ಭಾನುವಾರದ ದಿನ ಭವಿಷ್ಯ (10-11-2019)

Source Credit Kannada.boldsky.com

ಮೇಷ ರಾಶಿ: 21 ಮಾರ್ಚ್ – 19 ಏಪ್ರಿಲ್

ಇಂದು ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಿ. ಗರ್ಭಿಣಿ ಮಹಿಳೆಯರು ಯಾವುದೇ ರೀತಿಯ ನಿರ್ಲಕ್ಷ್ಯ ಮಾಡುವುದು ಸಲ್ಲದು. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಲು ಇಂದು ಉತ್ತಮ ದಿನ. ಅವರಿಂದ ನಿಮ್ಮ ಪ್ರೇಮಕ್ಕೆ ಹಸಿರು ನಿಶಾನೆ ತೋರುವ ಬಲವಾದ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ಮಕ್ಕಳೊಂದಿಗೆ ಮೋಜಿನ ಸಮಯವನ್ನು ಕಳೆಯುತ್ತೀರಿ ಅದು ನಿಮಗೆ ವಿಶ್ರಾಂತಿ ನೀಡುತ್ತದೆ. ಉದ್ಯಮಿಗಳಿಗೆ ಇಂದು ಉತ್ತಮ ಅವಕಾಶ ಬರಬಹುದು. ನಿಮ್ಮ ಸಂಗಾತಿಯೊಂದಿಗೆ ಕೆಲವು ವ್ಯತ್ಯಾಸಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ವಿಷಯಗಳಲ್ಲಿ ಹೊರಗಿನವರು ಮಧ್ಯಪ್ರವೇಶಿಸಲು ಬಿಡಬೇಡಿ ಮತ್ತು ಪರಸ್ಪರರ ಮೇಲೆ ನಂಬಿಕೆಯನ್ನು ಬಲಪಡಿಸಲು ಪ್ರಯತ್ನಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಮಧ್ಯಾಹ್ನ 1:05 ರಿಂದ 5:00 ರವರೆಗೆ

ವೃಷಭ ರಾಶಿ: 20 ಏಪ್ರಿಲ್ – 20 ಮೇ

ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ. ಇದ್ದಕ್ಕಿದ್ದಂತೆ ಸಂಪತ್ತು ಪಡೆಯುವ ಸಾಧ್ಯತೆಯಿದೆ ಮತ್ತು ನೀವು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯಬಹುದು. ಇಂದು ನಿಮ್ಮ ಪೋಷಕರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ ಮತ್ತು ಅವರು ನಿಮಗೆ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡಬಹುದು. ಉದ್ಯೋಗದಲ್ಲಿದ್ದರೆ ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚು ಇರುತ್ತದೆ, ಆದರೆ ಹಿರಿಯರ ಸಹಾಯದಿಂದ ನೀವು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ. ಬೇಸರವನ್ನು ತಪ್ಪಿಸಲು ಸ್ನೇಹಿತರ ಜತೆ ಸಮಯ ಕಳೆಯಿರಿ.

ಅದೃಷ್ಟ ಬಣ್ಣ: ತಿಳಿ ಬಣ್ಣ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಸಂಜೆ 5:00 ರಿಂದ 9:00 ರವರೆಗೆ

