ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಉನ್ನತ ಬೆಳವಣಿಗೆ: ವಿವೇಕ್ ಆಳ್ವ

Source Credit NewsKannada.com

ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಉನ್ನತ ಬೆಳವಣಿಗೆ: ವಿವೇಕ್ ಆಳ್ವ


HSA
  ¦   


Dec 14, 2019 02:17:43 PM (IST)

ವಿದ್ಯಾಗಿರಿ: ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಮಾತ್ರ ಅವರ ಉನ್ನತ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಯ ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.

ಆಳ್ವಾಸ್ ಕಿಂಡರ್‍ಗಾರ್ಡನ್, ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಮತ್ತು ಕೇಂದ್ರ ಶಾಲೆಯ ವಾರ್ಷಿಕೋತ್ಸವವನ್ನು ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯಬೇಕೆಂದರೆ ಆತನಿಗೆ ಒಳ್ಳೆಯ ಪ್ರಾರಂಭ ಸಿಗಬೇಕು ಆಗ ಮಾತ್ರ ಆತ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಪ್ರಾಥಮಿಕ ವಿದ್ಯಾಭ್ಯಾಸಲ್ಲಿರುವ ಮಕ್ಕಳು ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಪಾಲಕರು ಎಂದಿಗೂ ಮಗುವನ್ನು ಬೇರೆ ಮಗುವಿಗೆ ಹೋಲಿಸಬಾರದು, ಪ್ರತಿಯೊಂದು ಮಗು ತನ್ನದೇ ಆದ ಕೌಶಲ್ಯವನ್ನು ಹೊಂದಿರುತ್ತದೆ ಮಾತ್ರವಲ್ಲದೇ ಮಕ್ಕಳಿಗೆ ಸುಂದರವಾದ ಜಗತ್ತನ್ನು ರೂಪಿಸಲು ಅವಕಾಶ ಕೊಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪ್ರಾಥಮಿಕ ಶಾಲೆ ಆಡಳಿತ ಅಧಿಕಾರಿ ಪ್ರಕಾಶ್ ಶೆಟ್ಟಿ ಮಾತನಾಡಿ ಪಾಲಕರು ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರೀಶ್ಮ ಆಳ್ವಾ, ಆಳ್ವಾಸ್ ಕಿಂಡರ್‍ಗಾರ್ಡನ್‍ನ ಮುಖ್ಯಶಿಕ್ಷಕಿ ವೀಣಾ ನಾಯಕ್, ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಮಲಾ ಆನಂದ್, ಸಿಬಿಎಸ್‍ಸಿ ಶಾಲೆಯ ಮುಖ್ಯಶಿಕ್ಷಕ ಮೊಹಮದ್ ಶಫಿ ಶೇಕ್ ಮತ್ತು ssssಆಡಳಿತ ಅಧಿಕಾರಿ ಚೈತ್ರ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಧ್ಯಾಪಕಿ ಜಾನೆಡ್ ಪೈಸ್ ನಿರೂಪಿಸಿ, ಶೋಭಾ ಮೊಂಟೈರೊ ವಂದಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಚುನಾವಣಾ ಸೋಲಿನಿಂದ ಕಂಗಾಲು: ಮತ್ತೆ ಮುಖ್ಯಮಂತ್ರಿ ಭೇಟಿಯಾದ ಎಂಟಿಬಿ ನಾಗರಾಜ್

Sat Dec 14 , 2019
Source Credit Oneindia.com Pin it Email https://nirantharanews.com/%e0%b2%ae%e0%b2%95%e0%b3%8d%e0%b2%95%e0%b2%b3-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6-%e0%b2%a4%e0%b2%b3%e0%b2%b9%e0%b2%a6%e0%b2%bf/#Wg== Karnataka oi-Balaraj Tantri | Updated: Saturday, December 14, 2019, 14:55 [IST] ಬೆಂಗಳೂರು, ಡಿ 14: ಉಪಚುನಾವಣೆಯಲ್ಲಿ ಸೋತ ನಂತರ, ತಮ್ಮ ರಾಜಕೀಯ ನೆಲೆಯನ್ನು ಭದ್ರಗೊಳಿಸಲು ಪ್ರಯತ್ನಿಸುತ್ತಿರುವ ಹೊಸಕೋಟೆಯ ಮಾಜಿ ಶಾಸಕ, ಎಂಟಿಬಿ ನಾಗರಾಜ್, ಮತ್ತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಶನಿವಾರ (ಡಿ 14) ಯಡಿಯೂರಪ್ಪನವರನ್ನು ಅವರ ಡಾಲರ್ಸ್ ಕಾಲೋನಿ ಮನೆಯಲ್ಲಿ ಭೇಟಿಯಾದ ಎಂಟಿಬಿ, ಸುಮಾರು 45 ನಿಮಿಷ ಮಾತುಕತೆ ನಡೆಸಿದ್ದಾರೆ. ಸಚಿವ ಸಂಪುಟದಲ್ಲಿ ತಮಗೆ ಸ್ಥಾನದ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links