ಬಿಗ್ ಬಾಸ್ ಮನೆಗೆ ಬಂದ ಪ್ರಿಯಾಂಕ ತಾಯಿ ಕುರಿ ಪ್ರತಾಪ್ ಜೊತೆ ನಡೆದುಕೊಂಡ ರೀತಿ ನೋಡಿ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ 14ನೇ ವಾರದಲ್ಲಿ ನಿನ್ನೆಯಷ್ಟೇ ಕುರಿ ಪ್ರತಾಪ್ ಅವರ ಹೆಂಡತಿ ಮಕ್ಕಳು ಬಂದು ಹೋದರು.. ಇನ್ನು ಪ್ರಿಯಾಂಕ ಹಾಗೂ ವಾಸುಕಿ ಅವರ ಮನೆಯ ಸದಸ್ಯರು ಬರವುದು ಬಾಕಿ ಇತ್ತು.. ಇದನ್ನೇ ಮಾತನಾಡಿಕೊಂಡು ಮನೆಯ ಸದಸ್ಯರು ಮಲಗಿದರು.. ಎಲ್ಲರೂ ನಿದ್ರೆ ಮಾಡುತ್ತಿರುವ ಸಮಯದಲ್ಲಿ ಮಧ್ಯರಾತ್ರಿ 1 ಗಂಟೆಗೆ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದ ಮೂಲಕ ಪ್ರಿಯಾಂಕ ಅವರ ತಾಯಿ ಬಂದಿದ್ದಾರೆ..

ಬಂದವರೇ ಬಾಗಿಲು ತೆರೆದು ಹೋದಾಕ್ಷಣ ಅವರು ಮಗಳನ್ನು ಹುಡುಕಲಿಲ್ಲ.. ಬದಲಾಗಿ ಚಪ್ಪಲಿ ತೆಗೆದು ಅಲ್ಲಿಯೇ ಇದ್ದ ದೇವರ ಮೂರ್ತಿಯ ಬಳಿ ಹೋಗಿ ನಮಸ್ಕಾರ ಮಾಡಿ ನಂತರ ಬೆಡ್ ರೂಂ ಏರಿಯಾಗೆ ತೆರಳಿದ್ದಾರೆ..

ಯಾರೋ ಹೆಂಗಸು ಮಧ್ಯರಾತ್ರೀಲಿ ಸೀರೆಯುಟ್ಟು ಓಡಾಡಿದ್ದನ್ನು ನೋಡಿದ ವಾಸುಕಿ ಹೆದರಿ ಕಿರುಚಿಕೊಂಡರು.. ಆ ತಕ್ಷಣ ಮನೆಯ ಎಲ್ಲಾ ಸದಸ್ಯರೂ ಎಚ್ಚರವಾದರು.. ಬಿಗ್ ಮನೆಯ ಲೈಟ್ ಗಳು ಆನ್ ಆದವು..

ಮನೆಗೆ ಬಂದ ಪ್ರಿಯಾಂಕ ಅವರ ತಾಯಿ ಮನೆಯ ಸದಸ್ಯರಿಗಾಗಿ ಕೊಬ್ಬರಿ ಮಿಟಾಯಿ ತಂದು ಮಗಳಿಗೆ ಕೊಡದೆ ವಾಸುಕಿ ಕೈಗೆ ಕೊಟ್ಟರು.. ದೀಪಿಕಾ ಅವರ ತಾಯಿ ಬಂದು ಹೋದಾಗ ಆದ ಟ್ರೋಲ್ ಗಳನ್ನು ನೋಡಿ ಎಲ್ಲರೂ ಬುದ್ದಿ ಕಲಿತಿರುವಂತೆ ಕಾಣುತ್ತಿದೆ..

ಜೊತೆಗೆ ಪ್ರಿಯಾಂಕ ಅವರ ತಾಯಿ, ನನ್ನ ಮಗಳನ್ನು ನೋಡಿದ್ದಕ್ಕಿಂತ ನಿಮ್ಮೆಲ್ಲರನ್ನು ನೋಡಿದ್ದು ಬಹಳ ಸಂತೋಷ ಆಯಿತು ಎಂದು ಎಲ್ಲರ ಜೊತೆಯೂ ಆತ್ಮೀಯವಾಗಿ ಮಾತನಾಡಿಸಿದರು.. ಅಷ್ಟೇ ಅಲ್ಲದೆ ಪ್ರಿಯಾಂಕ ಅವರ ತಂದೆ ತೀರಿ ಹೋಗಿ ನಾಲ್ಕು ತಿಂಗಳಾಗಿವೆಯಷ್ಟೇ..

