ಮಗಳನ್ನು ಬೈದಿದ್ದಕ್ಕೆ.. ಸುದೀಪ್ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಪ್ರಿಯಾಂಕ ತಾಯಿ..

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಕಿರುತೆರೆ ಸ್ಟಾರ್ ಗಳದ್ದೇ ಕಾರುಬಾರೆನ್ನಬಹುದು.. ಅದೇ ರೀತಿ ಕಲರ್ಸ್ ವಾಹಿನಿಯಲ್ಲಿಯೇ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರದ ಮೂಲಕ ಹೆಸರು ಮಾಡಿದ್ದ ಪ್ರಿಯಾಂಕ ಅವರೂ ಕೂಡ ಒಬ್ಬರು..

ಪ್ರಿಯಾಂಕ ಅವರು ಜನರಿಗೆ ಇಷ್ಟವಾದರೂ ಕೂಡ ಅವರು ನಡೆದುಕೊಳ್ಳುವ ರೀತಿ ನೋಡಿದ್ರೆ ಇವರು ಬರೀ ಓವರ್ ಆಕ್ಟಿಂಗ್.. ಬರೀ ಡ್ರಾಮಾ ಎಂದೆಲ್ಲಾ ಅನಿಸುತ್ತಿದ್ದದ್ದು ಸತ್ಯ…

ಅದರಲ್ಲೂ ಮೊನ್ನೆ ಮೊನ್ನೆಯಷ್ಟೇ ಚಾಕ್ಲೆಟ್ ವಿಷಯಕ್ಕೆ ನಡೆದುಕೊಂಡ ರೀತಿ ನೋಡಿ ಪ್ರೇಕ್ಷಕರು ಕಿರಿಕಿರಿ ಮಾಡಿಕೊಂಡದ್ದೂ ಹೌದು.. ಆದರೆ ಇಂತಹ ಪ್ರಿಯಾಂಕಳ ಅಸಲಿ ಕತೆಯನ್ನು ಅವರ ತಾಯಿ ಬಿಚ್ಚಿಟ್ಟಿದ್ದಾರೆ..

ಹೌದು ಪ್ರಿಯಾಂಕ ಆಗಾಗ ಅಪ್ಪನನ್ನು ನೆನೆದು ಕಣ್ಣೀರಾಕೋದನ್ನು ನೋಡಿ, ಜೊತೆಗೆ ವಾರದ ಕತೆಯಲ್ಲಿ ಕಿಚ್ಚನ ಜೊತೆ ಅಪ್ಪನ ಸಮಾಧಿಯ ಪಕ್ಕದಲ್ಲಿ ಹೋಗಿ ಮಲಗಿಬಿಟ್ರೆ ಸಾಕು ಅನ್ನಿಸ್ತಿದೆ ಎಂದಿದ್ದು ಹಾಗೂ ದೀಪಾವಳಿ ಸಮಯದಲ್ಲಿ ಎಲ್ಲರೂ ಹೊರಗೆ ಹಬ್ಬವನ್ನು ಆಚರಿಸುತ್ತಿದ್ದರೆ ಇತ್ತ ಪ್ರಿಯಾಂಕ ಮಾತ್ರ ಬೆಡ್ ರೂಮ್ ಏರಿಯಾದಲ್ಲಿ ಕಣ್ಣೀರಿಡುತ್ತಿದ್ದದ್ದನ್ನು ನೋಡಿ ಇದೆಲ್ಲಾ ಸಿಂಪತಿಗಾಗಿ ಮಾಡ್ತಾ ಇರೋ ಡ್ರಾಮಾ ಎಂದೆಲ್ಲಾ ಹೇಳಲಾಗ್ತಿತ್ತು..

ಆದರೆ ಅಸಲಿ ಕತೆ ಅವರ ಅಮ್ಮ ಹೇಳಿದ ಮೇಲಷ್ಟೆ ತಿಳಿದಿದೆ.. ಹೌದು ಮಾದ್ಯಮದ ಸಂದರ್ಶನವೊಂದರಲ್ಲಿ ಪ್ರಿಯಾಂಕ ಅವರ ತಾಯಿ ಪ್ರಿಯಾಂಕ ಅವರ ಬಗ್ಗೆ ಎಲ್ಲವನ್ನು ತಿಳಿಸಿದ್ದಾರೆ..

