ಬಾಲ್ಯದ ಕಷ್ಟದ ದಿನಗಳನ್ನು ನೆನೆದ ದಾವಣಗೆರೆ ಜಿಲ್ಲಾಧಿಕಾರಿ

Source Credit Oneindia.com

Davanagere

oi-Puttappa Koli

|

ದಾವಣಗೆರೆ, ಜನವರಿ 09: ಬಾಲ್ಯದಲ್ಲಿ ತಾನು ಅನುಭವಿಸಿದ ಬಡತನ ಹಾಗೂ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.

ಕೋಟಿ ಸಿಕ್ಕಿದ್ದೇ ತಡ ವಿಂಡೀಸ್ ಬ್ಯಾಟ್ಸ್ ಮೆನ್ ಫುಲ್ ಸ್ಟೆಪ್.

ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ನನ್ನ ತಂದೆ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ, ನಮಗೆ ಕಿತ್ತು ತಿನ್ನುವ ಬಡತನ. ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿದರು.

ಕೊನೆಗೆ ನನ್ನ ತಾಯಿ 25 ರುಪಾಯಿ ವಿಧವಾ ವೇತನ ಪಡೆಯಲು ನೂರು ರುಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ಸಿಗುವಂತಾಯಿತು ಎಂದರು.

ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿದೆ. ಆಗಿನಿಂದಲೇ ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ ಎಂದುನ ಅನುಭವ ಹಂಚಿಕೊಂಡರು.

ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ “ಪಿಂಚಣಿ ಅದಾಲತ್ ಕಾರ್ಯಕ್ರಮ”ವನ್ನು ಜಾರಿಗೆ ತಂದಿದ್ದೇನೆ ಎಂದರು.

ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆ ಬಾಗಿಲಿಗೆ ಬರಬೇಕು ಎಂಬುದು. ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದಾಗಿದೆ.

ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂ ತಪ್ಪದೆ ನಿರ್ವಹಿಸಬೇಕೆಂದು ಸೂಚಿಸಿದ್ದೇನೆಂದು ದಾವಣಗೆರೆ ಜಿಲ್ಲಾಧಿಕಾರಿ ಶ್ರೀ ಮಹಾಂತೇಶ ಬೀಳಗಿ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹಗ್ಗ ಜಗ್ಗಾಟದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ; ಸಿದ್ದರಾಮಯ್ಯ ಎಂಟ್ರಿ

Fri Jan 10 , 2020
Source Credit Oneindia.com Pin it Email https://nirantharanews.com/%e0%b2%ac%e0%b2%be%e0%b2%b2%e0%b3%8d%e0%b2%af%e0%b2%a6-%e0%b2%95%e0%b2%b7%e0%b3%8d%e0%b2%9f%e0%b2%a6-%e0%b2%a6%e0%b2%bf%e0%b2%a8%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%a8/#Wg== Chikkamagaluru oi-Chetan BP By ಚಿಕ್ಕಮಗಳೂರು ಪ್ರತಿನಿಧಿ | Published: Thursday, January 9, 2020, 11:09 [IST] ಚಿಕ್ಕಮಗಳೂರು, ಜನವರಿ 9: ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಒಂದು ದಿನ ಮಾತ್ರ ಉಳಿದಿದೆ. ಆದರೆ ನಾಳೆ ಶೃಂಗೇರಿಯಲ್ಲಿ ನಡೆಯಲಿರುವ ಈ ಸಾಹಿತ್ಯ ಹಬ್ಬ ಆರಂಭಕ್ಕೂ ಮುನ್ನವೇ ಗೊಂದಲದಲ್ಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದು ಹಲವು ವಿರೋಧಗಳನ್ನು ಹುಟ್ಟುಹಾಕಿದೆ. ಜಿಲ್ಲಾ ಉಸ್ತುವಾರಿ ಸಚಿವ, ಪ್ರವಾಸೋದ್ಯಮ, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links