ಮಿಥುನ ರಾಶಿ: 21 ಮೇ – 20 ಜೂನ್

ವೈಯಕ್ತಿಕ ಮತ್ತು ವ್ಯವಹಾರ ಎರಡೂ ಅಂಶಗಳಿಂದ ದಿನವು ಉತ್ತಮವಾಗಿದೆ. ಹಣಕಾಸಿನ ವಿಷಯಗಳಲ್ಲಿ ಭಾರಿ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಹಳೆಯ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬಗೆಹರಿಯುತ್ತದೆ ಮತ್ತು ಶೀಘ್ರದಲ್ಲೇ ಅದರ ಸಂಪೂರ್ಣ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ, ನಿಮ್ಮಿಬ್ಬರ ನಡುವಿನ ಪರಸ್ಪರ ತಿಳುವಳಿಕೆ ಉತ್ತಮವಾಗಿರುತ್ತದೆ. ಇಂದು ಜನರು ನಿಮ್ಮ ಪರಿಶ್ರಮ ಮತ್ತು ಸಾಮರ್ಥ್ಯವನ್ನು ಮೆಚ್ಚುತ್ತಾರೆ. ಆರೋಗ್ಯ ವಿಷಯಗಳು ಅತ್ಯುತ್ತಮವಾಗಿರುತ್ತವೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಬೆಳಿಗ್ಗೆ 4:50 ರಿಂದ ಮಧ್ಯಾಹ್ನ 1:15 ರವರೆಗೆ

ಕರ್ಕ ರಾಶಿ: 21 ಜೂನ್ – 22 ಜುಲೈ

ನಿಮ್ಮ ಕೆಲಸ ಮತ್ತು ಕುಟುಂಬ ಜೀವನದ ನಡುವೆ ಸಮತೋಲನವನ್ನು ನೀವು ಇಟ್ಟುಕೊಳ್ಳಿ, ಇದರಿಂದ ನೀವು ಎರಡಕ್ಕೂ ಸಮಾನ ಗಮನ ನೀಡಬಹುದು. ಸ್ವಲ್ಪ ಸಮಯದವರೆಗೆ ಕೆಲಸದ ಒತ್ತಡದಿಂದಾಗಿ ನಿಮ್ಮ ಕುಟುಂಬದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಇದು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸಬಹುದು. ಆದ್ದರಿಂದ ನಿಮ್ಮ ಕೆಲಸದ ನಡುವೆ ನಿಮ್ಮ ಪ್ರೀತಿಪಾತ್ರರಿಗೆ ಸ್ವಲ್ಪ ಸಮಯ ನೀಡುವುದು ಉತ್ತಮ. ಚಿಂತೆ ಮತ್ತು ಅನಗತ್ಯವಾಗಿ ಯೋಚಿಸುವ ಮೂಲಕ ನಿಮಗೆ ಯಶಸ್ಸು ಸಿಗುವುದಿಲ್ಲ. ಆರ್ಥಪೂರ್ಣ ಕೆಲಸಕ್ಕೆ ಶಕ್ತಿಯನ್ನು ಇರಿಸಿ. ಹಣಕಾಸಿನ ವಿಷಯಗಳಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ, ಆದರೆ ಹೊಸ ಆದಾಯದ ಮೂಲವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಕೆಲಸದ ವಿಷಯದಲ್ಲಿ ದಿನವು ಉತ್ತಮವಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ಪ್ರಣಯ ಜೀವನದಲ್ಲಿ ನಿಮ್ಮ ಕೆಲವು ಮಾತುಗಳು ನಿಮ್ಮ ಸಂಗಾತಿಯ ಭಾವನೆಗಳನ್ನು ಘಾಸಿಗೊಳಿಸಬಹುದು. ಆದ್ದರಿಂದ, ಚಿಂತನಶೀಲವಾಗಿ ಮಾತನಾಡುವುದು ಉತ್ತಮ.

ಅದೃಷ್ಟ ಬಣ್ಣ: ಗಾಢ ಕೆಂಪು

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಮಧ್ಯಾಹ್ನ 1:00 ರಿಂದ 5:00 ರವರೆಗೆ

