ಬಿಗ್ ಬಾಸ್ ಮನೆಗೆ ಇಂದು ಮತ್ತೊಬ್ಬ ಸದಸ್ಯರ ಫ್ಯಾಮಿಲಿ‌ ಎಂಟ್ರಿ.. ಯಾರು ಗೊತ್ತಾ? ಇಡೀ ಮನೆ ಭಾವುಕವಾಯ್ತು..

Source Credit RJ News Kannada

ಬಿಗ್ ಬಾಸ್ ಈ ಸೀಸನ್ ನಲ್ಲಿ ಕಳೆದ ಸೀಸನ್ ಗಳಿಗಿಂತ ಕೊಂಚ ಬದಲಾವಣೆ ತರಲಾಗಿದೆ.. ಹೌದು ಮೊದಲೆಲ್ಲಾ ಸ್ಪರ್ಧಿಗಳ ಫ್ಯಾಮಿಲಿ ಮೆಂಬರ್ಸ್ ಫಿನಾಲೆ ಒಂದೆರೆಡು ವಾರ ಇದ್ದಾಗ ಒಟ್ಟಿಗೆ ಒಂದೇ ವಾರದಲ್ಲಿ ಎಲ್ಲರೂ ಆಗಮಿಸುತ್ತಿದ್ದರು..

ಆದರೆ ಈ ಬಾರಿ ಕಳೆದ 5 ವಾರಗಳಿಂದಲೂ ವಾರಕ್ಕೊಬ್ಬ ಮನೆಯ ಸದಸ್ಯರ ಫ್ಯಾಮಿಲಿ ಅನ್ನು ಬಿಗ್ ಮನೆಯೊಳಗೆ ಕಳುಹಿಸಲಾಗುತಿತ್ತು.. ಕಳೆದ ವಾರ ಚಂದನ ತಾಯಿ, ದೀಪಿಕಾ ತಾಯಿ..‌ ಚಂದನ್ ಆಚಾರ್ ತಾಯಿ ಬಿಗ್ ಮನೆಗೆ ಬಂದಿದ್ದರು.. ಅದರಲ್ಲೂ ದೀಪಿಕಾ ತಾಯಿ ಬಂದದ್ದು.. ಶೈನ್ ಜೊತೆ ನಡೆದುಕೊಂಡ ರೀತಿ ಹೊರಗೆ ಸಾಕಷ್ಟು ಸುದ್ದಿ‌ ಜೊತೆಗೆ ಟ್ರೋಲ್ ಕೂಡ ಆಗಿತ್ತು..

ಇದೀಗ 13ನೇ ವಾರದ ಬಿಗ್ ಬಾಸ್ ಜರ್ನಿಯಲ್ಲಿ ಬಿಗ್ ಮನೆಯ ಮತ್ತೊಬ್ಬ ಸದಸ್ಯನ ಫ್ಯಾಮಿಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ.. ಹೌದು ಹರೀಶ್ ರಾಜ್ ಅವರ ಹೆಂಡತಿ ಹಾಗೂ ಮಗಳು ಬಿಗ್ ಮನೆಗೆ ಬಂದಿದ್ದಾರೆ. ಅದರಲ್ಲೂ ಮಗಳನ್ನು ತುಂಬಾ ಮಿಸ್ ಮಾಡ್ಕೊತಾ ಇದೀನಿ‌ ಎಂದು ಹರೀಶ್ ರಾಜ್ ಹೇಳುತ್ತಿದ್ದ ಸಮಯದಲ್ಲಿ ಸಡನ್ ಆಗಿ ಬಿಗ್ ಮನೆಯ ಮುಖ್ಯ ಗೇಟ್ ಮೂಲಕ ಹರೀಶ್ ರಾಜ್ ಅವರ ಮಡದಿ ಹಾಗೂ ಮಗಳ ಸರ್ಪ್ರೈಸ್ ಎಂಟ್ರಿ ಆಗಿದೆ..

