ಬೆಳ್ಳಂಬೆಳಿಗ್ಗೆ ಮತ್ತೊಬ್ಬ ಸದಸ್ಯರ ಮನೆಯವರು ಎಂಟ್ರಿ..‌ ಯಾರು ಗೊತ್ತಾ ಇವರು..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ 13ನೇ ವಾರದಲ್ಲಿ ನಿನ್ನೆ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಮತ್ತು ಮಕ್ಕಳು ಬಂದಿದ್ದರು.. ಅಳೋದೇ ಇಲ್ಲ ಎನ್ನುತ್ತಿದ್ದ ಕುರಿ ಮಡದಿ ಮಕ್ಕಳನ್ನು ನೋಡಿ ಕಣ್ಣೀರಿಟ್ಟರು.. ಅವರು ಹೋದ ಮೇಲೂ ಕೂಡ ಮಕ್ಕಳು ಕೊಟ್ಟ ಲೆಟರ್ ನೋಡಿ ಭಾವುಕರಾದರು..

ಇನ್ನು ಟಾಸ್ಕ್ ಅದು ಇದು ಅಂತ ಎಲ್ಲಾ ಮುಗಿಸಿ ಸದಸ್ಯರು ಮಲಗಿದ್ದ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಮತ್ತೊಬ್ಬ ಸದಸ್ಯರ ಫ್ಯಾಮಿಲಿ ಮೆಂಬರ್ ಎಂಟ್ರಿ ಕೊಟ್ಟಿದ್ದಾರೆ.. ಹೌದು ಇನ್ನೂ ಬೆಳಕಾಗದ ಮುಂಜಾನೆ ಸಮಯದಲ್ಲಿ ಬಿಗ್ ಮನೆಗೆ ಪ್ರಿಯಾಂಕ ಅವರ ಅಮ್ಮ ಬಂದಿದ್ದಾರೆ..

ಇನ್ನೂ ಲೈಟ್ ಆನ್ ಆಗದ ಸಮಯದಲ್ಲಿ ಯಾರೋ ಬೆಡ್ ರೂಂ ಏರಿಯಾದಲ್ಲಿ ಓಡಾಡಿದ್ದನ್ನು ನೋಡಿ ವಾಸುಕಿ‌ ಹೆದರಿ ಕಿರುಚಿಕೊಂಡಿದ್ದಾರೆ..‌ ಆನಂತರ ಅವರು ಪ್ರಿಯಾಂಕ ಅವರ ತಾಯಿ ಎಂದು ತಿಳಿದು ನಿಟ್ಟುಸಿರು ಬಿಟ್ಟರು..

ತಕ್ಷಣ ಮನೆಯ ಎಲ್ಲಾ ಲೈಟ್ ಗಳು ಆನ್ ಆದವು ಅಮ್ಮನನ್ನು ನೋಡಿ ಭಾವುಕರಾಗಿ ಕಣ್ಣೀರಿಡುತ್ತಲೇ ಇದ್ದರು.. ಅಷ್ಟರಲ್ಲಿ ಅಮ್ಮನನ್ನು ನೋಡಿ ಖುಷಿ ಪಡಬೇಕು ಯಾಕ್ ಅಳ್ತೀಯಾ ಎಂದು ತಾಯಿಯೇ ಸಮಾಧಾನ ಮಾಡಿದರು.. ಕೆಲವೇ ತಿಂಗಳ ಹಿಂದೆ ಅಪ್ಪನನ್ನು ಕಳೆದುಕೊಂಡ ಪ್ರಿಯಾಂಕ ಅಮ್ಮನನ್ನು ನೋಡಿ ಅಪ್ಪನನ್ನು ನೆನೆದು ಕಣ್ಣೀರುಡುತ್ತಲೇ ಇದ್ದರು.. ಆಗ ಮನೆಯವರೆಲ್ಲಾ ಬಂದ ಇಬ್ಬರನ್ನೂ ಸಮಾಧಾನ ಮಾಡಿದರು..

ಇನ್ನು ಇತ್ತ ದೀಪಿಕಾ ಅವರ ತಾಯಿ ಬಂದು ಹೋದಾಗಿನಿಂದ ಮನೆಗೆ ಬರುವ ಯಾರೂ ಕೂಡ ತಂದ ತಿಂಡಿಯನ್ನು ಮಕ್ಕಳಿಗೆ ಕೊಡುತ್ತಿಲ್ಲ.. ಎಲ್ಲಾ ಬೇರೆ ಸದಸ್ಯರ ಕೈಗೆ ನೀಡುತ್ತಿರೋದು ವಿಶೇಷ… ವಿಶೇಷ ಅನ್ನೋದಕ್ಕಿಂತ ಹೊರಗೆ ದೀಪಿಕಾ ಅವರ ತಾಯಿ ವಿಷಯದಲ್ಲಿ ಆದ ಟ್ರೋಲ್ ಎಫೆಕ್ಟ್ ಕೂಡ ಕಾರಣ ಎನ್ನಲೇಬೇಕು..

ಇನ್ನು ಮನೆಗೆ ಬಂದ ಮನೆಯ ಸದಸ್ಯರೆಲ್ಲರೂ ಬರೀ ನಾನ್ ವೆಜ್ ಅನ್ನೇ ತರುತ್ತಿದ್ದರು.. ವೆಜಿಟೇರಿಯನ್ ಗಳಾದ ವಾಸುಕಿ ಪ್ರಿಯಾಂಕ ಎಲ್ಲಾ ಸಪ್ಪೆ ಮುಖ ಮಾಡಿಕೊಂಡು ನೋಡುವಂತಾಗಿತ್ತು..‌ ಆದರೆ ಪ್ರಿಯಾಂಕ ಅವರ ತಾಯಿ ವೆಜಿಟೇರಿಯನ್ ತಂದಿದ್ದು ಸದ್ಯ ಭಯ ಪಟ್ಟ ವಾಸುಕಿ‌ ಮುಖದಲ್ಲಿ ಕೊಂಚ ಮಂದಹಾಸ ಮೂಡಿತು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಉಡುಪಿಯಲ್ಲಿ ಇಬ್ಬರು ಶಂಕಿತ ಉಗ್ರರ ಸೆರೆ

Tue Jan 14 , 2020
Source Credit NewsKannada.com HSA   ¦    Jan 14, 2020 04:37:30 PM (IST) ಉಡುಪಿ: ಕೇರಳದಿಂದ ಬಂದಿದ್ದ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಮಂಗಳವಾರ ಬೆಳಗ್ಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತರಿಬ್ಬರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಇವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಉಗ್ರರನ್ನು ಬಂಧಿಸಿದ ವಿಚಾರವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಚಿಕ್ಕಮಗಳೂರಿನಲ್ಲಿ ಖಚಿತಪಡಿಸಿದ್ದಾರೆ. Source Credit NewsKannada.com “This story was auto-published from a syndicated feed & […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links