ಮಗ ದೂರ ಇರುವ ಕಾರಣ ವಾಸುಕಿ ಅವರ ತಾಯಿ ಮಾಡ್ತಾ ಇರೋ ಕೆಲಸವೇನು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಸೀಸನ್ 7 ರಲ್ಲಿ ಯಾರೂ ಕೂಡ ಇಷ್ಟ ಇಲ್ಲ ಅಂತ ಹೇಳದೆ ಇರುವ ಸ್ಪರ್ಧಿ ಎಂದರೆ ಅದು ವಾಸುಕಿ ವೈಭವ್.. ವಾಸುಕಿ ವೈಭವ್ ಸಿನಿಮಾ ಕ್ಷೇತ್ರದಲ್ಲಿ ಇದ್ದರೂ ಕೂಡ ಅಷ್ಟಾಗಿ ಯರೂ ಇವರನ್ನು ಗುರುತಿಸಿರಲಿಲ್ಲ.. ಆದರೆ ಬಿಗ್ ಬಾಸ್ ಮನೆಗೆ ಬಂದ ನಂತರ ವಾಸುಕಿ ಅವರ ಲೈಫ್ ಚೇಂಜ್ ಆಯಿತೆನ್ನಬಹುದು..

ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ವಾಸುಕಿ ಹಾಡಿದ ಮನ್ಸಿಂದ ಯಾರೂನೂ ಕೆಟ್ಟೋರಲ್ಲ ಹಾಡಿಗೆ ಫಿದಾ ಆಗದವರು ಯಾರೂ ಇಲ್ಲವೆನ್ನಬಹುದು.. ಇನ್ನು ವಾಸುಕಿ ಅವರ ತಾಯಿ ಮಗನ ಬಗ್ಗೆ ಏನ್ ಹೇಳ್ತಾರೆ? ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ವಾಸುಕಿ ವೈಭವ್ ಅವರ ತಾಯಿ ಮಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..

ಹೌದು ವಾಸುಕಿ ವೈಭವ್ ಅವರು ಅಮ್ಮನ ಮುದ್ದಿನ ಮಗ.. ಎಂದೂ ಕೂಡ ಇಷ್ಟು ದಿನ ತಾಯಿಯನ್ನು ಬಿಟ್ಟು ಇದ್ದಿದ್ದಿಲ್ಲ.. ಅಮ್ಮನ ಜೊತೆ ಮಾತನಾಡದೇ ಮಲಗುತ್ತಿರಲಿಲ್ಲವಂತೆ ವಾಸುಕಿ..

ಇನ್ನು ಅಪ್ಪನ ಜೊತೆ ವಾಸುಕಿ ಅವರು ಕಳೆದ ಕೊನೆ ಕ್ಷಣಗಳನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದನ್ನು ನೆನೆದು ಕಣ್ಣೀರಿಟ್ಟರು.. ಇನ್ನು ಬಿಗ್ ಬಾಸ್ ಮನೆಯಲ್ಲಿ ವಾಸುಕಿ ಕ್ಯಾಪ್ಟನ್ ಆಗಿದ್ದನ್ನು ನೆನೆದು ಸಂತೋಷ ಪಟ್ಟರು.. ಮಗ ಚೆನ್ನಾಗಿ ಆಡಲಿ ಎಂದು ಹಾರೈಸಿದರು..

ಅಷ್ಟೇ ಅಲ್ಲದೆ ಸ್ಮಾರ್ಟ್ ಫೋನ್ ಬಳಸದ ವಾಸುಕಿ ಅವರ ಅಮ್ಮ ತಮ್ಮ ಮಗ ದೂರ ಇರುವುದಕ್ಕೆ ಮಗನನ್ನು ನೋಡುವ ಸಲುವಾಗಿ ಮಾಡುತ್ತಿರುವ ಕೆಲಸ ತಿಳಿದರೆ ನಿಜಕ್ಕೂ ಮನತುಂಬಿ ಬರುತ್ತದೆ.‌ ಅದಕ್ಕೇ ಇರಬೇಕು ತಾಯಿ ಪ್ರೀತಿಗಿಂತ ಮಿಗಿಲಾದದ್ದು ಬೇರೇನು ಇಲ್ಲ ಎನ್ನುವುದು..

