ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಭೂಮಿ ಶೆಟ್ಟಿ ಮದುವೆ.‌. ಈಗಾಗಲೇ ಭೂಮಿಗೆ ವಿಷಯ ತಿಳಿಸಿದ ಮಾವ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರಲ್ಲಿ 9 ನೇ ವಾರ ಮುಗಿದಿದ್ದು ಮನೆಯಿಂದ ರಾಜು ತಾಳಿಕೋಟೆ ಅವರು ತಮ್ಮ ಜರ್ನಿ ಮುಗಿಸಿ ಹೊರ ಬಂದಿದ್ದಾರೆ..

ಇನ್ನುಳಿದಂತೆ ಈ ಸೀಸನ್ ನ ಬಿಗ್ ಬಾಸ್ ಇನ್ನು 5 ವಾರಗಳಷ್ಟೇ ಇದ್ದು, 50 ಲಕ್ಷದ ಒಡೆಯನಾಗಲು ಪ್ರಬಲ ಪೈಪೋಟಿಯೇ ಇದೆ ಎನ್ನಬಹುದು. ಇನ್ನು ಈ ವಾರ ಮನೆಗೆ ಸರ್ಪ್ರೈಸ್ ಆಗಿ ಭೂಮಿ ಶೆಟ್ಟಿ ಅವರ ಮಾವ ಬಂದದ್ದು ವಿಶೇಷ. ಆ ವಿಶೇಷದ ಜೊತೆ ಮತ್ತೊಂದು ವಿಶೇಷವೂ ಇದೆ.. ಹೌದು ಭೂಮಿ ಶೆಟ್ಟಿ‌ ಮನೆಯಿಂದ ಹೊರ ಬಂದ ನಂತರ ಅವರ ಮದುವೆ ನಡೆಯಲಿದೆ..

ಈ ಬಗ್ಗೆ ಭೂಮಿ ಅವರ ಮಾವನೇ ಭೂಮಿ‌ ಬಳಿ‌ ಹೇಳಿ ಹೋಗಿದ್ದು, ಇದನ್ನು ಇತರ ಸದಸ್ಯರ ಜೊತೆಗೆ ನಿನ್ನೆಯ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ.. ಭೂಮಿ ನಟನಾ ವೃತ್ತಿಗೆ ಬರುವುದು ಇಷ್ಟವಿಲ್ಲದ ಮಾವನಿಗೆ ಭೂಮಿ ಚೆನ್ನಾಗಿ ಓದಿ ಸೆಟಲ್ ಆಗಬೇಕಿತ್ತು ಎಂಬ ಆಸೆ ಇತ್ತು..

ಆದರೆ ಎಲ್ಲರ ಮಾತನ್ನು ತಿರಸ್ಕರಿಸಿ ಭೂಮಿ ಬೆಂಗಳೂರಿಗೆ ಬಂದು ಧಾರಾವಾಹಿಯಲ್ಲಿ ನಟಿಸೋದರ ಮೂಲಕ ತಮ್ಮ ಜೀವನವನ್ನು ಕಂಡುಕೊಂಡರು… ಹೀಗೆ 4 ವರ್ಷ ಕಳೆದೇ ಹೋಯಿತು.. ನಂತರ ಬಿಗ್ ಬಾಸ್ ಮನೆಗೆ ಬರಲು ಅವಕಾಶವೂ ಸಿಕ್ಕಿತು.. ಬಿಗ್ ಬಾಸ್ ಮನೆಗೆ ಬಂದ ಭೂಮಿಗೆ ತನ್ನ ಮಾವ ಮಾತನಾಡೋದಿಲ್ಲ ಅನ್ನೋ ನೋವು ಕಾಡುತ್ತಲೇ ಇತ್ತು.. ಎರಡನೇ ವಾರದಲ್ಲಿ ಕ್ಷಮೆ ಕೇಳುವ ಚಟುವಟಿಕೆಯಲ್ಲಿ ಮಾವನಿಗೆ ಕ್ಷಮೆ ಕೇಳಿ ಹೊರಗೆ ಬಂದ ಮೇಲೆ ದಯವಿಟ್ಟು ಮಾತನಾಡಿಸು ಎಂದು ಅಂಗಲಾಚಿದಳು..

