ಬಿಗ್ ಬಾಸ್ ಮನೆಯಿಂದ ಬಂದು ಮತ್ತೆ ಶೈನ್ ಶೆಟ್ಟಿ ಮಾಡ್ತಾ ಇರೋ ಕೆಲಸ ನೋಡಿ..

Source Credit RJ News Kannada

ಜೀವನದಲ್ಲಿ ಗೆಲುವು ಅನ್ನೋದು ಕೆಲವೊಮ್ಮೆ ಕೆಲವರಿಗೆ ಅಹಂ ಎಂಬುದನ್ನ ತಂದುಬಿಡುತ್ತದೆ.‌ ಗೆದ್ದೆ ಎಂಬ ಅಹಂಕಾರದಲ್ಲಿ ಹಳೆಯ ಜೀವನವನ್ನು ಮರೆತು ಬೇರೆಯದ್ದೇ ರೀತಿಯಲ್ಲಿ ವರ್ತಿಸೋಕೆ ಶುರು ಮಾಡ್ತಾರೆ.. ಆದರೆ ಶೈನ್ ಶೆಟ್ಟಿ ಅದೆಲ್ಲದರಿಂದ ದೂರ ಎನ್ನಬಹುದು..

ಬಿಗ್ ಬಾಸ್ ಗೆದ್ದ ಬಳಿಕ ತನ್ನ ಹಳೆಯ ಕೆಲಸಕ್ಕೆ ಮರಳಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ತನ್ನ ಕಷ್ಟದ ಜೀವನದಲ್ಲಿ ಕೈ ಹಿಡಿದ ಗಲ್ಲಿ ಕಿಚನ್ ನಲ್ಲಿ ಮರಳಿ ಕೆಲಸಕ್ಕೆ ಹಾಜರಾಗಿದ್ದಾರೆ..

ನಾನು ಧಾರಾವಾಹಿ ಬಿಟ್ಟಾಗ.. ಏನಾದರೂ ಬೇರೆ ಕೆಲಸ ಮಾಡಬೇಕು ಎಂದುಕೊಂಡೆ.. ಆಗ ನಮ್ಮ ಬಳಿ ಇದ್ದ ಬಂಡವಾಳದಲ್ಲಿ 3 ವೀಲರ್ ನಲ್ಲಿ ಗಲ್ಲಿ ಕಿಚನ್ ಶುರು ಮಾಡಿದೆ.. ಬನಶಂಕರಿ ಸೆಕೆಂಡ್ ಸ್ಟೇಜ್ ಸುತ್ತಾಮುತ್ತಾ ದೋಸೆ ಹೆಚ್ಚಾಗಿ ಇಷ್ಟ ಪಡ್ತಾರೆ.. ಅದೇ ಕಾರಣಕ್ಕೆ ದೋಸೆ ಸಬ್ಬಕ್ಕಿ ಇಡ್ಲಿ ಹಾಗೂ ನಾವು ಮಂಗಳೂರಿನ ಕಡೆಯವರಾದ್ರಿಂದ ನಮ್ಮ ಕಡೆಯ ಊಟವೂ ಇರಲಿ ಅಂತ ನೀರ್ ದೋಸೆ ಮಾಡ್ಲಿಕ್ಕೆ ಶುರು ಮಾಡಿದ್ವಿ..

ಬಿಗ್ ಬಾಸ್ ಗೆ ಹೋದ ನಂತರ ವ್ಯಾಪಾರ ಚೆನ್ನಾಗಿ ಆಗ್ತಾ ಇದೆ ಅಂತ ಅಮ್ಮ ಹೇಳಿದ್ರು.. ತುಂಬಾ ಸಂತೋಷ ಆಗ್ತಾ ಇದೆ.. ಸದ್ಯ 3 ವೀಲರ್ ಮೇಲಿರುವ ಭಾರವನ್ನ ಕಡಿಮೆ ಮಾಡಬೇಕು.. ಇನ್ನು ಕೆಲವೇ ತಿಂಗಳಲ್ಲಿ ಇದನ್ನ ಸ್ವಲ್ಪ ದೊಡ್ಡದು ಮಾಡಿ 4 ವೀಲರ್ ಮಾಡಬೇಕು.. ಮಾಡ್ತೀನಿ.. ದೇವರು ಒಳ್ಳೆದ್ ಮಾಡುದ್ರೆ ಬೇರೆ ಬೇರೆ ಏರಿಯಾಗಳಲ್ಲಿ ಕೂಡ ಓಪನ್ ಮಾಡ್ತೀವಿ ಎಂದರು..

