ಬಸ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಆಸ್ಪತ್ರೆಗೆ ದಾಖಲು

Source Credit TheMangaloreMirror.in

ಬಸ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಆಸ್ಪತ್ರೆಗೆ ದಾಖಲು

ಉಡುಪಿ ಜನವರಿ 9: ಖಾಸಗಿ ಬಸ್ಸಿನಲ್ಲಿ ವಿಷ ಕುಡಿದು ದಂಪತಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಜ್ ಕುಮಾರ್ ಹಾಗೂ ಪತ್ನಿ ಸಂಗೀತಾ ಗಂಭೀರವಾದವರು. ವಿಷಪ್ರಾಶನದಿಂದ ಗಂಭೀರ ಸ್ಥಿತಿಯಲ್ಲಿದ್ದ ದಂಪತಿಗಳನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಒಂದೂವರೆ ವರ್ಷದ ಮಗನ ಜೊತೆ ಕೊಲ್ಲೂರಿಗೆ ಬಂದಿದ್ದ ದಂಪತಿಗಳು ಪೂಜೆ ಮುಗಿಸಿ ವಾಪಸ್ ಬರುವಾಗ ಬಸ್ಸಿನಲ್ಲೇ ವಿಷಸೇವನೆ ಮಾಡಿದ್ದಾರೆ. ಈ ಘಟನೆಯಿಂದ ಬಾಲಕ ಒಂಟಿಯಾಗಿದ್ದು ಬಾಲಕನ ನೆರವಿಗೆ ಸಹ ಪ್ರಯಾಣಿಕರು ಧಾವಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅಲ್ರಯ್ಯ ಟೀಚರ್ ನೋಡಿ ಯಾರಯ್ಯಾ ಹಿಂಗ್ ಮಾಡ್ತಾರೆ?

Thu Jan 9 , 2020
Source Credit RJ News Kannada ಈ ವಾರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಶಾಲೆ ಟಾಸ್ಕ್ ನಡೆಯುತ್ತಿದ್ದು ಒಂದನೇ ಕ್ಲಾಸಿನಿಂದ ಶುರುವಾದ ಚಟುವಟಿಕೆ ಇಂದು ಹತ್ತನೇ ಕ್ಲಾಸಿಗೆ ಬಂದು ನಿಂತಿದೆ.. ಪ್ರತಿ ಹಂತದಲ್ಲೂ ಮನೆಯ ಒಬ್ಬೊಬ್ಬ ಸದಸ್ಯರು ಶಾಲೆಗೆ ಟೀಚರ್ ಆಗಿ ಬರುತ್ತಿದ್ದಾರೆ.. Pin it Email https://nirantharanews.com/%e0%b2%ac%e0%b2%b8%e0%b3%8d-%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%b5%e0%b2%bf%e0%b2%b7-%e0%b2%b8%e0%b3%87%e0%b2%b5%e0%b2%bf%e0%b2%b8%e0%b2%bf-%e0%b2%86%e0%b2%a4%e0%b3%8d%e0%b2%ae/#UGhvdG9HcmlkXzE ಅದರಂತೆ ಇಂದು ದೀಪಿಕಾ ಅವರು ಟೀಚರ್ ಆಗಿ ಮನೆಗೆ ಎಂಟ್ರಿ‌ ಕೊಟ್ಟದ್ದೇ ಕೊಟ್ಟದ್ದು ಅದ್ಯಾಕೋ ನಮ್ ಗಂಡ್ ಹೈಕ್ಳು ಕುಂತಲ್ಲಿ ಕೂರಲಿಲ್ಲ.. ನಿಂತಲ್ಲಿ‌ ನಿಲ್ಲಲಿಲ್ಲ.. ಆದರೆ ಇದು ವಾಸ್ತವಕ್ಕೆ ಅದೆಷ್ಟು ಹತ್ತಿರವಾಗಿತ್ತು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links