ಪ್ರಿಯಾಂಕ ಮಾಡ್ತಾ ಇರೋದು.. ಅವರ ತಂದೆಯನ್ನು ನೆನೆದು ಕಣ್ಣೀರಿಟ್ಟಿದ್ದು ಯಾವುದು ಡ್ರಾಮಾ ಅಲ್ಲ.. ಅವರ ತಂದೆ ತೀರಿಹೋಗಿ ಈಗಷ್ಟೇ 4 ತಿಂಗಳಾಗಿದೆ.. ಪ್ರಿಯಾಂಕ ಬಿಗ್ ಬಾಸ್ ಮನೆಗೆ ಹೋಗುವ ಸಮಯದಲ್ಲಿ ಅವರ ತಂದೆ ಹೋಗಿ ಎರಡು ತಿಂಗಳಾಗಿತ್ತಷ್ಟೇ.. ಅವರ ಅಪ್ಪ ಎಂದರೆ ಅವಳಿಗೆ ತುಂಬಾ ಇಷ್ಟ.. ತುಂಬಾ ಹಚ್ಚಿಕೊಂಡ್ ಬಿಟ್ಟಿದ್ಲು.. ಅವರಿಲ್ಲದ ದಿನಗಳಲ್ಲಿ ಇವಳನ್ನ ನೋಡೋಕ್ ಕೂಡ ಆಗ್ತಿರ್ಲಿಲ್ಲ… ಪ್ರತಿದಿನ ಸಮಾಧಿ ಬಳಿ ಹೋಗ್ತಾ ನಮಸ್ಕಾರ ಮಾಡಿ ಬರ್ತಿದ್ಲು.. ಏನೇ ವಿಷಯ ಇದ್ದರೂ ಕೂಡ ಅಲ್ಲಿ ಹೋಗಿ ಹೇಳ್ಕೊತಾ ಇದ್ಲು.. ಅವಳು ಅಪ್ಪನನ್ನು ನೆನೆದಾಗ ಬಹಳ ಸಂಕಟ ಆಗತ್ತೆ..

ನನಗೆ ಈಗ ಮಗಳೇ ಎಲ್ಲಾ.. ನಾನು ಹೊರಗೆಲ್ಲೂ ಹೋದವಳಲ್ಲ.. ಅವರ ಅಪ್ಪ ಇಬ್ಬರನ್ನೂ ಅಷ್ಟು ಚೆನ್ನಾಗಿ ನೋಡಿಕೊಂಡಿದ್ರು.. ಆದರೆ ಈಗ ಅವರೇ ಇಲ್ಲ.. ಅವರಿಲ್ಲದ ಜೀವನ ನಮಗ್ಯಾಕೆ ಅಂತ ಬಹಳಷ್ಟು ಬಾರಿ ಯೋಚಿಸಿದ್ವಿ.. ಆದರೆ ಮಗಳ ಭವಿಷ್ಯ ರೂಪಿಸದೇ ನಾನು ಹೊರಟು ಹೋದರೆ ಪ್ರಿಯಾಂಕಳ ಜೀವನ ಹಾಳಾಗಿ ಹೋಗತ್ತೆ ಅದೇ ಕಾರಣಕ್ಕಾಗಿ ನಾನು ಉಳ್ಕೊಂಡೆ.. ಸದ್ಯಕ್ಕೆ ಮಗಳಿಗೆ ನಾನು.. ನನಗೆ ಮಗಳಷ್ಟೇ.. ಈಗ ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕಿರೋದು ಬಹಳ ಸಂತೋಷ ಆಗಿದೆ.. ಅವರ ಅಪ್ಪನಿಗೆ ಮಗಳು ಬಿಗ್ ಬಾಸ್ ಗೆ ಹೋಗಬೇಕು ಅಂತ ತುಂಬಾ ಆಸೆ ಇತ್ತು.. ಆದರೆ ಈಗ ಅವಳು ಹೋಗಿದ್ದಾಳೆ.. ಅದನ್ನು ನೋಡಲು ಅವರೇ ಇಲ್ಲ ಎಂದು ಕಣ್ಣೀರಿಟ್ಟರು..

