ಬಿಗ್ ಬಾಸ್ ಮುಗಿದು ನಾಲ್ಕು ದಿನಗಳ ನಂತರ ಕಾಣಿಸಿಕೊಂಡ ಕುರಿ ಪ್ರತಾಪ್ ಹೇಳಿದ್ದೇನು? ಬೇಸರವಾದ್ರಾ ಕಾಮಿಡಿ ಸ್ಟಾರ್..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ಕಾಮಿಡಿ ಕಿಂಗ್.. ತನ್ನದೇ ಆದ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಇದ್ದ 112 ದಿನಗಳೂ ಕೂಡ ಮನರಂಜನೆ ನೀಡಿದ ಕುರಿ ಪ್ರತಾಪ್ ಅವರು ಬಿಗ್ ಬಾಸ್ ಫಿನಾಲೆ ನಡೆದ ದಿನದಿಂದಲೂ ಎಲ್ಲಿಯೂ ಕಾಣಿಸಿರಲಿಲ್ಲ..

ನಾಲ್ಕು ದಿನಗಳಾದರೂ ಕೂಡ ಸಾಮಾಜಿಕ ಜಾಲತಾಣದಲ್ಲಿಯಾಗಲಿ ಅಥವಾ ಮಾದ್ಯಮದ ಸಂದರ್ಶನದಲ್ಲಿ ಕಾಣಿಸಿಕೊಂಡಿರಲಿಲ್ಲ.. ಕುರಿ ಪ್ರತಾಪ್ ಅವರು ಬಿಗ್ ಬಾಸ್ ನಲ್ಲಿ‌ ಕೊನೆಯ ಹಂತದಲ್ಲಿ ಶೈನ್ ಮುಂದೆ ಸೋಲಬೇಕಾಯಿತು.. ಆದರೆ ಕೋಟ್ಯಾಂತರ ಜನರ ಮನಗೆದ್ದ ಕುರಿ ಪ್ರತಾಪ್‌ ಫಿನಾಲೆ ವೇದಿಕೆಯಲ್ಲಿ ಸೋತ ಕ್ಷಣದಲ್ಲಿ ಕಾಮಿಡಿ ಮಾಡಿದರೂ ಕೂಡ ಮನಸ್ಸಿನಲ್ಲಿ ಬೇಸರ ಇರಲಾರದೆ ಇರದು..

ಬಿಗ್ ಬಾಸ್ ಗೆ ಹೋದ ದಿನದಿಂದಲೂ ಕೂಡ ಕುರಿ ಪ್ರತಾಒ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದರು.. ಮೊದಲ ಒಂದೆರೆಡು ವಾರಗಳಲ್ಲಿಯೇ ಜೈಜಗದೀಶ್ ಅವರು ಕುರಿ ಪ್ರತಾಪ್ ಅವರನ್ನು “ನಿನಗ್ಯಾಕಯ್ಯ ಬೇಕು ಬಿಗ್ ಬಾಸ್? ಹೊರಗೆ ಚೆನ್ನಾಗಿ ಸಂಪಾದನೆ ಮಾಡ್ತಿದ್ದೀಯಲ್ಲಾ” ಅಂತ ಕೇಳಿದ್ರು.. ಆ ಸಮಯದಲ್ಲಿ ಕುರಿ ಪ್ರತಾಪ್ ಅವರು ಇಲ್ಲ ಸರ್ ಗೆಲ್ಬೇಕು ಸ್ವಲ್ಪ ಮನೆಗೆ ಲೋನ್ ಎಲ್ಲಾ ಆಗಿದೆ ಎಂದಿದ್ದರು..

ಮೇಲೆ ಅಷ್ಟಾಗಿ ತೋರಿಸಿಕೊಳ್ಳದಿದ್ದರೂ ಕುರಿ ಪ್ರತಾಪ್ ಅವರು ಗೆಲ್ಲುವ ಸಲುವಾಗಿ ಸಾಕಷ್ಟು ಶ್ರಮ ಪಟ್ಟು ಪ್ರಯತ್ನ ಮಾಡುತ್ತಿದ್ದರು.. ಕುರಿ ಪ್ರತಾಪ್ ಅವರು ಟಾಸ್ಕ್ ಗಳನ್ನು ಮಾಡುತ್ತಿದ್ದ ರೀತಿಯಿಂದಲೇ ಅದನ್ನು ತಿಳಿಯಬಹುದಾಗಿತ್ತು..

ಆದರೆ ಎಲ್ಲೋ‌ ಒಂದು ಕಡೆ ಶೈನ್ ಶೆಟ್ಟಿ ಅವರು ಒಂದು ಹೆಜ್ಜೆ ಕುರಿ ಪ್ರತಾಪ್ ಅವರಿಗಿಂತ ಮುಂದೆ ಇಟ್ಟುಬಿಟ್ಟಿದ್ದರು.. ಅದೇ ಕಾರಣಕ್ಕೆ ಗೆಲುವಿನ ಕಿರೀಟ ಶೈನ್ ಅವರ ಮುಡಿಗೇರಿತು.. 50 ಲಕ್ಷ ಬಹುಮಾನದ ಜೊತೆಗೆ 11 ಲಕ್ಷ ನಗದು ಮತ್ತು ಒಂದು ಕಾರ್ ಶೈನ್ ಅವರ ಪಾಲಾಯಿತು.. ರನ್ನರ್ ಆದ ಕುರಿ ಪ್ರತಾಪ್ ಅವರಿಗೆ ಸಂಭಾವನೆ ಜೊತೆಗೆ ಸಿಕ್ಕಿದ್ದು 6 ಲಕ್ಷ ಮಾತ್ರ..