ಸಿಂಹ ರಾಶಿ: 23 ಜುಲೈ – 22 ಆಗಸ್ಟ್

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಆರ್ಥಿಕ ಸಮಸ್ಯೆಗಳಿಂದಾಗಿ ನಿರಾಶಾವಾದಿ ಆಲೋಚನೆಗಳು ಇಂದು ನಿಮ್ಮಲ್ಲಿ ಮೂಡುತ್ತದೆ. ಜೀವನದಲ್ಲಿ ಏರಿಳಿತಗಳಿವೆ ಎಂದು ನೀವು ಅರ್ಥಮಾಡಿಕೊಳ್ಳಬೇಕು, ಇಂದು ಕೆಟ್ಟದಾಗಿದ್ದರೆ ನಾಳೆ ಸ್ಪಷ್ಟವಾಗಿ ಒಳ್ಳೆಯದು ಆಗುತ್ತದ ಎಂಬ ನಂಬಿಕೆ ನಿಮ್ಮಲ್ಲಿರಲಿ. ಧೈರ್ಯಶಾಲಿಯಾಗಿರಿ ಮತ್ತು ಆ ಎಲ್ಲಾ ಆಲೋಚನೆಗಳನ್ನು ಬದಿಗಿರಿಸಿ. ಉದ್ಯಮಿಗಳು ಇಂದು ಯಾವುದೇ ದೊಡ್ಡ ವ್ಯವಹಾರವನ್ನು ಮಾಡಬಹುದು. ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು. ನೀವು ಕೋಪದಲ್ಲಿ ಯಾವುದೇ ಹೆಜ್ಜೆ ಇಟ್ಟರೆ, ನಿಮ್ಮ ಸಂಬಂಧ ಹದಗೆಡಬಹುದು. ನಿಮ್ಮಿಬ್ಬರ ನಡುವಿನ ಪ್ರತ್ಯೇಕತೆಯ ಸಾಧ್ಯವಿದೆ, ಆದ್ದರಿಂದ ಪರಸ್ಪರ ಅರ್ಥಮಾಡಿಕೊಳ್ಳುವುದು ಉತ್ತಮ. ಪ್ರಣಯ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಲಿದೆ. ನಿಮ್ಮ ಆರೋಗ್ಯ ಸುಧಾರಿಸಲು ಸಮಯೋಚಿತ ಓಟ ಮತ್ತು ವ್ಯಾಯಾಮ ಮುಖ್ಯ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 42

ಅದೃಷ್ಟ ಸಮಯ: ಮಧ್ಯಾಹ್ನ 12:45 ರಿಂದ 5:20 ರವರೆಗೆ

ಕನ್ಯಾ ರಾಶಿ: 23 ಆಗಸ್ಟ್ – 22 ಸೆಪ್ಟೆಂಬರ್

ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಮತ್ತು ಸಾಕಷ್ಟು ಕಿರಿಕಿರಿ ಅನುಭವಿಸುವಿರಿ. ವೈವಾಹಿಕ ಜೀವನದಲ್ಲಿನ ತೊಂದರೆಯು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಬಂಧವನ್ನು ಸುಧಾರಿಸಲು, ನೀವು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಹೆಚ್ಚುವರಿ ಹಣವನ್ನು ಗಳಿಸಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಮುಂದುವರಿಯಬಹುದು. ಆರೋಗ್ಯ ವಿಷಯಗಳು ಇಂದು ಉತ್ತಮವಾಗುವುದಿಲ್ಲ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 35

