗಿದ್ದ ಭಾರತಿ ಅವರನ್ನು ಮದುವೆಯಾಗುವ ಸಮಯದಲ್ಲಿ ನನ್ನ ಪರಿಸ್ಥಿತಿ ಕೂಡ ಹಾಗೆ ಇತ್ತು” ಎಂದರಂತೆ..

ಆ ತಕ್ಷಣ ವಿಷ್ಣುವರ್ಧನ್ ಅವರ ಶ್ರೇಷ್ಠ ವ್ಯಕ್ತಿತ್ವಕ್ಕೆ ಅನಿರುದ್ಧ್ ತಲೆ ಬಾಗಿ ಬಿಟ್ಟಿದ್ದರು.. ಅಷ್ಟೇ ಅಲ್ಲದೆ.. ನೀವೊಬ್ಬ ಒಳ್ಳೆಯ ಮನುಷ್ಯ.. ಅದು ನನಗೆ ಗೊತ್ತು… ನನ್ನ ಮಗಳನ್ನು ನೋಡಿಕೊಳ್ಳಲು ಅಷ್ಟು ಸಾಕು.. ನನಗೆ ನಿಮ್ಮ ಮೇಲೆ ಭರವಸೆ ಇದೆ ಎಂದರಂತೆ..

ಸಂದೇಹ, ಆತಂಕದಲ್ಲಿ ಹೋಗಿದ್ದ ಅನಿರುದ್ಧ್ ಅವರ ಮನಸ್ಸು ಅದಾಗಲೇ ಹಗುರವಾಗಿತ್ತು.. ಅನಿರುದ್ಧ್ ಅವರು ಒಳ್ಳೆಯ ಗಾಯಕ‌ ಕೂಡ… ಈ ವಿಷಯ ವಿಷ್ಣುವರ್ಧನ್ ಅವರಿಗೆ ಗೊತ್ತಿತ್ತು.. ಹಾಡೊಂದನ್ನು ಹಾಡಿ ಎಂದು ಮನವಿ ಮಾಡಿದರಂತೆ.. ಆಗ ಅನಿರುದ್ಧ್ ಅವರು ಕೀರ್ತಿ ಅವರಿಗಾಗಿ ಹಾಡು ಹೇಳಿದ್ದರಂತೆ..

ಆ ದಿನ ಅನಿರುದ್ಧ್ ಅವರ ಬಾಳಿನ ದೇವತೆಯಾಗಿ ಕೀರ್ತಿ ಅವರು ಕಾಲಿಟ್ಟರು.. ವಿಷ್ಣುವರ್ಧನ್ ಹಾಗೂ ಭಾರತಿ ಅವರು ಅನಿರುದ್ಧ್ ಅವರಿಗೂ ತಂದೆ ತಾಯಿಯಾದರು.. ಇನ್ನು ಕೀರ್ತಿ ಅವರು ಸೂಪರ್ ಸ್ಟಾರ್ ಮಗಳಾದರೂ ಕೂಡ ಅವರ ವಿನಯತೆ ಸರಳ ವ್ಯಕ್ತಿತ್ವಕ್ಕೆ ಅನಿರುದ್ಧ್ ಅವರು ಸೋತು ಹೋದರು.. ತಮ್ಮ ಬಾಳಿನ ದೇವತೆಯಂತೆ ಕೀರ್ತಿ ಅವರನ್ನು ಕಂಡರು..

ವಿಷ್ಣುವರ್ಧನ್ ಅವರಿಗೆ ಅನಿರುದ್ಧ್ ಅವರು ಕೇವಲ ಅಳಿಯನಾಗಿರಲಿಲ್ಲ.. ಆ ಮನೆಯ ಮಗನಾಗಿದ್ದರು.. ಪ್ರತಿಯೊಂದು ಜವಬ್ದಾರಿಯನ್ನೂ ಕೂಡ ಮಗನಾಗಿ ನಿರ್ವಹಿಸುತ್ತಿದ್ದರು.. ವಿಷ್ಣುವರ್ಧನ್ ಅವರಿಗೂ ಕೂಡ ಅನಿರುದ್ಧ್ ಅವರ ಮೇಲೆ ತುಂಬಾ ಭರವಸೆ ಪ್ರೀತಿ ಇತ್ತು.. ಹೀಗೆ ಒಮ್ಮೆ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಾಗ ಧರ್ಮಾಧಿಕಾರಿಗಳು ಮಂಜುನಾಥನ ಲಾಕೆಟ್ ಇರುವ ಚಿನ್ನದ ಸರವೊಂದನ್ನು ವಿಷ್ಣುವರ್ಧನ್ ಅವರ ಕೊರಳಿಗೆ ಹಾಕಿದರಂತೆ.. ಆ ತಕ್ಷಣ ಅದನ್ನು ತೆಗೆದು ವಿಷ್ಣುವರ್ಧನ್ ಅವರು ಅನಿರುದ್ಧ್ ಅವರ ಕೊರಳಿಗೆ ಹಾಕಿ ಹರಸಿದರು.. ಅನಿರುದ್ಧ್ ಅವರ ಮೇಲಿನ ಕಾಳಜಿ ಪ್ರೀತಿಯನ್ನು ಕಂಡು ಅನಿರುದ್ಧ್ ಅವರು ಆ ಕ್ಷಣದಲ್ಲಿ ಮೂಕರಾದರು..

