ಬಂಡೀಪುರದಲ್ಲಿ ವಿಫಲವಾಯ್ತು ಫಾಕ್ಸ್ ಲೈಟ್ ತಂತ್ರಜ್ಞಾನ

Source Credit Oneindia.com

Chamarajanagar

lekhaka-Lavakumar b m

|

ಚಾಮರಾಜನಗರ, ಜನವರಿ 01: ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ತೆರಳುವ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳನ್ನು ತಡೆಯುವ ಸಲುವಾಗಿ ಪ್ರಯೋಗಾತ್ಮಕವಾಗಿ ಅಳವಡಿಸಿದ್ದ ಆಸ್ಟ್ರೇಲಿಯಾದ ತಂತ್ರಜ್ಞಾನ ಫಾಕ್ಸ್ ಲೈಟ್ ವಿಫಲಗೊಂಡಿದೆ.

ಈ ಹಿಂದೆ ಬಂಡೀಪುರ ಅಭಯಾರಣ್ಯ ಗೋಪಾಲಸ್ವಾಮಿ ಬೆಟ್ಟ ವಲಯದ ಆಂಜನೇಯ ದೇವಸ್ಥಾನ ಹಾಗೂ ಹುಂಡೀಪುರ ಹತ್ತಿರ ಫಾಕ್ಸ್ ಲೈಟ್ ಅಳವಡಿಸಲಾಗಿತ್ತು. ಈ ಫಾಕ್ಸ್ ಲೈಟ್ ಹೊರಸೂಸುವ ಬೆಳಕಿನಿಂದ ಕಾಡು ಪ್ರಾಣಿಗಳು ಹೆದರಿ ಹೊರಹೋಗುತ್ತವೆ ಎಂಬ ಉದ್ದೇಶದಿಂದ ಆಸ್ಟ್ರೇಲಿಯಾ ಫಾಕ್ಸ್ ಲೈಟ್ ಕಂಪನಿಯ ಸಿಇಓ ಐಯಾನ್ ಬಂಡೀಪುರಕ್ಕೆ ಖುದ್ದು ಭೇಟಿ ನೀಡಿ ದೀಪಗಳನ್ನು ಗೋಪಾಲಸ್ವಾಮಿಬೆಟ್ಟ ವಲಯ ಕಾರೆಮರಹಳ್ಳ ಹಾಗೂ ಕರಡಿಕಲ್ಲು ಗುಡ್ಡದಲ್ಲಿ ಫಾಕ್ಸ್ ಲೈಟ್ ಅಳವಡಿಸಿದ್ದರು.

ಆದರೆ ಈ ಫಾಕ್ಸ್ ಲೈಟ್ ಗಳನ್ನು ಕಾಡಾನೆಗಳು ಕಾಲಿನಿಂದ ತುಳಿದು ನಾಶ ಮಾಡಿದ್ದು, ಯಾವುದೇ ಭಯವಿಲ್ಲದೆ ಹೊರಬರುತ್ತಿವೆ. ಜತೆಗೆ ಬೆಳಕಿನ ಪ್ರಖರತೆಯನ್ನು ಗಮನಿಸಿ ಲೈಟ್ ಗಳನ್ನು ಕಿತ್ತು ಹಾಕುತ್ತಿವೆ ಎನ್ನಲಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಈ ಪ್ರಯೋಗವನ್ನು ಕೈ ಬಿಟ್ಟಿದೆ.

“ಗೋಪಾಲಸ್ವಾಮಿ ವಲಯ ವ್ಯಾಪ್ತಿಯಲ್ಲಿ ಆರು ಕಡೆ ಫಾಕ್ಸ್ ಲೈಟ್ ಅಳವಡಿಸಲಾಯಿತು. ಆನೆಗಳು ದಾಳಿ ಮಾಡಿ ನಾಶ ಮಾಡಿವೆ. ಇದು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿದೆ” ಎಂದು ಗೋಪಾಲಸ್ವಾಮಿ ಬೆಟ್ಟ ವಲಯ್ಯಾಣಧಿಕಾರಿ ನವೀನ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ಇಲಾಖೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಬಂಡೀಪುರ ಅರಣ್ಯದಂಚಿನಲ್ಲಿ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ತಡೆ ಬಿದ್ದಿರಲಿಲ್ಲ. ಹೀಗಾಗಿ ಫಾಕ್ಸ್ ಲೈಟ್ ನ ವಿನೂತನ ಪ್ರಯೋಗಕ್ಕೆ ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೂ ಕಾಡಾನೆಗಳು ಜಗ್ಗಲಿಲ್ಲ. ಫ್ಯಾಕ್ಸ್ ಲೈಟ್ ರಾತ್ರಿ ಸಮಯದಲ್ಲಿ ಕೆಂಪು, ನೀಲಿ, ಬಿಳಿ ಬಣ್ಣದ ಬೆಳಕನ್ನು ಹೊರಚೆಲ್ಲುವುದರಿಂದ ಕಾಡಾನೆ ಸೇರಿದಂತೆ ಇತರೆ ವನ್ಯ ಪ್ರಾಣಿಗಳು ಬೆದರಿ ಕಾಡಿನ ಅಂಚಿಗೆ ಬರಲು ಹಿಂದೇಟು ಹಾಕುವುದಲ್ಲದೆ, ಕಾಡಿನೊಳಕ್ಕೆ ಹೋಗುತ್ತವೆ ಎಂಬ ಕಾರಣಕ್ಕೆ ಅಳವಡಿಸಲಾಗಿತ್ತು. ಆದರೆ ಜನರಲ್ಲಿ ಭರವಸೆ ತಂದಿದ್ದ ಆಸ್ಟ್ರೇಲಿಯಾ ತಂತ್ರಜ್ಞಾನ ವಿಫಲಗೊಂಡಂತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ದೀಪಿಕಾ ವಿಷಯದಲ್ಲಿ ಭಯಗೊಂಡರ ತಾಯಿ? ಆ ಒಂದು ಮಾತು ಸಹಿಸಲಾಗುತ್ತಿಲ್ಲ..‌

Thu Jan 2 , 2020
Source Credit RJ News Kannada ಬಿಗ್ ಬಾಸ್ ಮನೆಗೆ ಮಗಳನ್ನು‌ ನೋಡಲು ಬಂದ ದೀಪಿಕಾ ಅವರ ತಾಯಿ ಶೈನ್ ಬಗ್ಗೆ ಕೊಂಚ ಅಸಮಾಧಾನ ಇದ್ದಂತೆ ನಡೆದುಕೊಂಡಿದ್ದು ಇದೀಗ ಎಲ್ಲೆಡೆ ಚರ್ಚೆಗೆ ಗುರಿಯಾಗಿದೆ.. ಅದರಲ್ಲೂ ಮನೆಗೆ ಬಂದಾಗ ಕೈಲಿದ್ದ ಬಾಕ್ಸ್ ಪಡೆಯಲು ಮುಂದಾದ ಶೈನ್ ಅನ್ನು ದೂರ ಕಳುಹಿಸಿದ್ದು ಸ್ವಲ್ಪವೂ ಸರಿ‌ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.. ಮನೆಯೊಳಗೆ ಇದ್ದ ದೊಡ್ಡ ದೊಡ್ಡ ನಟರು.. ರವಿ ಬೆಳೆಗೆರೆ ಅವರು ಜೈಜಗದೀಶ್ ಅವರು ರಾಜು ತಾಳಿಕೋಟೆ ಅವರು ಮನೆಯಿಂದ ಹೊರ ಬಂದಾಗ ದೀಪಿಕಾ ಬಗ್ಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links