ಮಗುವಿಗೆ ಸೀಬೆ ಹಣ್ಣು ತಿನಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Source Credit Kannada.boldsky.com

Baby

oi-Reena TK

|

ಪ್ರತಿಯೊಂದು ಅಮ್ಮಂದಿರಿಗೆ ಮಕ್ಕಳಿಗೆ ಏನು ತಿನ್ನುವುದಕ್ಕೆ ಕೊಡುವುದೇ ಎಂಬ ಚಿಂತೆಯಾಗಿರುತ್ತದೆ. ಹಣ್ಣುಗಳನ್ನು ಕೊಡುವಾಗ ಹಣ್ಣುಗಳನ್ನು ಕೊಡುವುದರಿಂದ ಶೀತವಾಗುತ್ತದೆಯೇ ಎಂಬ ಭಯವೂ ಕೆಲ ಅಮ್ಮಂದಿರಲ್ಲಿ ಇದೆ.

ಮಕ್ಕಳ ವೈದ್ಯರು ಮಕ್ಕಳಿಗೆ ಎಲ್ಲಾ ಹಣ್ಣುಗಳನ್ನು ನೀಡುವಂತೆ ಸಲಹೆ ನೀಡಿದರೂ ಮನೆಯಲ್ಲಿ ಹಿರಿಯರು ಬಾಳೆಹಣ್ಣು ಕೊಡಬೇಡ ಶೀತವಾಗುತ್ತೆ, ಸೀಬೆ ಕಾಯಿ ಕೊಡಬೇಡ ಶೀತವಾಗುತ್ತೆ ಎಂಬ ಸಲಹೆಯನ್ನೂ ನೀಡುವುದರಿಂದ ಮಕ್ಕಳಿಗೆ ಹಣ್ಣುಗಳನ್ನು ಕೊಡಬಹುದಾ, ಇಲ್ಲವಾ ಎಂಬ ಮೊದಲ ಬಾರಿಗೆ ತಾಯಿಯಾದವರಿಗೆ ಉಂಟಾಗುವುದು ಸಹಜ. ಏಕೆಂದರೆ ಮಕ್ಕಳಿಗೆ ಏನು ಕೊಡಬೇಕು, ಏನು ಕೊಡಬಾರದು ಎಂಬುವುದರ ಅನುಭವ ಇರುವುದಿಲ್ಲ.

ಮಕ್ಕಳ ಬೆಳವಣಿಗೆಗೆ ಎಲ್ಲಾ ಬಗೆಯ ಹಣ್ಣುಗಳನ್ನು ಕೊಡುವುದು ಒಳ್ಳೆಯದು. ಕಿತ್ತಳೆ ರಸ, ಪಿಯರ್ಸ್, ಸೇಬು ಹಣ್ಣು ಮುಂತಾದ ಹಣ್ಣುಗಳನ್ನು ಮಗುವಿಗೆ 7-8 ತಿಂಗಳು ಇರುವಾಗ ಕೊಡಬಹುದು. ಸೇಬು ಕೊಡುವುದಾದರೆ ಬೇಯಿಸಿ ಕೊಡಿ. ಆದರೆ ಮತ್ತೆ ಕೆಲವು ಹಣ್ಣುಗಳನ್ನು ನೀಡಲು ಸ್ವಲ್ಪ ಹಲ್ಲು ಬರಬೇಕು, ಅದಕ್ಕೆ ಒಂದು ವರ್ಷ ಕಳೆಯಬೇಕು. ಇನ್ನು ವಾರ ಗಂಟಲಿಗೆ ಸಿಕ್ಕಿ ಹಾಕಿಕೊಳ್ಳದಂಥ ಹಣ್ಣುಗಳನ್ನು ನೀಡಬೇಕು, ಬೀಜಗಳಿದ್ದರೆ ಅವುಗಳನ್ನು ತೆಗೆದುಕೊಡಬೇಕು.

ಇಲ್ಲಿ ನಾವು ಮಗುವಿಗೆ ಸೀಬೆ ಹಣ್ಣು ನೀಡುವುದರಿಂದ ಮಗುವಿನ ಬೆಳವಣಿಗೆಗೆ ಹೇಗೆ ಸಹಕಾರಿ ಹಾಗೂ ಅದರಲ್ಲಿರುವ ಪ್ರಯೋಜನಗಳೇನು ಎಂದು ಹೇಳಲಾಗಿದೆ ನೋಡಿ:

