ಭಟ್ಟರ ‘ದನಕಾಯೋನು’ ಸಿನಿಮಾ ನಟಿ ಜೊತೆ ಹಾರ್ದಿಕ್ ಪಾಂಡ್ಯ ಮದ್ವೆ!

Source Credit Filmibeat.com

ಯಾರದು ದನಕಾಯೋನು ನಟಿ?

ದುನಿಯಾ ವಿಜಯ್ ಹಾಗೂ ಪ್ರಿಯಾಮಣಿ ನಟಿಸಿದ್ದ ‘ದನಕಾಯೋನು’ ಚಿತ್ರ ಮಗೆ ನೆನಪಿರಬಹುದು. ಈ ಚಿತ್ರದ ನಟಿ ಅಂದ್ರೆ ಯಾರೂ ಅಂತ ಜಾಸ್ತಿ ಯೋಚಿಸಬೇಡಿ. ದನಕಾಯೋನು ಚಿತ್ರದ ‘ಬಾರೆ ಗಂಗೆ ಬಾರೆ ತುಂಗೆ…’ ಹಾಡಿನಲ್ಲಿ ವಿದೇಶಿ ಹುಡುಗಿಯೊಬ್ಬಳ ಸ್ಪೆಷಲ್ ಎಂಟ್ರಿ ಇದೆ. ಆ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ಲವ್ವಲ್ಲಿ ಇದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.

ಯಾರು ಈ ನತಾಶಾ ಸ್ಟಾಂಕೋವಿಕ್?

ಮುಂಬೈನ ಮೂಲದ ನಟಿ ನತಾಶಾ ಸ್ಟಾಂಕೋವಿಕ್ ಸರ್ಬಿಯಾ ನಟಿಯಾಗಿದ್ದಾರೆ. ಮಾಡೆಲ್, ಡ್ಯಾನ್ಸರ್ ಕೂಡ ಹೌದು. ಬಿಗ್ ಬಾಸ್ ಹಿಂದಿ 8ನೇ ಅವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ನಾಚ್ ಬಲಿಯೇ 9ನೇ ಆವೃತ್ತಿಯಲ್ಲೂ ಸ್ಪರ್ಧಿಯಾಗಿದ್ದರು. ಸತ್ಯಾಗ್ರಹ, 7 ಹವರ್ಸ್ ಟು ಗೊ, ಡ್ಯಾಡಿ, ಜೀರೋ ಅಂತಹ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಈಕೆ ಜೊತೆ ಮದ್ವೆಗೆ ಗ್ರೀನ್ ಸಿಗ್ನಲ್

ನತಾಶ ಅವರನ್ನ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬಕ್ಕೆ ಪರಿಚಯಿಸಿದ್ದಾರೆ. ಬಹುತೇಕ ಎಲ್ಲ ಕೌಟುಂಬಿಕ ಕಾರ್ಯಕ್ರಮಗಳಿಗೂ ನತಶಾ ಹೋಗ್ತಾರಂತೆ. ಇತ್ತೀಚಿಗಷ್ಟೆ ಹಾರ್ದಿಕ್ ಅವರ ಮನೆಯಲ್ಲಿ ನಡೆದಿದ್ದ ಬರ್ತಡೇಯಲ್ಲೂ ನತಾಶ ಕಾಣಿಸಿಕೊಂಡಿದ್ದರಂತೆ. ನತಶಾ ನನ್ನ ಗರ್ಲ್ ಫ್ರೆಂಡ್ ಎಂದು ಪರಿಚಯ ಮಾಡಿರುವ ಹಾರ್ದಿಕ್ ಗೆ ಮನೆಯವರಿಂದ ಒಪ್ಪಿಗೆ ಕೂಡ ಪಡೆದುಕೊಂಡಿದ್ದಾರಂತೆ.

ಮತ್ತೆ ಹುಡುಗಿ ಬದಲಾದ್ರು ಅಚ್ಚರಿ ಇಲ್ಲ

ನತಾಶ ಜೊತೆ ಹಾರ್ದಿಕ್ ಪಾಂಡ್ಯ ಒಳ್ಳೆಯ ಸ್ನೇಹ ಇದೆ. ಹಾರ್ದಿಕ್ ಬರ್ತಡೇಗೆ ವಿಶ್ ಮಾಡಿದ್ದ ನತಾಶ ಪೋಸ್ಟ್ ಭಾರಿ ಚರ್ಚಗೆ ಕಾರಣವಾಗಿತ್ತು. ಹಾರ್ದಿಕ್ ಮನೆಯವರಿಗೂ ನತಶಾ ಪರಿಚಯ ಇದೆ. ಮದುವೆಯಾಗುವ ಸಾಧ್ಯತೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಆದರೆ, ಅಧಿಕೃತವಾಗುವವರೆಗೂ ಈ ವಿಚಾರ ಸತ್ಯಕ್ಕೆ ಹತ್ತಿರವಿಲ್ಲ. ಇದೊಂದು ವದಂತಿಯಾಗಿಯೇ ಉಳಿದುಕೊಳ್ಳಲಿದೆ.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ರಜನಿಕಾಂತ್ ಮುಂದಿನ ಚಿತ್ರಕ್ಕೆ ಇಬ್ಬರು ನಾಯಕಿಯರು!

Thu Oct 31 , 2019
Source Credit Filmibeat.com Pin it Email https://nirantharanews.com/%e0%b2%ad%e0%b2%9f%e0%b3%8d%e0%b2%9f%e0%b2%b0-%e0%b2%a6%e0%b2%a8%e0%b2%95%e0%b2%be%e0%b2%af%e0%b3%8b%e0%b2%a8%e0%b3%81-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%a8%e0%b2%9f/#cmVkLmpwZw== Gossips oi-Bharath Kumar K | Published: Thursday, October 17, 2019, 18:12 [IST] ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ‘ದರ್ಬಾರ್’ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ. ಎಆರ್ ಮುರುಗದಾಸ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಸುಮಾರು ವರ್ಷದ ನಂತರ ತಲೈವಾ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ಇದೀಗ, ರಜನಿಯ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಆರಂಭವಾಗಿದೆ. ತಲೈವಾ ಅವರ ಆಪ್ತರ ಪ್ರಕಾರ, ರಜನಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links