ಭಾರತಕ್ಕೆ ವಾಪಸ್ ಬಂದ ಕೂಡಲೇ ಸರ್ಪ್ರೈಸ್ ಕೊಡ್ತಾರೆ ಅನುಷ್ಕಾ ಶೆಟ್ಟಿ

Source Credit Filmibeat.com

ಸ್ಲಿಮ್ ಆಗಲಿದ್ದಾರೆ ‘ದೇವಸೇನಾ’

ದೇವಸೇನಾ ಅನುಷ್ಕಾ ಶೆಟ್ಟಿ ತಮ್ಮ ದೇಹದ ತೂಕ ಇಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ವರ್ಕೌಟ್ ಕೂಡ ಮಾಡುತ್ತಿದ್ದಾರಂತೆ. ಸದ್ಯ ವಿದೇಶದಲ್ಲಿರುವ ಅನುಷ್ಕಾ, ಅಲ್ಲಿಂದ ವಾಪಸ್ ಬಂದ್ಮೇಲೆ ಈ ವಿಷಯದಲ್ಲಿ ಸರ್ಪ್ರೈಸ್ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಖುಷ್ ಆಗ್ತಾರೆ ಫ್ಯಾನ್ಸ್

ಒಂದು ವೇಳೆ ಅನುಷ್ಕಾ ಶೆಟ್ಟಿ ಅವರು ತಮ್ಮ ದೇಹದ ತೂಕ ಇಳಿಸಿಕೊಂಡು, ಮೊದಲಿನಂತೆ ಫಿಟ್ ಆಗಿ ಕಾಣಿಸಿಕೊಂಡರೆ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗುತ್ತಾರೆ. ಅನುಷ್ಕಾ ತೂಕದ ಕುರಿತು ಬಂದಿದ್ದ ನೆಗಿಟಿವ್ ಕಾಮೆಂಟ್ ಗಳಿಗೆಲ್ಲಾ ಈ ಮೂಲಕ ಉತ್ತರ ನೀಡಬಹುದು.

ಯಾವುದು ಸಿನಿಮಾ ಇಲ್ಲ

ಸದ್ಯಕ್ಕೆ ನಿಶಬ್ದಂ ಎಂಬ ಸಿನಿಮಾದಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ. ಈ ಸಿನಿಮಾ ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ. ಬಹುಶಃ ಈ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಮತ್ತೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿಯೇ ಕೆಲವು ತಯಾರಿ ಮಾಡಿಕೊಂಡು ವಾಪಸ್ ಆಗುತ್ತಿದ್ದಾರೆ ಎಂಬ ಮಾತಿದೆ.

ಚಿರು ಜೊತೆ ಅನುಷ್ಕಾ ಶೆಟ್ಟಿ!

ನಿಶಬ್ದಂ ಸಿನಿಮಾ ಬಳಿಕ ಯಾವ ಚಿತ್ರಕ್ಕೂ ಸಹಿ ಹಾಕದ ಅನುಷ್ಕಾ ಶೆಟ್ಟಿಗೆ ಎರಡು ಸಿನಿಮಾ ಆಫರ್ ಇದೆಯಂತೆ. ಗೌತಮ್ ವಾಸುದೇವ ಮೆನನ್ ಅವರು ಮಹಿಳಾ ಪ್ರಧಾನ ಚಿತ್ರ ನಿರ್ದೇಶಿಸಲಿದ್ದು, ಆ ಚಿತ್ರಕ್ಕೆ ಅನುಷ್ಕಾ ಅವರನ್ನ ನಾಯಕಿಯನ್ನಾಗಿಸಲು ಚಿಂತಿಸಿದ್ದಾರಂತೆ. ಮತ್ತೊಂದೆಡೆ ಮೆಗಾಸ್ಟಾರ್ ಚಿರಂಜೀವಿ ಮತ್ತು ಕೊರಟಾಲ ಶಿವ ಕಾಂಬಿನೇಷನ್ ಚಿತ್ರಕ್ಕೆ ಅನುಷ್ಕಾ ಹೀರೋಯಿನ್ ಆಗುವ ಸಾಧ್ಯತೆ ಇದೆಯಂತೆ.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?

Thu Dec 12 , 2019
Source Credit Filmibeat.com Pin it Email https://nirantharanews.com/%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%b5%e0%b2%be%e0%b2%aa%e0%b2%b8%e0%b3%8d-%e0%b2%ac%e0%b2%82%e0%b2%a6-%e0%b2%95%e0%b3%82%e0%b2%a1%e0%b2%b2%e0%b3%87/#MS1kYXJzaGFuLTE ಕನ್ನಡ ಕಿರುತೆರೆಗೆ ಎಂಟ್ರಿಕೊಡುತ್ತಾರಂತೆ ದರ್ಶನ್.! ಕನ್ನಡ ಕಿರುತೆರೆ ಲೋಕಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಕೊಡುತ್ತಾರಂತೆ. ಖಾಸಗಿ ವಾಹಿನಿಯ ಒಂದು ಅದ್ಧೂರಿ ಶೋಗೆ ದರ್ಶನ್ ನಿರೂಪಣೆ ಮಾಡಲಿದ್ದಾರಂತೆ. ದರ್ಶನ್ ರನ್ನ ಕಿರುತೆರೆಗೆ ಕರೆದುಕೊಂಡು ಬರಲು ಸಕಲ ಪ್ರಯತ್ನ ನಡೆಯುತ್ತಿದೆಯಂತೆ ಎಂಬ ಅಂತೆ-ಕಂತೆ ಗಾಂಧಿನಗರದ ತುಂಬೆಲ್ಲಾ ರೆಕ್ಕೆ-ಪುಕ್ಕ ಕಟ್ಟಿಕೊಂಡು ಹರಿದಾಡುತ್ತಿದೆ. ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು Pin it Email https://nirantharanews.com/%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%b5%e0%b2%be%e0%b2%aa%e0%b2%b8%e0%b3%8d-%e0%b2%ac%e0%b2%82%e0%b2%a6-%e0%b2%95%e0%b3%82%e0%b2%a1%e0%b2%b2%e0%b3%87/#MjUtMTQ1MzcyODA Pin it Email https://nirantharanews.com/%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%b5%e0%b2%be%e0%b2%aa%e0%b2%b8%e0%b3%8d-%e0%b2%ac%e0%b2%82%e0%b2%a6-%e0%b2%95%e0%b3%82%e0%b2%a1%e0%b2%b2%e0%b3%87/#Mi1kYXJzaGFuLTE ದರ್ಶನ್ ಗೆ ಕಿರುತೆರೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links