ಬಿಗ್ ಬಾಸ್ ಮನೆಯಿಂದ ಬಂದವರೆಲ್ಲಾ ಶೈನ್ ತಾಯಿನ ಭೇಟಿ ಮಾಡ್ತಾ ಇರೋದೇಕೆ ಗೊತ್ತಾ?

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ಸದ್ಯ ಫಿನಾಲೆ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಲಾಗುತ್ತಿರುವ ಶೈನ್ ಶೆಟ್ಟಿ ಅವರ ತಾಯಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಈಗಾಗಲೇ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿರುವ ರಕ್ಷಾ ಸೋಮಶೇಖರ್, ಚಂದನ, ಚೈತ್ರಾ ಕೊಟ್ಟೂರ್ ಭೇಟಿ ಯಾಗಿದ್ದಾರೆ..

ಹೌದು ಶೈನ್ ಅವರ ಅಭಿಮಾನಿಯೊಬ್ಬರು ಶೈನ್ ತಾಯಿ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು.. ಆದರೆ ಶೈನ್ ಅವರ ತಾಯಿ ಚೈತ್ರಾ, ಚಂದನ ಹಾಗೂ ರಕ್ಷಾರಿಗೆ ಫೋನ್ ಮಾಡಿ ಅವರನ್ನೂ ಸಹ ಕರೆದುಕೊಂಡು ಹೋಗಿದ್ದರು.. ಈ ಸಮಯದಲ್ಲಿ ಕಿರಣ್ ಫುಡ್ ರೀವ್ಯೂವ್ ನ ಕಿರಣ್ ಅವರ ಕ್ಯಾಮರಾ ಕಣ್ಣಿಗೆ ಇವರು ಸೆರೆ ಸಿಕ್ಕಿದ್ದು, ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇವರ ಕತೆ ಏನೇನಾಗಿದೆ ಎಂದು ಹಂಚಿಕೊಂಡಿದ್ದಾರೆ..

ಚಂದನ ಅವರಿಗೆ ಈಗಾಗಲೇ ಧಾರಾವಾಹಿಗಳ ಆಫರ್ ಬರುತ್ತಿದ್ದು, ಇನ್ನೇನು ಕೆಲವೇ ದಿನದಲ್ಲಿ ಅಧಿಕೃತವಾಗಿ ತಿಳಿಸಲಿದ್ದಾರಂತೆ.. ಇನ್ನು ಚೈತ್ರಾ ಕೊಟ್ಟೂರ್ ಅವರು ಸಿನಿಮಾಗಳಲ್ಲಿ ಅಭಿನಯಿಸಲಿದ್ದು, ನಿರ್ದೇಶನದ ತಯಾರಿಯಲ್ಲಿಯೂ ಇದ್ದೇನೆ ಎನ್ನುತ್ತಿದ್ದಾರೆ.. ಇತ್ತ ಶೈನ್ ಅವರ ತಾಯಿ ಬಿಗ್ ಮನೆಗೆ ಹೋದಾಗ ಅಲ್ಲಿ ಆದ ನಿಜ ಅನುಭವಗಳನ್ನು ಕಿರಣ್ ಜೊತೆ ಹಂಚಿಕೊಂಡಿದ್ದಾರೆ..

ಅಭಿಮಾನಿಯೊಬ್ಬರು ಇಷ್ಟು ಆತ್ಮೀಯವಾಗಿ ಬಿಗ್ ಬಾಸ್ ಸದಸ್ಯರೊಬ್ಬರ ತಾಯಿಯನ್ನು ಮನೆಗೆ ಆಹ್ವಾನಿಸುತ್ತಾರೆ ಎಂದರೆ ನಿಜಕ್ಕೂ ಅವರ ಅಭಿಮಾನ ಮೆಚ್ಚುವಂತದ್ದು.. ಚಂದನ ಹಾಗೂ ಚೈತ್ರಾ ಕೊಟ್ಟೂರ್ ಶೈನ್ ಅವರ ತಾಯಿ ಜೊತೆ ಮಾತನಾಡಿರುವ ಸಂಪೂರ್ಣ ವೀಡಿಯೋ ಕೆಳಗಿದೆ ನೋಡಿ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅಮ್ಮನ ಮಾತನ್ನೇ ತಿರುಚಿದ ವಾಸುಕಿ.. ಬುದ್ದಿವಂತಿಕೆ ಅಂದರೆ ಇದು ಗುರು..

Wed Jan 15 , 2020
Source Credit RJ News Kannada ಬಿಗ್ ಬಾಸ್ ಈ ಸೀಸನ್ನಿನಲ್ಲಿ ಕಳೆದ ಕೆಲವು ವಾರಗಳ ಹಿಂದಿನಿಂದಲೇ ಸದಸ್ಯರ ಕುಟುಂಬದವರು ಮನೆಗೆ ಬರಲು ಶುರು ಮಾಡಿದರು.. ಅದರಂತೆ ಭೂಮಿ ಅವರ ಮಾವ.. ಕಿಶನ್ ಅವರ ತಂದೆ.. ದೀಪಿಕಾ ಅವರ ತಾಯಿ.. ಚಂದನ್ ಆಚಾರ್ ಅವರ ತಾಯಿ.. ಚಂದನ ಅವರ ತಾಯಿ.. ಹರೀಶ್ ರಾಜ್ ಅವರ ಮಡದಿ.. ಕುರಿ ಪ್ರತಾಪ್ ಅವರ ಪತ್ನಿ ಮತ್ತು ಮಕ್ಕಳು.. ಶೈನ್ ಅವರ ತಾಯಿ.. ಪ್ರಿಯಾಂಕ ಅವರ ತಾಯಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದು, ವಾಸುಕಿ ಅವರ ಮನೆಯಿಂದ ಸದಸ್ಯರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links