ಜೊತೆಗೆ ಕುರಿ ಪ್ರತಾಪ್ ಅವರು ಇರೋದಕ್ಕೆ ಅವಳು ಅವರ ತಂದೆಯನ್ನು‌ ಮರೆಯಲು ಸಾಧ್ಯವಾಯಿತು.. ಅವರಿಗೆ ಧನ್ಯವಾದಗಳನ್ನು ಹೇಳ್ತೇನೆ ಎಂದರು.. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಯಾರನ್ನು ಕಂಡರೆ ನಿಮಗೆ ಇಷ್ಟ ಇಲ್ಲ ಎಂದಿದ್ದಕ್ಕೆ.. ಎಲ್ಲರೂ ಇಷ್ಟ… ಎಲ್ಲರೂ ತುಂಬಾ ಸ್ಟ್ರಾಂಗ್ ಸ್ಪರ್ಧಿಗಳು ಎಂದರು..

ಅಷ್ಟೇ ಅಲ್ಲದೆ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದು ಎಂದು ಕೇಳಿದ್ದಕ್ಕೆ.. ತಮ್ಮ ಮಗಳ ಹೆಸರನ್ನು ಹೇಳದೆ ಕುರಿ‌ ಪ್ರತಾಪ್ ಅವರು ಗೆಲ್ಲಬಹುದು ಎಂದು ನೇರವಾಗಿ ನುಡಿದರು.. ಜೊತೆಗೆ ಸುದೀಪ್ ಬೈದ ವಿಚಾರವನ್ನು ನೆನಪಿಸಿಕೊಂಡು ತಪ್ಪು ಯಾರು ಮಾಡಿದ್ರೂ ತಪ್ಪೇ.. ತಪ್ಪು ಮಾಡಿದಾಗ ಮಗಳಾಗಲಿ ಅಥವಾ ಯಾರೇ ಆಗಲಿ ನಾನು ಸಪೋರ್ಟ್ ಮಾಡುವುದಿಲ್ಲ.‌. ಅವಳನ್ನು ಬೈದು ಬುದ್ದಿ ಹೇಳಿದ್ದು ಅವಳ ಒಳ್ಳೆಯದಕ್ಕೇ.. ಅವಳು ತನ್ನ ತಪ್ಪುಗಳನ್ನು ತಿದ್ದುಕೊಳ್ಳಬೇಕು ಎಂದು ದೊಡ್ಡತನ ಮೆರೆದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕಾರಿಗೆ ಬಸ್ ಡಿಕ್ಕಿ: ಚಾಲಕನ ಮೃತ್ಯು

Sat Dec 28 , 2019
Source Credit NewsKannada.com HSA   ¦    Dec 28, 2019 05:20:08 PM (IST) ಮಂಗಳೂರು: ಕಾರಿಗೆ ಬಸ್ ಡಿಕ್ಕಿ ಹೊಡೆದು ಕಾರಿನ ಚಾಲಕ ಮೃತಪಟ್ಟ ಘಟನೆಯು ವಾಮಂಜೂರಿನ ಸಮೀಪದ ಪರಾರಿ ಎಂಬಲ್ಲಿ ಶನಿವಾರ ಸಂಜೆ ವೇಳೆ ನಡೆದಿದೆ. ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಚಾಲಕ ನಿಯಂತ್ರನ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.ಅಪಘಾತದಲ್ಲಿ ಹಲವಾರು ಮಂದಿ ಪ್ರಯಾಣಿಕರು ಗಾಯಗೊಂಡಿರುವರು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Source Credit NewsKannada.com “This story was auto-published from […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links