ಹೌದು ವಾಸುಕಿ ಅವರ ತಾಯಿ ಸ್ಮಾರ್ಟ್ ಫೋನ್ ಬಳಸದೇ ಇರುವ ಕಾರಣ.. ಮಗನನ್ನು ಪದೇ ಪದೇ ನೋಡುವ ಸಲುವಾಗಿ ರಾತ್ರಿಯೆಲ್ಲಾ ಎಚ್ಚರವಾಗಿರ್ತಾರೆ. ರಾತ್ರಿ 9 ಕ್ಕೆ ಪ್ರಸಾರವಾಗುವ ಮೊದಲ ಶೋ ನೋಡಿದ ನಂತರ ಮತ್ತೆ 11 ಗಂಟೆಯಿಂದ 12.30 ರವರೆಗೆ ರೀಟೆಲಿಕಾಸ್ಟ್ ನೋಡುತ್ತಾರೆ.. ಅಷ್ಟೇ ಅಲ್ಲದೆ ಮತ್ತೆ ಬೆಳಗಿನ ಜಾವ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ವಾಗುವ ರೀಟೆಲಿಕಾಸ್ಟ್ ಅನ್ನು ಕೂಡ ನೋಡುತ್ತಾರಂತೆ.. ಆದರೂ ಮಗನನ್ನು ನೋಡಿದ ತೃಪ್ತಿ ಆ ಜಿವಕ್ಕೆ ಆಗದೆ ಮಧ್ಯಾಹ್ನ 12ಕ್ಕೆ ಮತ್ತೆ ಬಿಗ್ ಬಾಸ್ ಪ್ರಸಾರವಾಗುವುದನ್ನೂ ಕೂಡ ನೋಡುತ್ತಾರಂತೆ..

ಮಗ ತನ್ನ ಜೀವನದಲ್ಲಿ ಅಂದುಕೊಂಡದ್ದೆಲ್ಲಾ ಆಗಲಿ… ಅವನು ಮನ್ಸಿಂದ ಯಾರೂನು ಹಾಡು ಹೇಳಿದ್ದು.. ಹುಟ್ಟಿದ ಹಬ್ಬದ ದಿನ ಸುದೀಪ್ ಅವರು ವಾಸುಕಿಗಾಗಿ ಹಾಡು ಹಾಡಿದ್ದನ್ನು ನೆನೆದು ಕಣ್ಣೀರಿಟ್ಟರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಹದಾಯಿಗೆ ಇಲ್ಲ ತಡೆ: ರಾಜ್ಯಕ್ಕೆ ಕೇಂದ್ರ ಸಚಿವ ಪತ್ರ

Wed Dec 25 , 2019
Source Credit Oneindia.com Pin it Email https://nirantharanews.com/%e0%b2%ae%e0%b2%97-%e0%b2%a6%e0%b3%82%e0%b2%b0-%e0%b2%87%e0%b2%b0%e0%b3%81%e0%b2%b5-%e0%b2%95%e0%b2%be%e0%b2%b0%e0%b2%a3-%e0%b2%b5%e0%b2%be%e0%b2%b8%e0%b3%81%e0%b2%95%e0%b2%bf-%e0%b2%85%e0%b2%b5/#Wg== Karnataka oi-Manjunatha C | Published: Wednesday, December 25, 2019, 7:51 [IST] ಪಣಜಿ, ಡಿಸೆಂಬರ್ 25: ಕಳಸಾ-ಬಂಡೂರಿ ಕುಡಿಯುವ ಯೋಜನೆಗೆ ನೀಡಿದ್ದ ಅನುಮತಿಗೆ ತಡೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಅರಣ್ಯ ಇಲಾಖೆಯ ಅಗತ್ಯ ಒಪ್ಪಿಗೆ ಪಡೆದು, ನ್ಯಾಯಮಂಡಳಿ ಗೆಜೆಟ್ ಹೊರಡಿಸಿದ ಕೂಡಲೇ ಯೋಜನೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links