ಬಂಜೆತನಕ್ಕೆ ಕಾರಣವಾದ ಪಿಸಿಒಎಸ್ ಹೋಗಲಾಡಿಸಲು ಸಸ್ಯಾಹಾರಿ ಆಹಾರಕ್ರಮ ಹೀಗಿರಲಿ

Source Credit Kannada.boldsky.com

ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರಮ್) ಎಂದರೇನು?

ಪಿಸಿಒಎಸ್‌ ಸಮಸ್ಯೆ ಇರುವವರಲ್ಲಿ ಈಸ್ಟ್ರೋಜಿನ್ ಹಾಗೂ ಪ್ರೊಗೆಸ್ಟಿರೋನೆ ಪ್ರಮಾಣ ಕಡಿಮೆಯಾಗಿ ಆಂಡ್ರೋಜಿನ್ ಪ್ರಮಾಣ ಅಧಿಕವಿರುತ್ತದೆ, ದೇಹದಲ್ಲಿ ಪುರುಷ ಹಾರ್ಮೋನ್ ಅಧಿಕವಾಗುವುದರಿಂದ ಅನಿಯಮಿತ ಮುಟ್ಟಿನ ಉಂಟಾಗುವುದು. ಇದರ ಪರಿಣಾಮ ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಾಗಿ ಮಧುಮೇಹ ಕೂಡ ಬರಬಹುದು.

ಯಾರಿಗೆ ನಿಯಮಿತವಾದ ಋತುಚಕ್ರ ಇರುತ್ತದೆ ಅವರಿಗೆ ಮುಟ್ಟಾದ 10-14 ದಿನದೊಳಗೆ ಅಂಡಾಣು ಬಿಡುಗಡೆಯಾಗುತ್ತದೆ. ಇದನ್ನು ಓವ್ಯೂಲೇಶನ್ ಪಿರಿಯಡ್(ಅಂಡೋತ್ಪತ್ತಿ ಅವಧಿ) ಅಂತಾರೆ.

ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದೇ?

ಪಿಸಿಓಎಸ್‌ ಸಮಸ್ಯೆಯನ್ನು ಆರೋಗ್ಯಕರ ಡಯಟ್‌ ಹಾಗೂ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಇಲ್ಲವಾಗಿಸಬಹುದು. ಇನ್ನು ಪಿಸಿಒಎಸ್‌ ಸಮಸ್ಯೆ ಇರುವವರು ಚಿಕಿತ್ಸೆಯ ಮೊರೆ ಹೋಗಿ ಕೂಡ ಈ ಸಮಸ್ಯೆಯಿಂದ ಹೊರಬರಬಹುದು. ಚಿಕಿತ್ಸೆಯಲ್ಲಿ ದೇಹದಲ್ಲಿ ಪುರುಷ ಹಾರ್ಮೊನ್ ಟೆಸ್ಟೊಸ್ಟಿರೊನ್ ಉತ್ಪತ್ತಿಯನ್ನು ಕಡಿಮೆ ಮಾಡಿ ಈಸ್ಟ್ರೋಜಿನ್ ಹೆಚ್ಚು ಉತ್ಪತ್ತಿಯಾಗುವಂತೆ ಮಾಡುವುದು.

ಇನ್ನು ಸಮಸ್ಯೆಯನ್ನು ಔಷಧಿ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ ಎನ್ನುವ ರೋಗಿಗೆ ಓವರಿನ್ ಡ್ರಿಲ್ಲಿಂಗ್ ಎಂಬ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಚಿಕಿತ್ಸೆಯ ಮೂಲಕ ಅಂಡಾಣು ಉತ್ಪತ್ತಿಯ ಸಾಮರ್ಥ್ಯ ಹೆಚ್ಚಿಸಿ, ಗರ್ಭಧಾರಣೆ ಆಗುವಂತೆ ಮಾಡಲಾಗುವುದು.