ಫಿನಾಲೆ ನಡೆದ ನಂತರ ಕುರಿ ಪ್ರತಾಪ್ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಯಾವ ಸಂದರ್ಶನವಾಗಲಿ‌ ಸಾಮಾಜಿಕ ಜಾಲತಾಣವಾಗಲಿ ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ.. ಇದನ್ನು ಗಮನಿಸಿದ ಜನರು ಕುರಿ ಪ್ರತಾಪ್ ಅವರು ಬೇಸರಗೊಂಡಿರಬಹುದು ಎನ್ನುತ್ತಿದ್ದರು..

ಬೇಸರ ಒಂದಲ್ಲಾ ಒಂದು ಮೂಲೆಯಲ್ಲಿ ಇದ್ದೇ ಇರುತ್ತದೆ.. ಆದರೆ ವಾಸ್ತವವಾಗಿ‌ ಕುರಿ ಪ್ರತಾಪ್ ಅವರು ಬಿಗ್ ಬಾಸ್ ಗೆ ಹೋಗುವ ಮುನ್ನ ಸಿನಿಮಾಗಳನ್ನು ಒಪ್ಪಿಕೊಂಡು ಹೋಗಿದ್ದರು.. ಬಿಗ್ ಬಾಸ್ ಮನೆಯೊಳಗೆ ಸಾಕಷ್ಟು ಟೆಂಷನ್ ಕೂಡ ಮಾಡಿಕೊಂಡಿದ್ದರು..

ಅದೇ ಕಾರಣಕ್ಕೆ ಬಿಗ್ ಬಾಸ್ ನಿಂದ ಹೊರ ಬಂದ ಕೂಡಲೇ ಸಂದರ್ಶನಗಳಿಗೆ ಹೋಗದೆ ಮೊದಲು ತಾನು ಒಪ್ಪಿಕೊಂಡಿದ್ದ ಸಿನಿಮಾಗಳ ನಿರ್ಮಾಪಕರ ಬಳಿ ಹೋಗಿ ಮಾತನಾಡಿದ್ದಾರೆ.. ಹೌದು ಮುಂದಿನ ಜೀವನದ ದಾರಿ ನೋಡಲೇ ಬೇಕಿದೆ. ಇದೇ ಕಾರಣಕ್ಕೆ ತಮ್ಮ ಮುಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ..

ಅಷ್ಟೇ ಅಲ್ಲದೆ ನಾಲ್ಕು ದಿನದ ನಂತರ ಇದೀಗ ಜನರ ಮುಂದೆ ಕಾಣಿಸಿಕೊಂಡಿದ್ದು ತನಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.. ಅಷ್ಟೇ ಅಲ್ಲದೆ ವೀಡಿಯೋ ಒಂದನ್ನು ಮಾಡಿ ಅದರಲ್ಲಿ ಇಂದು ಬಿಡುಗಡೆಯಾಗುತ್ತಿರುವ ಬಿಲ್ ಗೇಟ್ಸ್ ಸಿನಿಮಾದ ಬಗ್ಗೆ ತಿಳಿಸಿ ಸಿನಿಮಾ ನೋಡುವಂತೆ ಮನವಿ‌ ಮಾಡಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಹಾಯ ಮಾಡಿ ಅಂತ ಕೇಳಿದ್ದಕ್ಕೆ ದರ್ಶನ್ ಹೇಳಿದ ಮಾತೇ ಬೇರೆ.. ದರ್ಶನ್ ರ ಮತ್ತೊಂದು ಮುಖ ತೆರೆದಿಟ್ಟ ಶ್ರೀಮುರುಳಿ..

Fri Feb 7 , 2020
Source Credit RJ News Kannada ಕನ್ನಡದಲ್ಲಿ ಅದೆಷ್ಟೇ ರಿಯಾಲಿಟಿ‌ ಶೋ ಗಳು ಬಂದರೂ ಕೂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಷ್ಟು ಬೇರೆ ಯಾವ ಶೋಗಳು ಜನರಿಗೆ ಹತ್ತಿರವಾಗೋದಿಲ್ಲ.. ಅದರಲ್ಲೂ ಸ್ಟಾರ್ ನಟರ ಜೀವನದ ಕಷ್ಟಗಳನ್ನು ಕೇಳಿದಾಗಲಂತೂ ನಮ್ಮ‌ಕಷ್ಟಗಳೇನು ಅಲ್ಲವೇ ಅಲ್ಲ ಎಂದೆನಿಸೋದು ಸಹಜ.. ಅದೇ ರೀತಿ ಕಳೆದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಶ್ರೀ ಮುರುಳಿ ಅವರನ್ನು ಕರೆಸಲಾಗಿತ್ತು.. Pin it Email https://nirantharanews.com/%e0%b2%ac%e0%b2%bf%e0%b2%97%e0%b3%8d-%e0%b2%ac%e0%b2%be%e0%b2%b8%e0%b3%8d-%e0%b2%ae%e0%b3%81%e0%b2%97%e0%b2%bf%e0%b2%a6%e0%b3%81-%e0%b2%a8%e0%b2%be%e0%b2%b2%e0%b3%8d%e0%b2%95%e0%b3%81-%e0%b2%a6/#UGhvdG9HcmlkXzE ಆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.. ಅವರಿಗಿಂತ ಇನ್ನು ದೊಡ್ಡ ದೊಡ್ಡ ಸಾಧನೆ ಮಾಡಿದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links