ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Source Credit Oneindia.com

Chikkaballapur

oi-Lekhaka

By ಚಿಕ್ಕಬಳ್ಳಾಪುರ ಪ್ರತಿನಿಧಿ

|

ಚಿಕ್ಕಬಳ್ಳಾಪುರ, ಜನವರಿ 03: ಬೆಂಗಳೂರಿನ ವ್ಯಕ್ತಿಯೊಬ್ಬರು ಇಲ್ಲಿನ ನಂದಿ ಗ್ರಾಮದ ಭೋಗನಂದಿಶ್ವರ ದೇವಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿರುವ ಶ್ರೀರಾಮ (55) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರನ ದೇವಾಲಯಕ್ಕೆ ಬಂದಿದ್ದ ಇವರು, ತಡರಾತ್ರಿ ದೇವಾಲಯದ ಸಾಲುಮಂಟಪಗಳ ಬಳಿ ಮದ್ಯಪಾನ, ಧೂಮಪಾನ ಮಾಡಿದ್ದಾರೆ. ನಂತರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದು ಸಾಧ್ಯವಾಗದ ಕಾರಣ ಸಾಲುಮಂಟಪದ ಕಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇವಸ್ಥಾನಕ್ಕೆ ಮುಂಜಾನೆ ಬಂದ ಭಕ್ತರು ಆತ್ಮಹತ್ಯೆ ಮಾಡಿಕೊಂಡಿರುವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರ ಬಳಿ ಚೀಟಿಯೊಂದು ಸಿಕ್ಕಿದ್ದು, ಅದರಲ್ಲಿ, ಕೃಷ್ಣಪ್ಪ, ಪ್ರಶಾಂತನಗರ, ಬ್ಯಾಡ್ ಟೈಂ ಎಂದು ಬರೆದಿದೆ. ಪೊಲೀಸರು ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ವಿಚಾರಿಸಿದಾಗ ಮೃತಪಟ್ಟ ವ್ಯಕ್ತಿ ಕೃಷ್ಣಪ್ಪ ಅವರ ತಮ್ಮ ಶ್ರೀರಾಮ ಎಂಬುದು ತಿಳಿದುಬಂದಿದೆ.

ಶ್ರೀರಾಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದ್ದು, ಕಾಮಾಕ್ಷಿ ಪಾಳ್ಯದಲ್ಲಿ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ವರ್ಕ್ ಶಾಪ್ ಇಟ್ಟುಕೊಂಡಿದ್ದರು. ಅವರಿಗೆ ಹೆಂಡತಿ, ಮಗ, ಮಗಳಿದ್ದಾರೆ. ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪಾರ್ಕಿಂಗ್ ಗಾಗಿ ಪ್ರತಿಭಟನೆಗಿಳಿದ ಬೈನರಿ ಗಾರ್ಮೆಂಟ್ಸ್ ಕಾರ್ಮಿಕರು

Sat Jan 4 , 2020
Source Credit Oneindia.com Pin it Email https://nirantharanews.com/%e0%b2%ad%e0%b3%8b%e0%b2%97%e0%b2%a8%e0%b2%82%e0%b2%a6%e0%b3%80%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%be%e0%b2%b2%e0%b2%af%e0%b2%a6-%e0%b2%86%e0%b2%b5%e0%b2%b0%e0%b2%a3/#Wg== Chitradurga oi-Chidananda M By ಚಿತ್ರದುರ್ಗ ಪ್ರತಿನಿಧಿ | Published: Saturday, January 4, 2020, 15:40 [IST] ಚಿತ್ರದುರ್ಗ, ಜನವರಿ 4: ಗಾರ್ಮೆಂಟ್ಸ್ ನಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಾವಿರಾರು ಕಾರ್ಮಿಕರು ಜಿಲ್ಲೆಯ ಬೈನರಿ ಫ್ಯಾಕ್ಟರಿ ಮುಂದೆ ಏಕಾಏಕಿ ಪ್ರತಿಭಟನೆಗಿಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೆಂಗಳೂರು ರಸ್ತೆಯಲ್ಲಿರುವ ಕೆ.ಆರ್ ಹಳ್ಳಿ ಗೇಟ್ ಸಮೀಪದ ಬೈನರಿ ಗಾರ್ಮೆಂಟ್ಸ್ ಮುಂಭಾಗದಲ್ಲಿ, ಕಾರ್ಮಿಕರ ಆಟೋ, ಬಸ್ಸ್, ಕಾರು, ಟ್ಯಾಕ್ಸಿ ಮತ್ತಿತರ ವಾಹನಗಳಿಗೆ ಪಾರ್ಕಿಂಗ್ ಕಲ್ಪಿಸಬೇಕು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links