ಮದುವೆಯಾದ ಮೇಲೆ ನಟಿಯರಿಗೆ ಪ್ರಾಮುಖ್ಯತೆ ಕಡಿಮೆ: ಹೇಮ ಬೇಸರದ ನುಡಿ

Source Credit Filmibeat.com

ಮದುವೆ ನಂತರ ಬಂತು ‘ಅಮೇರಿಕಾ ಅಮೇರಿಕಾ’

‘ಅಮೇರಿಕಾ ಅಮೇರಿಕಾ’ ಸಿನಿಮಾದ ಸಮಯದಲ್ಲಿಯೇ ಹೇಮಾ ವಿವಾಹ ನಡೆಯಿತು. ಮದುವೆಯ ನಂತರ ಬಿಡುಗಡೆಯಾದ ಸಿನಿಮಾ ದೊಡ್ಡ ಹಿಟ್ ಆಯ್ತು. ಹೇಮಾ ನಟಿಸಿದ್ದ ಭೂಮಿ ಪಾತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ, ಅನೇಕ ಅವಕಾಶಗಳು ಅವರಿಗೆ ಹುಡುಕಿಕೊಂಡು ಬಂದವು. ಆದರೆ, ಹೇಮಾ ಆ ಸಮಯದಲ್ಲಿ ಗೊಂದಲದಲ್ಲಿ ಇದ್ದರು.

ತಾಳಿ ಬಂದ ಮೇಲೆ ಪ್ರಾಮುಖ್ಯತೆ ಕಡಿಮೆ

ಮದುವೆಯ ನಂತರ ಹೇಮಾಗೆ ಅವಕಾಶಗಳು ಬಂದರೂ, ಯಾವುದು ಅಷ್ಟೊಂದು ಇಷ್ಟ ಆಗಲಿಲ್ಲವಂತೆ. ಆದರೆ, ‘ರವಿಮಾಮ’ ಹಾಗೂ ‘ಸಂಭ್ರಮ’ ಸಿನಿಮಾಗಳಲ್ಲಿ ನಟಿಸಿದರು. ಆ ನಂತರ ಯಾವುದೇ ಸಿನಿಮಾ ಮಾಡಲು ಮನಸ್ಸು ಒಪ್ಪಲಿಲ್ಲ. ವಿವಾಹವಾದ ಮೇಲೆ ನಟಿಯರಿಗೆ ಸಿಗುವ ಪ್ರಾಮುಖ್ಯತೆ ಕಡಿಮೆ ಆಗುತ್ತದೆ ಎಂದು ಆಗ ಅವರಿಗೆ ಅರ್ಥವಾಯಿತಂತೆ.

ಸಿನಿಮಾದಿಂದ ಕಿರುತೆರೆಗೆ

ಸಿನಿಮಾ ಕ್ಷೇತ್ರ ಬೇಡ ಎಂದು ನಿರ್ಧಾರ ಮಾಡಿದ ಹೇಮಾ ನಂತರ ಟಿವಿ ಕ್ಷೇತ್ರದಲ್ಲಿ ಬ್ಯುಸಿಯಾದರು. ಸತತ 10 ವರ್ಷ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಟಿವಿ ಸೀರಿಯಲ್ ಗಳಲ್ಲಿಯೇ ಹೆಚ್ಚು ಖುಷಿ ಹೊಂದಿದ ಹೇಮಾ ಬಳಿಕ ಸಿನಿಮಾ ಮಾಡಲಿಲ್ಲ. ಈವರಗೆ ಆರು ಸಿನಿಮಾಗಳಲ್ಲಿ ಮಾತ್ರ ಹೇಮಾ ನಟಿಸಿದ್ದಾರೆ.

ಒಳ್ಳೆಯ ಪಾತ್ರ ಬಹಳ ಮುಖ್ಯ

ಒಂದು ಸಿನಿಮಾದಲ್ಲಿ ತಮ್ಮ ಪಾತ್ರ ಏನು ಎನ್ನುವುದು ಹೇಮಾರಿಗೆ ಬಹಳ ಮುಖ್ಯವಂತೆ. ಹೀಗಾಗಿ ಬಂದ ಅದೆಷ್ಟೋ ಅವಕಾಶಗಳನ್ನು ನಿರಾಕರಿಸಿದ್ದಾರೆ. ಕಥೆ ಹೇಳಲಿಲ್ಲ ಎಂಬ ಕಾರಣಕ್ಕೆ ರಜನಿಕಾಂತ್ ಸಿನಿಮಾವನ್ನು ಕೈ ಬಿಟ್ಟಿದ್ದಾರೆ. ಕಡಿಮೆ ಸಿನಿಮಾ ಮಾಡಿದರೂ, ಒಳ್ಳೆಯ ಹಾಗೂ ಜನ ನೆನಪಿನಲ್ಲಿ ಇಟ್ಟುಕೊಳ್ಳುವ ಸಿನಿಮಾ ಮಾಡಬೇಕು ಎನ್ನವುದು ಹೇಮಾ ಅಭಿಪ್ರಾಯ.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್!

Mon Jan 27 , 2020
Source Credit Filmibeat.com Pin it Email https://nirantharanews.com/%e0%b2%ae%e0%b2%a6%e0%b3%81%e0%b2%b5%e0%b3%86%e0%b2%af%e0%b2%be%e0%b2%a6-%e0%b2%ae%e0%b3%87%e0%b2%b2%e0%b3%86-%e0%b2%a8%e0%b2%9f%e0%b2%bf%e0%b2%af%e0%b2%b0%e0%b2%bf%e0%b2%97%e0%b3%86-%e0%b2%aa/#MS0xNTc5OTQyODU ಹೇಮ ಸಿನಿಮಾ ಎಂಟ್ರಿಗೆ ಕಾರಣ ರಾಜ್ ಕುಮಾರ್ ರಾಜ್ ಕುಮಾರ್ ರಿಗೆ ಹೇಮಾ ಕುಟುಂಬದ ತುಂಬ ವರ್ಷಗಳಿಂದ ಪರಿಚಯ ಇತ್ತು. ಹೇಮ ಚಿಕ್ಕ ವಯಸ್ಸಿನ ಹುಡುಗಿ ಆಗಿದ್ದಾಗಿನಿಂದ ಅವರನ್ನು ರಾಜ್ ಕುಮಾರ್ ನೋಡಿಕೊಂಡು ಬಂದಿದ್ದರು. ಅಲ್ಲದೆ ಹೇಮಾ ಸಿನಿಮಾ ಎಂಟ್ರಿಗೆ ಸಹ ಅವರೇ ಕಾರಣರಾದರು. ನೃತ್ಯ, ನಾಟಕದಲ್ಲಿ ಇದ್ದ ಹೇಮಾ ‘ಜೀವನ ಚೈತ್ರ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದರು. Pin it Email https://nirantharanews.com/%e0%b2%ae%e0%b2%a6%e0%b3%81%e0%b2%b5%e0%b3%86%e0%b2%af%e0%b2%be%e0%b2%a6-%e0%b2%ae%e0%b3%87%e0%b2%b2%e0%b3%86-%e0%b2%a8%e0%b2%9f%e0%b2%bf%e0%b2%af%e0%b2%b0%e0%b2%bf%e0%b2%97%e0%b3%86-%e0%b2%aa/#Mi0xNTc5OTQyODY ಹೇಮಾ ಕಾಲಿಗೆ ರಾಜ್ ನಮಸ್ಕಾರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links