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 9:15 ರವರೆಗೆ

ತುಲಾ ರಾಶಿ: 23 ಸೆಪ್ಟೆಂಬರ್ – 22 ಅಕ್ಟೋಬರ್

ಇಂದು ನೀವು ತುಂಬಾ ಜಾಗರೂಕರಾಗಿರಬೇಕು. ಶತ್ರು ತಂಡವು ಸಕ್ರಿಯವಾಗಿರುತ್ತದೆ ಮತ್ತು ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು. ಇಂದು ಆರ್ಥಿಕವಾಗಿ ಮಿಶ್ರ ದಿನವಾಗಲಿದೆ. ನೀವು ಹಣವನ್ನು ಪಡೆಯುತ್ತೀರಿ ಆದರೆ ಕೆಲವು ದೊಡ್ಡ ವೆಚ್ಚಗಳು ಸಹ ಉಂಟಾಗುವ ಸಾಧ್ಯತೆ ಇದೆ. ಸಾಲ ನೀಡುವುದನ್ನು ತಪ್ಪಿಸಿ. ವಿದ್ಯಾರ್ಥಿಗಳು ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಪ್ರಯತ್ನಗಳು ಖಂಡಿತವಾಗಿಯೂ ನಿಮ್ಮನ್ನು ಯಶಸ್ವಿಗೊಳಿಸುತ್ತವೆ. ಹಿರಿಯರು ಬೆಂಬಲ ನೀಡುತ್ತಾರೆ. ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆ ಇದ್ದಕ್ಕಿದ್ದಂತೆ ಉದ್ಭವಿಸಬಹುದು. ನಿಮ್ಮ ನಿರ್ಧಾರಗಳನ್ನು ಮನಸ್ಸಿನಿಂದ ಮಾಡಬೇಕೇ ಹೊರತು ಹೃದಯದಿಂದ ಅಲ್ಲ. ನಿಮಗೆ ಆಸಕ್ತಿಯಿರುವ ಯಾವುದನ್ನಾದರೂ ಮಾಡಲು ಪ್ರಯತ್ನಿಸಿ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 9:00 ರವರೆಗೆ

ವೃಶ್ಚಿಕ ರಾಶಿ: 23 ಅಕ್ಟೋಬರ್ – 21 ನವೆಂಬರ್

ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಪ್ರೀತಿ ಮತ್ತು ಬೆಂಬಲವನ್ನು ನಿರೀಕ್ಷಿಸಬಹುದು. ಪ್ರೀತಿಪಾತ್ರರು ಯಾವುದೇ ಉದ್ಯೋಗ ಅಥವಾ ವ್ಯವಹಾರದಲ್ಲಿದ್ದರೆ ಇಂದು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇಂದು ಇಬ್ಬರೂ ಯಾವುದೇ ಆಧ್ಯಾತ್ಮಿಕ ಸ್ಥಳಕ್ಕೆ ಹೋಗಬಹುದು. ಪ್ರಣಯ ಜೀವನದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರಿಂದ ಅಮೂಲ್ಯವಾದ ಉಡುಗೊರೆಯನ್ನು ಸಹ ನಿರೀಕ್ಷಿಸಲಾಗಿದೆ. ಕುಟುಂಬದಲ್ಲಿನ ಯಾವುದೇ ವಿವಾದಗಳನ್ನು ಶಾಂತಿಯುತವಾಗಿ ಮತ್ತು ಬುದ್ಧಿವಂತಿಕೆಯಿಂದ ಪರಿಹರಿಸುವುದು ಉತ್ತಮ. ಇಂದು ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಚಿಂತಿಸಬಹುದು. ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಇಂದು ಕಡಿಮೆ ಶ್ರಮದಿಂದ ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 11

ಅದೃಷ್ಟ ಸಮಯ: ಸಂಜೆ 4:30 ರಿಂದ 11:00 ರವರೆಗೆ

ಧನು ರಾಶಿ: 22 ನವೆಂಬರ್ – 21 ಡಿಸೆಂಬರ್

ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಉಳಿಯುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ದಿನ ಅದ್ಭುತವಾಗಿದೆ. ನಿಮ್ಮ ಪ್ರಿಯರಿಗೆ ಆಶ್ಚರ್ಯ ನೀಡುವ ಮೂಲಕ ನಿಮ್ಮ ದಿನವನ್ನು ಹೆಚ್ಚು ವಿಶೇಷವಾಗಿಸಿ. ಇಂದು ಸಕಾರಾತ್ಮಕ ವಿಷಯಗಳಿಂದ ಸುತ್ತುವರಿಯಲ್ಪಡುತ್ತೀರಿ, ಮಾನಸಿಕ ಶಾಂತಿಯನ್ನು ಸಹ ಅನುಭವಿಸುವಿರಿ. ಆರ್ಥಿಕ ವಿಷಯದಲ್ಲಿ ನೀವು ಜಾಗರೂಕರಾಗಿರಬೇಕು. ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಮ್ಮ ಹಣಕಾಸಿನ ವಿಷಯಗಳ ಬಗ್ಗೆ ನೀವು ಇತರರೊಂದಿಗೆ ಹೆಚ್ಚು ಮಾತನಾಡದಿದ್ದರೆ ಉತ್ತಮ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ನಿಮ್ಮ ಸಹಿಷ್ಣುತೆಯನ್ನು ಪರೀಕ್ಷಿಸಬಹುದು. ಅಂತಹ ಜನರನ್ನು ನಿರ್ಲಕ್ಷಿಸುವುದು ಉತ್ತಮ. ಪ್ರೀತಿಯ ವಿಷಯಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 5

