ಬೈಕ್‍ಗೆ ಬಸ್ ಡಿಕ್ಕಿ : ಯುವ ವೈದ್ಯ ಮೃತ್ಯು  

Source Credit NewsKannada.com


DSK
  ¦   


Jan 13, 2020 09:47:00 AM (IST)

ಮೂಡುಬಿದಿರೆ: ಬೈಕ್‍ಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಆಳ್ವಾಸ್ ಆಯುರ್ವೇದ ಕಾಲೇಜಿನ ತರಬೇತಿ ನಿರತ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರುಗದ್ದೆ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.

 ಕೇರಳದ ಕೊಲ್ಲಂನ ಡಾ. ಕೃಷ್ಣಾನಂದ(24)ಎಂದು ಮೃತಪಟ್ಟವರು.  ಇವರು ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು  ಭಾನುವಾರ ಬೆಳಿಗ್ಗೆ ಮೂಡುಬಿದಿರೆಯಿಂದ ಬೈಕ್‍ನಲ್ಲಿ ಹೊರಟಿದ್ದರು. ಕೆಸರುಗದ್ದೆಯಲ್ಲಿ  ಹೋಗುತ್ತಿದ್ದಾಗ “ನವದುರ್ಗಾ” ಎಂಬ  ಹೆಸರಿನ ಖಾಸಗಿ ಎಕ್ಸ್ ಪ್ರೆಸ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‍ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಅಪಘಾತದಿಂದ ವೈದ್ಯ ರಸ್ತೆಗೆ ಬಿದ್ದಾಗ ಬಸ್ಸಿನ ಹಿಂಬದಿ ಚಕ್ರ ಅವರ ತಲೆಯ ಮೇಲೆ ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟರೆನ್ನಲಾಗಿದೆ. ಬಸ್ ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪೌರತ್ವಕಾಯ್ದೆ ಪ್ರತಿಭಟನೆಗೆ ಬಳಸಿದ್ದ ಕುರ್ಚಿ ಸೇರಿದಂತೆ ಮಿನಿ ಲಾರಿಗೆ ಬೆಂಕಿ

Mon Jan 13 , 2020
Source Credit TheMangaloreMirror.in ಪೌರತ್ವಕಾಯ್ದೆ ಪ್ರತಿಭಟನೆಗೆ ಬಳಸಿದ್ದ ಕುರ್ಚಿ ಸೇರಿದಂತೆ ಮಿನಿ ಲಾರಿಗೆ ಬೆಂಕಿ ಮಂಗಳೂರು ಜನವರಿ 13: ಪೌರತ್ವ ಕಾಯ್ದೆ ವಿರುದ್ದದ ಪ್ರತಿಭಟನೆ ವೇಳೆ, ಪ್ರತಿಭಟನೆಗೆ ಬಳಸಿದ್ದ 2,500 ಕುರ್ಚಿಗಳು ಸೇರಿದಂತೆ ಮಿನಿ ಲಾರಿಗೆ ಬೆಂಕಿ ಬಿದ್ದಿರುವ ಘಟನೆ ಮಂಗಳೂರು ಹೊರ ವಲಯದ ದೇರಳಕಟ್ಟೆ ಸಮೀಪ ನಡೆದಿದೆ. Pin it Email https://nirantharanews.com/%e0%b2%ac%e0%b3%88%e0%b2%95%e0%b3%8d%e2%80%8d%e0%b2%97%e0%b3%86-%e0%b2%ac%e0%b2%b8%e0%b3%8d-%e0%b2%a1%e0%b2%bf%e0%b2%95%e0%b3%8d%e0%b2%95%e0%b2%bf-%e0%b2%af%e0%b3%81%e0%b2%b5-%e0%b2%b5%e0%b3%88/#V2hhdHNBcHAtSW1 ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿಯಿಂದ ನಿನ್ನೆ ಪೌರತ್ವ ಖಾಯ್ದೆ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಲಾಗಿತ್ತು. ರ‍್ಯಾಲಿ ಮುಗಿದ ಬಳಿಕ ಕುರ್ಚಿಗಳನ್ನು ಮಿನಿ ಲಾರಿಗೆ ತುಂಬಿಸಲಾಗಿತ್ತು. Pin it Email […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links