ಸೀಬೆ ಹಣ್ಣಿನಲ್ಲಿರುವ ಪೋಷಕಾಂಶಗಳು

100 ಗ್ರಾಂ ಸೀಬೆ ಹಣ್ಣಿನಲ್ಲಿ 80.8ಗ್ರಾಂ ನೀರು, 68 ಕ್ಯಾಲೋರಿ ಶಕ್ತಿ, 2.55 ಗ್ರಾಂ ಪ್ರೊಟೀನ್, 5.4 ಗ್ರಾಂ ನಾರಿನಂಶ, 18ಮಿಗ್ರಾಂ ಕ್ಯಾಲ್ಸಿಯಂ, 228.3ಮಿಗ್ರಾಂ ವಿಟಮಿನ್ ಸಿ, 40 ಗ್ರಾಂ ರಂಜಕ, 22 ಮಿಗ್ರಾಂ ಮೆಗ್ನಿಷ್ಯಿಯಂ, 417 ಗ್ರಾಂ ಪೊಟಾಷ್ಯಿಯಂ, 0.26 ಕಬ್ಬಿಣದಂಶ, ಫೋಲೆಟ್, ವಿಟಮಿನ್ ಎ, ಬಿ 1, ಬಿ2, ಬಿ3 ಇರುವುದರಿಂದ ಮಗುವಿನ ಬೆಳವಣಿಗೆಗೆ ಈ ಹಣ್ಣು ಕೊಡುವುದು ತುಂಬಾ ಒಳ್ಳೆಯದು.

ಸೀಬೆ ಹಣ್ಣು ತಿನ್ನುವುದರಿಂದ ಮಗುವಿಗೆ ದೊರೆಯುವ ಪ್ರಯೋಜನಗಳು

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕಿತ್ತಳೆಯಲ್ಲಿ ಇರುವುದಕ್ಕಿಂತ ನಾಲ್ಕು ಅಧಿಕ ವಿಟಮಿನ್ ಸಿ ಸೀಬೆ ಹಣ್ಣಿನಲ್ಲಿದೆ.

ನರಗಳ ಆರೋಗ್ಯಕ್ಕೆ ಒಳ್ಳೆಯದು

ಮಗುವಿನ ನರ ಹಾಗೂ ಮೆದುಳಿನ ಬೆಳವಣಿಗೆಗೆ ಸೀಬೆ ಹಣ್ಣಿನಲ್ಲಿರುವ ಫೋಲೆಟ್‌ ಅಂಶ ಸಹಕಾರಿಯಾಗಿದೆ, ಮಗುವಿನ ಮೂಳೆಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳಲ್ಲಿ ವಿಟಮಿನ್ ಎ ಕೊರತೆ ಉಂಟಾದರೆ ಜೆರೋಫ್ಥಾಲ್ಮಿಯಾ ಎಂಬ ಆರೋಗ್ಯಕರ ಸಮಸ್ಯೆ ಉಂಟಾಗುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಅಧಿಕವಿರುವುದರಿಂದ ಅವರಲ್ಲಿ ಆರ್‌ಒಎಸ್ ಸಮಸ್ಯೆಗಳಾದ ಅಲ್ಜೈಮರ್ಸ್, ಪಾರ್ಕಿಸನ್, ಹೈಪರೋಕ್ಸಿಯಾ ಮುಂತಾದ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟುತ್ತದೆ.

ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕಾರಿ

ಇದರಲ್ಲಿ ಲಿನೋಲಿಕ್ ಹಾಗೂ ಫಿನೋಲಿಕ್ ಅಂಶವಿರುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ.

ಜೀರ್ಣಕ್ರಿಯೆಗೆ ಒಳ್ಳೆಯದು

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

GET THE BEST BOLDSKY STORIES!

Allow Notifications

You have already subscribed

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ದಾವಣಗೆರೆ; ಪೆಟ್ರೋಲ್ ಬಂಕ್ ಆಮಿಷ ಒಡ್ಡಿ ದೋಚಿದ್ದು ಲಕ್ಷಲಕ್ಷ

Fri Dec 13 , 2019
Source Credit Oneindia.com Pin it Email https://nirantharanews.com/%e0%b2%ae%e0%b2%97%e0%b3%81%e0%b2%b5%e0%b2%bf%e0%b2%97%e0%b3%86-%e0%b2%b8%e0%b3%80%e0%b2%ac%e0%b3%86-%e0%b2%b9%e0%b2%a3%e0%b3%8d%e0%b2%a3%e0%b3%81-%e0%b2%a4%e0%b2%bf%e0%b2%a8%e0%b2%bf%e0%b2%b8/#Wg== Davanagere oi-Lekhaka By ದಾವಣಗೆರೆ ಪ್ರತಿನಿಧಿ | Published: Friday, December 13, 2019, 17:32 [IST] ದಾವಣಗೆರೆ, ಡಿಸೆಂಬರ್ 13: ಪೆಟ್ರೋಲ್ ಬಂಕ್ ಕೊಡಿಸುವ ಆಮಿಷ ಒಡ್ಡಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆಯೊಬ್ಬರು ಸಂಘದ ಸದಸ್ಯೆಗೆ ವಂಚಿಸಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಕಾಕನೂರು ಗ್ರಾಮದ ದಿವ್ಯಾ ವಂಚನೆ ಎಸಗಿರುವವರು. ಸಂಘದ ಸದಸ್ಯೆ ಯಕ್ಕೆಗುಂದಿಯ ಪದ್ಮಾವತಿ ಎಂಬುವರಿಗೆ ಸುಮಾರು 12 ಲಕ್ಷ ರೂಪಾಯಿ ವಂಚಿಸಿರುವುದಾಗಿ ಆರೋಪಿಸಲಾಗಿದೆ. ದಿವ್ಯಾ ಹಾಗೂ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links