ಪಿಸಿಒಎಸ್‌ ಸಮಸ್ಯೆ ಇರುವವರು ವ್ಯಾಯಾಮ ಮಾಡಬೇಕು

ಪಿಸಿಒಎಸ್‌ ಸಮಸ್ಯೆ ಹೋಗಲಾಡಿಸಲು ದೈಹಿಕ ವ್ಯಾಯಾಮ ಅವಶ್ಯಕವಾಗಿ ಮಾಡಬೇಕು. ಮೈ ತೂಕ ಹೆಚ್ಚಾಗಿದ್ದರೆ ವ್ಯಾಯಾಮ ಮಾಡುವ ಮೂಲಕ ಮೈ ತೂಕ ಕರಗಿಸಬೇಕು, ಯೋಗ ಕೂಡ ಪಿಸಿಒಎಸ್‌ ಸಮಸ್ಯೆಯಿಂದ ಹೊರಬರುವಲ್ಲಿ ಸಹಕಾರಿಯಾಗಿದೆ. ಕಟ್ಟುನಿಟ್ಟಿನ ವ್ಯಾಯಾದ ಜತೆಗೆ ಈ ರೀತಿಯ ಆಹಾರಕ್ರಮ ಪಾಲಿಸಿದರೆ ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದು.

ಪಿಸಿಒಎಸ್‌ ಸಮಸ್ಯೆ ಇರುವವರಿಗೆ ಸಸ್ಯಾಹಾರ ಅಹಾರಕ್ರಮ

ಪಿಸಿಒಎಸ್‌ ಸಮಸ್ಯೆ ಇರುವವರು ಅಧಿಕ ಕೊಬ್ಬಿನಂಶವಿರುವ ಆಹಾರಗಳಿಂದ ದೂರವಿರಬೇಕು. ಅಧಿಕ ಕ್ಯಾಲೋರಿ ಇರುವ ಆಹಾರ ಸೇವಿಸಿದರೆ ಮೈ ತೂಕ ಹೆಚ್ಚುವುದು. ಆದ್ದರಿಂದ ಇಲ್ಲಿ ನೀಡಿರುವ ಆಹಾರಕ್ರಮ ಪಾಲಿಸಿ.

ಬೆಳಗ್ಗೆ (ಇವುಗಳಲ್ಲಿ ನಿಮಗೆ ಇಷ್ಟವಾಗಿದ್ದನ್ನು ಕುಡಿಯಬಹುದು)

*1 ಕಪ್ ಗ್ರೀನ್ ಟೀ: ಗ್ರೀನ್ ಟೀ ದೇಹವನ್ನು ಡಿಟಾಕ್ಸ್ ಮಾಡುವುದರಿಂದ ತೂಕ ಇಳಿಕೆಗೆ ಸಹಾರಿ.

* 1 ಕಪ್ ಹರ್ಬಲ್ ಟೀ

* 1 ಕಪ್ ಬಿಸಿ ನೀರಿಗೆ ಜೇನು ಹಾಗೂ ನಿಂಬೆರಸ ಹಾಕಿ ಕುಡಿಯಿರಿ

* 1ಕಪ್ ಚಕ್ಕೆ ಟೀ

* ಒಂದು ಲೋಟ ಹಸಿರು ಜ್ಯೂಸ್(ಸೋರೆಕಾಯಿ, ಸೌತೆಕಾಯಿ, ಪುದೀನಾ, ಪಾಲಾಕ್ ಇವುಗಳಲ್ಲಿ ಯಾವುದನ್ನು ಬೇಕಾದರೂ ಜ್ಯೂಸ್ ಮಾಡಬಹುದು)

ಬ್ರೇಕ್‌ಫಾಸ್ಟ್ (ಇವುಗಳಲ್ಲಿ ನಿಮಗೆ ಇಷ್ಟವಾಗಿದ್ದನ್ನು ತಿನ್ನಬಹುದು)

* ಓಟ್ಸ್ ಹಾಗೂ ಹಣ್ಣುಗಳು

* ಜೋಳದ ರೊಟ್ಟಿ ಹಾಗು ತರಕಾರಿ ಪಲ್ಯ

* 2 ಇಡ್ಲಿ, ಸಾಂಬಾರ್

* ಒಂದು ಗೋಧಿ ದೋಸೆ

* ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳಾದ ಚೆರ್ರಿ, ಬೆರ್ರಿ

ಸ್ನ್ಯಾಕ್ಸ್(ನಿಮ್ಮ ಆಯ್ಕೆಗೆ ಬಿಟ್ಟದ್ದು)