ಅದೃಷ್ಟ ಸಮಯ: ಸಂಜೆ 5:00 ರಿಂದ 10:00 ರವರೆಗೆ

ಮಕರ ರಾಶಿ: 22 ಡಿಸೆಂಬರ್ – 19 ಜನವರಿ

ದಿನ ನಿಮಗೆ ಒಳ್ಳೆಯದಿಲ್ಲ. ಇಂದು ನೀವು ಅನೇಕ ಅಪರಿಚಿತರಿಂದ ಸುತ್ತುವರೆದಿರುವಿರಿ. ನಿಮ್ಮ ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಎದುರಾಗಬಹುದು, ಅವುಗಳನ್ನು ಪ್ರೀತಿಯಿಂದ ವಿವರಿಸಿ. ಇಂದು ಮನೆಯ ವಾತಾವರಣಕ್ಕೆ ತೊಂದರೆಯಾಗಲಿದೆ. ಕುಟುಂಬ ಸದಸ್ಯರ ಅಗತ್ಯಗಳಿಗೆ ಗಮನ ಕೊಡಿ. ಪೋಷಕರ ಪ್ರೀತಿ ಮತ್ತು ಬೆಂಬಲವು ದೊಡ್ಡ ತೊಂದರೆಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವು ಆರ್ಥಿಕ ಉದ್ವಿಗ್ನತೆಗಳು ಸಹ ಉದ್ಭವಿಸಬಹುದು ಮತ್ತು ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಚಿಂತನಶೀಲವಾಗಿ ಖರ್ಚು ಮಾಡಿ ಮತ್ತು ಬಜೆಟ್ ಅನ್ನು ಮೀರಿ ಹೋಗಬೇಡಿ. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳ ಮುಂದೆ ಎಚ್ಚರವಾಗಿ ವರ್ತಿಸಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಬೆಳಿಗ್ಗೆ 7:45 ರಿಂದ ಮಧ್ಯಾಹ್ನ 12:00 ರವರೆಗೆ

ಕುಂಭ ರಾಶಿ: 20 ಜನವರಿ – 18 ಫೆಬ್ರವರಿ

ಇಂದು ಆರ್ಥಿಕ ರಂಗದಲ್ಲಿ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನೀವು ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ. ಮಧ್ಯಾಹ್ನದ ನಂತರ ಒಂದು ಪ್ರಮುಖ ಸಂದೇಶವನ್ನು ಸ್ವೀಕರಿಸುವ ಮೂಲಕ ನಿಮ್ಮ ಸಂತೋಷವು ದ್ವಿಗುಣಗೊಳ್ಳುತ್ತದೆ. ನಿಮ್ಮ ಕೆಲವು ಪ್ರಮುಖ ಕಾರ್ಯಗಳನ್ನು ಇಂದು ಪೂರ್ಣಗೊಳಿಸಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ ಮತ್ತು ಪೋಷಕರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆದಾಗ್ಯೂ, ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಸ್ವಲ್ಪ ಹೆಚ್ಚಾಗಬಹುದು. ಇಂದು ನಿಮ್ಮ ಸಹೋದರ ಸಹೋದರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರೊಂದಿಗೆ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ವೈವಾಹಿಕ ಜೀವನದಲ್ಲಿ ಹೆಚ್ಚು ಪ್ರೀತಿ ಪಡೆಯುತ್ತೀರಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2:05