ನನಗಿಂತ ಹೆಚ್ಚು ವಿದ್ಯಾವಂತರಿದ್ದರೂ, ಶ್ರೀಮಂತರಿದ್ದರೂ ಕೂಡ ವಿಷ್ಣುವರ್ಧನ್ ಅವರು ನನಗೆ ಏಕೆ ಮಗಳನ್ನು ಕೊಟ್ಟರು ಎಂದು ಅನಿರುದ್ಧ್ ಅವರು ಬಹಳಷ್ಟು ಬಾರಿ ಆಲೋಚಿಸಿದ್ದರಂತೆ.. ಸ್ವತಃ ಲೇಖಕರೂ ಆಗಿರುವ ಅನಿರುದ್ಧ್ ಅವರು ತಮ್ಮ ಈ ಮದುವೆಯ ಸುಂದರ ಕ್ಷಣಗಳ ವಿಚಾರವನ್ನು ಒಮ್ಮೆ ಆಂಗ್ಲ ಪತ್ರಿಕೆಯೊಂದರಲ್ಲಿ ಹಂಚಿಕೊಂಡಿದ್ದರು..

ವಿಷ್ಣುವರ್ಧನ್ ಅವರ ನಿರ್ಧಾರ ಎಂದರೆ ಅದು ದೇವರ ನಿರ್ಧಾರವೇ ಸರಿ.. ಅನಿರುದ್ಧ್ ಅವರ ಗುಣಕ್ಕೆ.. ಅವರು ಕೀರ್ತಿ ಅವರನ್ನು ತಾಯಿಯಂತೆ ನೋಡುವ ರೀತಿಗೆ.. ಕೀರ್ತಿ ಅವರ ಬಗ್ಗೆ ಆಡುವ ಮಾತುಗಳಿಗೆ ಜನರು ಸೋತು ಹೋಗಿದ್ದರು.. ಆದರೆ ವಿಷ್ಣುವರ್ಧನ್ ಅವರಿಗೆ ಅನಿರುದ್ದ್ ಅವರ ಒಳ್ಳೆಯ ಗುಣ ಅದಾಗಲೇ ತಿಳಿದು ತಮ್ಮ ಮಗಳನ್ನೇ ನೀಡಿದ್ದರು..

ಅತ್ತ ಸೂಪರ್ ಸ್ಟಾರ್ ಮಗಳಾದರೂ ಚೂರು ಅಹಂಕಾರವಿಲ್ಲದ ಕೀರ್ತಿ ಅವರು.. ಇತ್ತ ಎಷ್ಟೇ ದೊಡ್ಡ ಮಟ್ಟಕ್ಕೆ ಹೋದರೂ ಡೌನ್ ಟು ಅರ್ಥ್ ರೀತಿಯಲ್ಲಿ ಇರುವ ಅನಿರುದ್ದ್ ಅವರು.. ದೇವರೇ ನಿಶ್ಚಯಿಸಿದ ಜೋಡಿ ಇದು.. ನೂರ್ಕಾಲ ಸಂತೋಷವಗಿರಲಿ ಎಂಬುದೇ ಕನ್ನಡಿಗರ ಹಾರೈಕೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಇದೊಂದು ಪುಕ್ಕಲು ಸರ್ಕಾರ: ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ಟೀಕೆ

Thu Dec 19 , 2019
Source Credit Oneindia.com Pin it Email https://nirantharanews.com/%e0%b2%ae%e0%b2%a7%e0%b3%8d%e0%b2%af%e0%b2%ae-%e0%b2%b5%e0%b2%b0%e0%b3%8d%e0%b2%97%e0%b2%a6-%e0%b2%b9%e0%b3%81%e0%b2%a1%e0%b3%81%e0%b2%97-%e0%b2%85%e0%b2%a8%e0%b2%bf%e0%b2%b0%e0%b3%81%e0%b2%a6/#Wg== Karnataka oi-Amith | Published: Thursday, December 19, 2019, 8:51 [IST] ಬೆಂಗಳೂರು, ಡಿಸೆಂಬರ್ 19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ವಿವಿಧೆಡೆ ನಿಷೇಧಾಜ್ಞೆ ಜಾರಿ ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ‘ಇದೊಂದು ಪುಕ್ಕಲು ಸರ್ಕಾರ. ಜನಶಕ್ತಿಗೆ ಹೆದರಿ ನಿಷೇಧಾಜ್ಞೆ ಜಾರಿ ಮಾಡಿದೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ Pin it Email https://nirantharanews.com/%e0%b2%ae%e0%b2%a7%e0%b3%8d%e0%b2%af%e0%b2%ae-%e0%b2%b5%e0%b2%b0%e0%b3%8d%e0%b2%97%e0%b2%a6-%e0%b2%b9%e0%b3%81%e0%b2%a1%e0%b3%81%e0%b2%97-%e0%b2%85%e0%b2%a8%e0%b2%bf%e0%b2%b0%e0%b3%81%e0%b2%a6/#bG9hZGluZy5naWY […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links