ಭವಿಷ್ಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿ!?

Source Credit NewsKannada.com

ಭವಿಷ್ಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿ!?


DA
  ¦   


Jan 15, 2020 05:14:36 PM (IST)

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಇದೆಯೇ? ಹೌದು ಎನ್ನುತ್ತಾರೆ ಯುವ ಜ್ಯೋತಿಷಿಯೊಬ್ಬರು.

ಮಂಗಳವಾರ ಅಳದಂಗಡಿಯಲ್ಲಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಜಾತ್ರಾ ಸಂದರ್ಭ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿದ್ದ ತಾಲೂಕಿನ ನಾಲ್ಕೂರು ಗ್ರಾಮದ ಸೂಳಬೆಟ್ಟಿನ, ಪ್ರಸ್ತುತ ಬೆಂಗಳೂರಿನಲ್ಲಿರುವ ಯುವ ಜ್ಯೋತಿಷಿ ಶ್ರೀನಾಥ ಜೋಶಿ ಅವರು ಬಹಿರಂಗವಾಗಿ ಶಾಸಕರ ಸಮ್ಮುಖದಲ್ಲೇ ಭವಿಷ್ಯ ನುಡಿದಿದ್ದಾರೆ.

ಜನಮಾನಸದಲ್ಲಿ ನೆಲೆಯೂರುತ್ತಿರುವ, ಅಪ್ರತಿಮ ಸಂಘಟಕ, ದೂರದರ್ಶಿತ್ವದ ಅಭಿವೃದ್ಧಿಯನ್ನು ಮಾಡುತ್ತಿರುವ, ಜನರ ಕಷ್ಟಗಳಿಗೆ ಶೀಘ್ರ ಧಾವಿಸುವ, ಜನರ ಜೊತೆಯಲ್ಲೇ ಇರುವವರು ಈ ಶಾಸಕರು. ಕಳೆದ ಮಳೆಗಾಲದಲ್ಲಿ ಸಂಭವಿಸಿದ ನೆರೆ ದುರಂತದ ಸಂದರ್ಭ ಇವರು ಸ್ಪಂದಿಸಿದ ರೀತಿ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲೂ ತಿಳಿದಿದೆ.

ಹಲವಾರು ವರ್ಷಗಳಿಂದ ಇವರ ಕಾರ್ಯವೈಖರಿ ನೋಡಿ, ಅಧ್ಯಯನ ಮಾಡಿ ಜ್ಯೋತಿಷ್ಯದ ಮೂಲಕ ಕಂಡು ಕೊಂಡಾಗ ಕೆಲ ವರ್ಷಗಳಲ್ಲೇ ಬೆಳ್ತಂಗಡಿಯ ನೆಲ ರಾಜ್ಯಕ್ಕೆ ಮುಖ್ಯಮಂತ್ರಿಯೊಬ್ಬರನ್ನು ನೀಡಲಿದೆ ಎಂದು ಕಂಡಿದೆ ಎಂದು ಹೇಳಿದರಲ್ಲದೆ ಈ ಮಾತನ್ನು ಸತ್ಯದ ಮಣ್ಣಾದ ಅಳದಂಗಡಿಯಲ್ಲಿ, ಸತ್ಯದೇವತೆಯ ಎದುರಲ್ಲೇ ,ಗಣ್ಯರ ಸಮ್ಮುಖದಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದೇನೆ ಎಂದ ಅವರು ಮುಂದೊಂದು ದಿನ ಖಂಡಿತವಾಗಿ ನಾನು ಈ ದಿನ ಹೇಳಿದ ಮಾತನ್ನು ನೆನಪಿಗೆ ತಂದುಕೊಳ್ಳದ್ದೀರಿ ಎಂದೂ ವಿವರಿಸಿದರು.

ಕನ್ನಡ ಟಿವಿ‌ ವಾಹಿನಿಯೊಂದರಲ್ಲಿ ಕಾರ್ಯಕ್ರಮ ನೀಡುವ ಇವರು ಕೆಲವರ್ಷಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಮಾಜಿ ಮು.ಮಂ.ಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ, ಮಾಜಿ ಶಾಸಕ ವಸಂತ ಬಂಗೇರರ ವಿಚಾರದಲ್ಲಿ,ಹೇಳಿದ್ದ ಜ್ಯೋತಿಷ್ಯ ನಿಜವಾಗಿತ್ತು. ಅಳದಂಗಡಿಯಲ್ಲಿ ಇವರು ಹೇಳಿದ ಭವಿಷ್ಯವಾಣಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ರಾಬರ್ಟ್ ಸಿನಿಮಾದಲ್ಲಿ ದರ್ಶನ್ ರ ಭುಜದ ಮೇಲೆ ಕುಳಿತ ಈ ಬಾಲ ನಟ ಯಾರ ಮಗ ಗೊತ್ತಾ?

Wed Jan 15 , 2020
Source Credit RJ News Kannada ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ಸ್ಟಾರ್ ನಟರ ಸಿನಿಮಾಗಳ ಪೋಸ್ಟರ್ ಗಳು, ಟೀಸರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಉಡುಗೊರೆ ನೀಡಿದೆ.. ಅದೇ ರೀತಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷೆಯ ಸಿನಿಮಾ ರಾಬರ್ಟ್ ಚಿತ್ರದ ಎರಡನೇ ಲುಕ್ ನ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಿದ್ದು, ಎಂದಿನಂತೆ ಡಿ ಬಾಸ್ ಅಭಿಮಾನಿಗಳಿಂದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ.. Pin it Email https://nirantharanews.com/%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b3%86%e0%b2%b3%e0%b3%8d%e0%b2%a4%e0%b2%82%e0%b2%97%e0%b2%a1%e0%b2%bf-%e0%b2%b6%e0%b2%be/#UGhvdG9HcmlkXzE ಇನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links