ಇದನ್ನು ನೋಡಿದ್ದ ಬಿಗ್ ಬಾಸ್ ಮೊನ್ನೆಯ ಸಂಚಿಕೆಯಲ್ಲಿ ಭೂಮಿ ಅವರ ಮಾವನನ್ನು ಬಿಗ್ ಮನೆ ಒಳಗೆ ಕಳುಹಿಸಿಕೊಟ್ಟರು.. ಆ ಸಮಯದಲ್ಲಿ ಭೂಮಿ‌ ಮೇಲಿನ ಕೋಪ ಮರೆತು ಮಗುವಂತೆ ಊಟ ತಿನ್ನಿಸಿದ್ದು ಮನಮುಟ್ಟುವಂತಿತ್ತು..

ಇನ್ನು ಮನೆಗೆ ಬಂದ ಮಾವನನ್ನು ನೋಡಿ ಭೂಮಿ ಕೂಡ ಭಾವುಕರಾಗಿ ಬಿಕ್ಕಿ ಬಿಕ್ಕಿ‌ ಅತ್ತಳು.. ಕಾಲಿಗೆ ಬಿದ್ದು ಕ್ಷಮೆಯನ್ನೂ ಕೂಡ ಕೇಳಿದಳು.. ಕೊನೆಗೆ ಎಲ್ಲವೂ ಸರಿ ಹೋಯಿತು.. ಆದರೆ ಹೋಗುವ ಮುನ್ನ ಭೂಮಿ ಅವರ ಮಾವ ಭೂಮಿ ಅವರ ಮದುವೆ ವಿಚಾರವನ್ನು ಮಾತನಾಡಿ ಹೋಗಿದ್ದಾರೆ..

ಹೌದು ಮನೆಯಿಂದ ಹೊರ ಬಂದ ನಂತರ ಒಂದು ವರ್ಷ ನಿನಗಿಷ್ಟ ಬಂದ ಕೆಲಸ ಮಾಡಿಕೋ.. ನಂತರ ನಾನು ನೋಡುವ ಹುಡುಗನನ್ನು ಮದುವೆಯಾಗಬೇಕು ಎಂದಿದ್ದಾರೆ. ಇದಕ್ಕೆ ಭೂಮಿ ಅವರೂ ಕೂಡ ಒಪ್ಪಿಕ್ಕ್ಂಡಿದ್ದು, ಕಂಕಣ ಬಲ ಕೂಡಿ ಬಂದರೆ ಮನೆಯವರು ನೋಡಿದ ಹುಡುಗನೊಂದಿಗೆ 2020 ರಲ್ಲೇ ಭೂಮಿ ಕಲ್ಯಾಣ ನಡೆಯಲಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅತ್ತ ಶ್ರೀಮನ್ನಾರಾಯಣ ಟ್ರೆಂಡಿಂಗ್ ನಲ್ಲಿದೆ.. ಇತ್ತ ರಶ್ಮಿಕಾ ತಾಯಿ ರಶ್ಮಿಕಾ ಬಗ್ಗೆ ಹೊಗಳಿದ್ದೇನು ಗೊತ್ತಾ?

Sun Dec 15 , 2019
Source Credit RJ News Kannada ಕನ್ನಡದ ಬಹುನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್ ಅಂದುಕೊಂಡಂತೆ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ರಕ್ಷಿತ್ ಶೆಟ್ಟಿ ಕೆರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲಾಗಬಹುದು ಎಂದು ಊಹಿಸಲಾಗಿದೆ.. Pin it Email https://nirantharanews.com/%e0%b2%ac%e0%b2%bf%e0%b2%97%e0%b3%8d-%e0%b2%ac%e0%b2%be%e0%b2%b8%e0%b3%8d-%e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6-%e0%b2%b9%e0%b3%8a%e0%b2%b0-%e0%b2%ac%e0%b2%82%e0%b2%a6/#UGhvdG9HcmlkXzE ಇನ್ನು ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರಿಗೂ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ.. ನಂತರ ಪ್ರೀತಿ ನಿಶ್ಚಿತಾರ್ಥ ಹಾಗೂ ದೂರಾದ ನಂತರ ರಶ್ಮಿಕಾ ತೆಲುಗು ಹಾಗೂ ಕನ್ನಡ ಇಂಡಸ್ಟ್ರಿಯಲ್ಲಿ ಮಿಂಚ ತೊಡಗಿದರು.. ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದರು.. ಬಹಳಷ್ಟು ಬಿಡುಗಡೆಯಾಗಿ ಹಿಟ್ ಆದವು.. Pin it […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links