ಅದೇ ಕಾರಣಕ್ಕೆ ಕುರಿ ಪ್ರತಾಪ್ ಅವರ ಬಳಿ ಬಂದು… ನೀವು ಇರುವ ಕಾರಣದಿಂದಲೇ ಪ್ರಿಯಾಂಕ ತನ್ನ ನೋವನ್ನು ಮರೆಯುತ್ತಿದ್ದಾಳೆ ಎಂದು ದೊಡ್ಡವರಾದರೂ ಕೂಡ ಪ್ರತಾಪ್ ಅವರಿಗೆ ಕೈಮುಗಿದು ಧನ್ಯವಾದಗಳನ್ನ ತಿಳಿಸಿ ದೊಡ್ಡತನ ಮೆರೆದರು..

ನಂತರ ಭೂಮಿ ಶೆಟ್ಟಿ ಜೊತೆ ಜಗಳ ಆಡಬೇಡ… ಯಾರ ಜೊತೆಯೂ ಕೋಪ ಮಾಡಿಕೊಳ್ಳಬೇಡ ಎಂದು ಮಗಳಿಗೆ ಬುದ್ದಿ ಹೇಳಿದರು.. ಅಷ್ಟೇ ಅಲ್ಲದೆ ಮಗಳು ಸುಮಾರಾಗಿ ಆಟ ಆಡುತ್ತಿರುವುದನ್ನು ನೇರವಾಗಿ ಹೇಳಿದ ಪ್ರಿಯಾಂಕ ಅವರ ತಾಯಿ ಇನ್ನೂ ಚೆನ್ನಾಗಿ ಆಟ ಆಡ್ಬೇಕು‌.. ಯಾರು ಗೆದ್ದರೂ ಎಲ್ಲರೂ ಮಕ್ಕಳೇ..

ಇಂತಹ ಅವಕಾಶ ಜೀವನದಲ್ಲಿ ಮತ್ತೆ ಯಾವತ್ತೂ ಸಿಗೋದಿಲ್ಲ.. ನಿನ್ನ ಅದೃಷ್ಟ ಸಿಕ್ಕಿದೆ.. ಖುಷಿಖುಷಿಯಾಗಿ ಆಟ ಆಡಿಕೊಂಡು ಬಾ ಎಂದು ಹರಸಿ ಹೋದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ನಿನ್ನೆ ಶೈನ್ ಶೆಟ್ಟಿ ಮೋಸ ಮಾಡಿ ವಾಸುಕಿಯನ್ನು ಗೆಲ್ಲಿಸಿದ್ರಾ? ಇಲ್ಲಿದೆ ನೋಡಿ..

Wed Jan 15 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರ 14ವಾರದಲ್ಲಿ ಯುದ್ಧಾಕಾಂಡ ಟಾಸ್ಕ್ ನಡೆಯುತ್ತಿದ್ದು, ಮನೆಯ ಸದಸ್ಯರು ಎರಡು ತಂಡಗಳಾಗಿದ್ದಾರೆ.‌ ಒಂದು ಕಡೆ ಹರೀಶ್ ರಾಜ್ ಕುರಿ ಪ್ರತಾಪ್ ಭೂಮಿ ಶೆಟ್ಟಿ ಚಂದನ್ ಆಚಾರ್ ಒಂದು ತಂಡವಾದರೆ.. ಇತ್ತ ವಾಸುಕಿ ಕಿಶನ್ ದೀಪಿಕಾ ಹಾಗೂ ಪ್ರಿಯಾಂಕ ಮತ್ತೊಂದು ತಂಡವಾಗಿದೆ.. ಮನೆಯಲ್ಲಿ ತಂಡಗಳಾಗಿವೆ ಎಂದರೆ ಅಲ್ಲಿ‌ ಜಗಳ ಕಿತ್ತಾಟ ಇದ್ದದ್ದೇ.. ಅದೇ ರೀತಿ ನಿನ್ನೆ ನಡೆದ ಮಡಕೆ ಹೊಡೆಯುವ ಟಾಸ್ಕ್ ನಲ್ಲಿಯೂ ನಡೆದದ್ದು ಅದೇ.. ವಾಸುಕಿ ಹಾಗೂ ಕುರಿ ಪ್ರತಾಪ್ ಇಬ್ಬರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links