ಇದಿಷ್ಟು ಶೈನ್ ಅವರ ಮಾತು ಆದರೆ.. ಶೈನ್ ಶೆಟ್ಟಿ ಅವರ ಇರುವಿಕೆ ಕೇವಲ ಮಾತಿಗೆ ಸೀಮಿತವಾಗಿರಲಿಲ್ಲ.. ಹೌದು ಸ್ವತಃ ಶೈನ್ ಶೆಟ್ಟಿ ಅವರು ಗಲ್ಲಿ ಕಿಚನ್ ನಲ್ಲಿ ಈ ಹಿಂದೆ ತಾವು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತಿದ್ದಾರೆ.. ಶೈನ್ ಶೆಟ್ಟಿ ಅವರೇ ಜನರಿಗೆ ಊಟವನ್ನು ಸರ್ವ್ ಮಾಡುತ್ತಿದ್ದಾರೆ..

ಗೆದ್ದೆ ಎಂಬ ಅಹಂ ಭಾವವಿಲ್ಲದೆ ಮತ್ತೆ ತನ್ನ ಹಳೆಯ ಕೆಲಸವನ್ನು‌ ಮಾಡುತ್ತಾ ಜನರಿಗೆ ಸರ್ವ್ ಮಾಡುತ್ತಿದ್ದಾರೆ… ಇದೇ ಕೆಲಸವನ್ನು ಇನ್ನು ಸ್ವಲ್ಪ ದೊಡ್ಡದು ಮಾಡುವ ಉದ್ದೇಶ ಇಟ್ಟುಕೊಂಡಿರುವ ಶೈನ್ ಅವರಿಗೆ ಅನ್ನಪೂರ್ಣೇಶ್ವರಿ ತಾಯಿ ಸದಾ ಜೊತೆಯಾಗಿ ಕೈಹಿಡಿಯಲಿ.. ಅವರ ಗಲ್ಲಿ ಕಿಚನ್ ಇನ್ನು ದೊಡ್ಡದಾಗಿ ಬೆಳೆಯಲಿ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Sat Feb 15 , 2020
Source Credit NewsKannada.com ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ DSK   ¦    Feb 15, 2020 06:53:15 PM (IST) Pin it Email https://nirantharanews.com/%e0%b2%ac%e0%b2%bf%e0%b2%97%e0%b3%8d-%e0%b2%ac%e0%b2%be%e0%b2%b8%e0%b3%8d-%e0%b2%ae%e0%b2%a8%e0%b3%86%e0%b2%af%e0%b2%bf%e0%b2%82%e0%b2%a6-%e0%b2%ac%e0%b2%82%e0%b2%a6%e0%b3%81-%e0%b2%ae%e0%b2%a4/#YWx2YXNfbm5yX25 ಮೂಡುಬಿದಿರೆ: ವಾರ್ಷಿಕ ಕ್ರೀಡಾಕೂಟ ಅಥವಾ ವಾರ್ಷಿಕ ಪರೀಕ್ಷೆ ಎಂದರೆ ಅದು ವರ್ಷಕ್ಕೊಂದು ಸಲ ನಡೆಯುವಂತದ್ದಲ್ಲ. ವರ್ಷವಿಡೀ ಕಲಿತ ಆಟ ಅಥವಾ ಪಾಠದ ರಿಸಲ್ಟ್‍ನ್ನು ಪಡೆಯುವ ದಿನ. ಮುಖ್ಯವಾಗಿ ನಮಗೆ ಆರೋಗ್ಯ ಭಾಗ್ಯ ಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ ಉತ್ತಮವಾಗಿರಬೇಕಾದರೆ ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links