ಹೆಂಡತಿ ಮಗಳ ನೋಡಿ ಹರೀಶ್ ರಾಜ್ ಅಕ್ಷರಶಃ ಮಗುವಿನಂತಾಗಿ ಬಿಕ್ಕಿ ಬಿಕ್ಕಿ ಅತ್ತರು..‌ ಮುದ್ದು ಕಂದ ಅಳುವುದನ್ನು ನೋಡಿ ಇಡೀ ಮನೆಯೇ ಭಾವುಕವಾಯಿತು.. ಇನ್ನು ಹರೀಶ್ ರಾಜ್ ಅವರ ಪತ್ನಿ ಕೂಡ ಕಣ್ಣೀರಿಟ್ಟರು..‌ ಗಂಡ ಹೆಂಡತಿ ಬಾಂಧವ್ಯ ನೋಡಿ ಮನೆಯಲ್ಲಿನ ಎಲ್ಲರೂ ಸಂತೋಷಪಟ್ಟರು..

ಇನ್ನೂ ಫ್ಯಾಮಿಲಿ ನೋಡದ ಮನೆಯ ಸದಸ್ಯರು ತಮ್ಮ ತಮ್ಮ ಮನೆಯವರನ್ನು ನೆನೆದು ಯಾವಾಗ ಬರುವರೋ ಎಂದು ಭಾವುಕರಾಗಿ ಗೇಟ್ ಕಡೆ ನೋಡಿದರೆ.. ಈಗಾಗಲೇ ಬಂದು ಹೋದವರು ತಮ್ಮ ಮನೆಯವರನ್ನು ನೆನೆದು ಸುಮ್ಮನಾದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಗೆಲ್ಲೋ ಟೈಮಲ್ಲಿ ಶೈನ್ ಮಾಡಿಕೊಂಡ ಯಡವಟ್ಟು.. ಯಾಕ್ ಬೇಕಿತ್ತು ಗುರು..

Tue Jan 7 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ಫಿನಾಲೆಗೆ ಕೆಲವೇ ವಾರಗಳು ಬಾಕಿ ಇವೆ.. ಬಿಗ್ ಬಾಸ್ ವೀಕ್ಷಕರ ಪ್ರಕಾರ ಈ ಸೀಸನ್ ನನ್ನು ಶೈನ್ ಶೆಟ್ಟಿ ಅವರೇ ಗೆಲ್ಲುತ್ತಾರೆ ಎಂದು ಬಹುತೇಕರ ಅಭಿಪ್ರಾಯವೂ ಆಗಿದೆ.. Pin it Email https://nirantharanews.com/%e0%b2%ac%e0%b2%bf%e0%b2%97%e0%b3%8d-%e0%b2%ac%e0%b2%be%e0%b2%b8%e0%b3%8d-%e0%b2%ae%e0%b2%a8%e0%b3%86%e0%b2%97%e0%b3%86-%e0%b2%87%e0%b2%82%e0%b2%a6%e0%b3%81-%e0%b2%ae%e0%b2%a4%e0%b3%8d%e0%b2%a4/#UGhvdG9HcmlkXzE ವಾಸುಕಿ ಕುರಿ ಪ್ರತಾಪ್ ಶೈನ್ ಶೆಟ್ಟಿ ದೀಪಿಕಾ ದಾಸ್ ಚಂದನ್ ಆಚಾರ್ ಈ ಸೀಸನ್ ನ ಫಿನಾಲೆ ಸ್ಪರ್ಧಿಗಳು ಎನ್ನಲಾಗುತ್ತಿದೆ.. ಅದರಲ್ಲೂ ಶೈನ್ ಶೆಟ್ಟಿ ಅವರಿಗೆ ವೀಕ್ಷಕರ ವೋಟಿಂಗ್ ಸಪೋರ್ಟ್ ಹೆಚ್ಚಾಗಿಯೇ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links