ಮೀನ ರಾಶಿ: 19 ಫೆಬ್ರವರಿ – 20 ಮಾರ್ಚ್

ಹಣಕಾಸಿನ ವಿಷಯಗಳಲ್ಲಿ ನೀವು ಸಾಕಷ್ಟು ಅದೃಷ್ಟಶಾಲಿಯಾಗುತ್ತೀರಿ. ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ ವೇತನ ಹೆಚ್ಚಳದ ಬಲವಾದ ಸಾಧ್ಯತೆಯಿದೆ. ನೀವು ವಿನೋದದಿಂದ ತುಂಬಿದ ಕ್ಷಣಗಳನ್ನು ಹೊಂದಿರುತ್ತೀರಿ. ಸಹೋದರರ ನಡುವಿನ ಭಿನ್ನಾಭಿಪ್ರಾಯಗಳು ಇಂದು ಕೊನೆಗೊಳ್ಳುತ್ತವೆ ಮತ್ತು ನಿಮ್ಮಿಬ್ಬರ ನಡುವೆ ಪ್ರೀತಿ ಮತ್ತು ಏಕತೆ ಮತ್ತೆ ಕಾಣಿಸುತ್ತದೆ. ಕೆಲಸದಲ್ಲಿ ಇಂದು ಜಾಗರೂಕರಾಗಿರಲು ಸೂಚಿಸಲಾಗಿದೆ. ಕೆಲವು ವಿರೋಧಿಗಳು ನಿಮ್ಮ ಯೋಜನೆಗಳಿಗೆ ಅಡ್ಡಿಯಾಗುವುದರಿಂದ ಉದ್ಯಮಿಗಳು ತಮ್ಮ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಬಹಳ ವಿಶೇಷ ದಿನವನ್ನು ಹೊಂದಿರುತ್ತೀರಿ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ಒತ್ತಡವನ್ನು ತಪ್ಪಿಸಬೇಕು.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಬೆಳಿಗ್ಗೆ 4:20 ರಿಂದ ಮಧ್ಯಾಹ್ನ 12:00 ರವರೆಗೆ

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ವೈರಲ್ ಆಯ್ತು ಪುಣೆ ಮನೆ ಕೆಲಸದಾಕೆಯ ವಿಸಿಟಿಂಗ್ ಕಾರ್ಡ್

Sun Nov 10 , 2019
Source Credit Kannada.boldsky.com Trends N Style oi-Reena TK | Published: Saturday, November 9, 2019, 18:02 [IST] ಇದೀಗ ಟ್ವಿಟರ್‌ನಲ್ಲಿ ಒಂದು ವಿಸಿಟಿಂಗ್ ಕಾರ್ಡ್‌ ತುಂಬಾ ಸೌಂಡ್‌ ಮಾಡುತ್ತಿದೆ. ಹೌದು ನೀವು ಹಲವು ರೀತಿಯ ವಿಸಿಟಿಂಗ್ ಕಾರ್ಡ್‌ ನೋಡಿರುತ್ತೀರಿ, ಬಹುಶಃ ಈ ರೀತಿಯ ಒಂದು ವಿಸಿಟಿಂಗ್ ಕಾರ್ಡ್‌ ನೋಡುತ್ತಿರುವುದು ಇದೇ ಮೊದಲು ಆಗಿರಬಹುದು, ನೋಡಿ. ಗೀತಾ ಕಲೆ ಎಂಬ ಮನೆ ಕೆಲಸದವರ ವಿಸಿಟಿಂಗ್ ಕಾರ್ಡ್‌ ನೋಡಿ, ಅವರಿಗೆ ದೇಶದ ಇವಿಧ ಕಡೆಯಿಂದ ಕೆಲದದ ಆಫರ್‌ಗಳು ಬರುತ್ತಿವೆ. ಸ್ವಲ್ಪ ಕ್ರಿಯೇಟಿವ್ ಆಗಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links