ಬಾದಾಮಿ: ಆಸ್ಟ್ರೇಲಿಯಾ ಪ್ರವಾಸಿ ಮೇಲೆ ಸ್ಥಳೀಯರಿಂದ ಹಲ್ಲೆ

Source Credit Oneindia.com

Bagalkot

oi-Amith

|

ಬಾಗಲಕೋಟೆ, ನವೆಂಬರ್ 19: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ಆಸ್ಟ್ರೇಲಿಯಾದ ಪ್ರವಾಸಿಗ ವಿಲಿಯಮ್ಸ್ ಕೆರಿಯನ್ ಜೇಮ್ಸ್ ಎಂಬುವವರ ಮೇಲೆ ಸೋಮವಾರ ರಾತ್ರಿ ತೀವ್ರ ಹಲ್ಲೆ ಮಾಡಲಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಲಿಯಮ್ಸ್ (35) ಅವರ ಕೈ,ಕಾಲುಗಳನ್ನು ಕಟ್ಟಿ ಹಲ್ಲೆ ನಡೆಸಲಾಗಿದೆ. ಆಸ್ಪತ್ರೆಗೆ ಕರೆತಂದಾಗಲೂ ಅವರು ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿಯೇ ಇದ್ದರು. ಹಲ್ಲೆಯಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಆದರೆ ಹಲ್ಲೆ ನಡೆಸಿದ್ದು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಗೊತ್ತಾಗಿಲ್ಲ.

ವಿಲಿಯಮ್ಸ್ ಆಸ್ಟ್ರೇಲಿಯಾದ ಮೆಲ್ಬರ್ನ್ ನಿವಾಸಿಯಾಗಿದ್ದಾರೆ. ಅವರು ಬಾದಾಮಿಯಲ್ಲಿನ ಪುರಾತನ ಸ್ಮಾರಕಗಳನ್ನು ವೀಕ್ಷಿಸಲು ಬಂದಿದ್ದಾರೆ. ಸೋಮವಾರ ರಾತ್ರಿ ಬಾದಾಮಿಯಿಂದ 15 ಕಿ.ಮೀ. ದೂರದಲ್ಲಿರುವ ಕೊಂಕಣಕೊಪ್ಪ ಗ್ರಾಮಕ್ಕೆ ನಡೆದುಕೊಂಡೇ ಹೋಗಿದ್ದರು. ಗ್ರಾಮದ ಕೆಲವೆಡೆ ಅವರು ಓಡಾಡುತ್ತಿದ್ದಾಗ ಅನುಮಾನಗೊಂಡ ಸ್ಥಳೀಯರು ವಿಚಾರಿಸಿದ್ದಾರೆ. ಆದರೆ ಭಾಷೆಯ ತೊಡಕಿನಿಂದ ವಿಲಿಯಮ್ಸ್ ಅವರ ಕುರಿತು ಜನರು ತಪ್ಪಾಗಿ ಗ್ರಹಿಸಿಕೊಂಡು ಹಲ್ಲೆ ನಡೆಸಿರಬಹುದು.

ಮದ್ಯಪಾನ ಮಾಡಿದ್ದ ಅವರು ಅದರ ಅಮಲಿನಲ್ಲಿ ಅಲ್ಲಿನ ಮನೆಗಳಿಗೆ ತೆರಳಿ ಜನರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಜನರು ಸಿಟ್ಟಿಗೆದ್ದು ಹಲ್ಲೆ ಮಾಡಿರಬಹುದು ಎನ್ನಲಾಗಿದೆ. ವಿಲಿಯಮ್ಸ್ ಅವರು ಮಕ್ಕಳ ಕಳ್ಳ ಇರಬಹುದು ಎಂಬ ಅನುಮಾನದಲ್ಲಿ ಸ್ಥಳೀಯರು ಹಲ್ಲೆ ನಡೆಸಿರುವ ಸಾಧ್ಯತೆ ಕೂಡ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರಿಗೆ ಬಾದಾಮಿಯ ಯಾವುದೇ ಹೋಟೆಲ್‌ನಲ್ಲಿ ವಿಲಿಯಮ್ಸ್ ಎಂಬ ಹೆಸರಿನ ವಿದೇಶಿಯರು ವಾಸ್ತವ್ಯ ಹೂಡಿರದಿರುವುದು ಕಂಡುಬಂದಿದೆ. ಹೀಗಾಗಿ ಬಾಗಲಕೋಟೆಯ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ವಿಲಿಯಮ್ಸ್ ಅವರಿಗೆ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ನಾಮಪತ್ರ ಸಲ್ಲಿಕೆ ಮುಕ್ತಾಯ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ

Tue Nov 19 , 2019
Source Credit Oneindia.com Pin it Email https://nirantharanews.com/%e0%b2%ac%e0%b2%be%e0%b2%a6%e0%b2%be%e0%b2%ae%e0%b2%bf-%e0%b2%86%e0%b2%b8%e0%b3%8d%e0%b2%9f%e0%b3%8d%e0%b2%b0%e0%b3%87%e0%b2%b2%e0%b2%bf%e0%b2%af%e0%b2%be-%e0%b2%aa%e0%b3%8d%e0%b2%b0%e0%b2%b5/#Y2FuaWRhdGVsaXN ಬೆಂಗಳೂರು ನಗರ ಭಾಗ * ಯಶವಂತಪುರ ಕ್ಷೇತ್ರ ಎಸ್‌ಟಿ ಸೋಮಶೇಖರ್ (ಬಿಜೆಪಿ), ಪಿ. ನಾಗರಾಜ್ (ಕಾಂಗ್ರೆಸ್), ಜವರಾಯಿಗೌಡ (ಜೆಡಿಎಸ್) * ಕೆಆರ್ ಪುರ ಬೈರತಿ ಬಸವರಾಜ್ (ಬಿಜೆಪಿ), ನಾರಾಯಣಸ್ವಾಮಿ (ಕಾಂಗ್ರೆಸ್), ಕೃಷ್ಣಮೂರ್ತಿ (ಜೆಡಿಎಸ್) * ಮಹಾಲಕ್ಷ್ಮಿ ಲೇಔಟ್ ಕೆ. ಗೋಪಾಲಯ್ಯ (ಬಿಜೆಪಿ), ಎಂ. ಶಿವರಾಮು (ಕಾಂಗ್ರೆಸ್), ಡಾ. ಗಿರೀಶ್ ನಾಶಿ (ಜೆಡಿಎಸ್) * ಶಿವಾಜಿನಗರ ಶರವಣ (ಬಿಜೆಪಿ), ರಿಜ್ವಾನ್ ಅರ್ಷದ್ (ಕಾಂಗ್ರೆಸ್), ತನ್ವೀರ್ ಅಹ್ಮದ್ (ಜೆಡಿಎಸ್) Pin it Email https://nirantharanews.com/%e0%b2%ac%e0%b2%be%e0%b2%a6%e0%b2%be%e0%b2%ae%e0%b2%bf-%e0%b2%86%e0%b2%b8%e0%b3%8d%e0%b2%9f%e0%b3%8d%e0%b2%b0%e0%b3%87%e0%b2%b2%e0%b2%bf%e0%b2%af%e0%b2%be-%e0%b2%aa%e0%b3%8d%e0%b2%b0%e0%b2%b5/#Y2FuaWRhdGVsaXN ಎಂಟಿಬಿ, ವಿಶ್ವನಾಥ್, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links