1 ಕಪ್ ವೆಜೆಟೆಬಲ್ ಸೂಪ್

1 ಬಾಳೆಹಣ್ಣು ಅಥವಾ ಸಪೊಟಾ

ಗ್ರೀನ್ ಟೀ

ಅರ್ಧ ಕಪ್ ಡ್ರೈ ಫ್ರೂಟ್ಸ್ ಹಾಗೂ ಬೀಜಗಳು

ಮಧ್ಯಾಹ್ನದ ಊಟ

1 ಕಪ್ ಕೆಂಪಕ್ಕಿ ಅನ್ನ+ 1 ಕಪ್ ತರಕಾರಿ +ದಾಲ್

2-3 ಚಪಾತಿ+ 1 ಕಪ್ ತರಕಾರಿ+ 1 ಕಪ್ ಮೊಸರು

1 ಚಪಾತಿ+ ಅರ್ಧ ಕಪ್ ಕೆಮಪಕ್ಕಿ ಅನ್ನ+ಸಲಾಡ್

ಸ್ನ್ಯಾಕ್ಸ್

ಸ್ವಲ್ಪ ಡ್ರೈ ಫ್ರೂಟ್ಸ್

ಮೊಳಕೆ ಕಾಳುಗಳು 1 ಕಪ್

ಹಣ್ಣುಗಳು

ಬೇಕಿದ್ದರೆ ಮಲ್ಟಿಗ್ರೈನ್ ಬಿಸ್ಕೆಟ್ ತಿನ್ನಬಹುದು

ರಾತ್ರಿಯ ಊಟ

2 ಚಪಾತಿ+ 1 ಕಪ್ ಬೇಳೆ/ರಾಯತ

* 1 ಕಪ್ ಹಸಿರು ತರಕಾರಿಗಳು

8 1 ಕಪ್ ನವಣೆ

* ರೋಟಿ+ದಾಲ್+ರಾಯತ

* ತರಕಾರಿ ಸೂಪ್

ಮಲಗುವ ಮುನ್ನ

ಬಿಸಿ ಬಿಸಿಯಾದ ನೀರಿಗೆ ಚಕ್ಕೆ ಪುಡಿ ಹಾಕಿ ಕುಡಿಯಿರಿ.

ಕೆಳಗೆ ನೀಡಿರುವ ಮಾರ್ಗದರ್ಶನ ಪಾಲಿಸಿದರೆ ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದಾಗಿದೆ

* ಗೋಧಿ ಬದಲಿಗೆ ನವಣೆ, ಧಾನ್ಯಗಳನ್ನು ಬಳಸಿ

* ಸಂಸ್ಕರಿಸಿದ ಆಹಾರ ತಿನ್ನಬೇಡಿ, ಜಂಕ್‌ ಫುಡ್‌ನಿಂದ ದೂರವಿರಿ.

* ದಿನದಲ್ಲಿ ಒಂದು ಬಾರಿಯಾದರೂ 1 ಕಪ್ ತರಕಾರಿ ಸೂಪ್ ಕುಡಿಯಿರಿ.

* 2 ಚಪಾತಿ ಒಟ್ಟಿಗೆ ತಿನ್ನುವ ಬದಲು ಒಂದು ತಿಂದು ಒಂದು ಗಂಟೆ ಬಿಟ್ಟು ಮತ್ತೊಂದು ತಿನ್ನಿ. ಹೀಗೆ ತಿಂದರೆ ತೂಕ ನಿಯಂತ್ರಣಕ್ಕೆ ಸುಲಭ.

* ಕನಿಷ್ಠ 2-3 ಬಗೆಯ ಹಣ್ಣುಗಳನ್ನು ತಿನ್ನಿ.

* ಹೊಸ ರುಚಿಯ ಅಡುಗೆಯನ್ನು ಆರೋಗ್ಯಕರವಾಗಿ ಮಾಡಿ ಸವಿಯಿರಿ.

* ಚಕ್ಕೆ ನೀರು ದೆಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಕಾರಿ.

* 6-8 ತಾಸು ನಿದ್ದೆ ಮಾಡಿ.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ : ಆತಂಕ ಅನಗತ್ಯ

Thu Oct 31 , 2019
Source Credit Vishwavani.news ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು ಇಲ್ಲ. ಇಂಗು ಹಾಗಿದ ಒಗ್ಗರಣೆಯಂತೆ ಘಮ ಘಮ ನವೆಂಬರ್ ಬಂದರೆ ಸಾಕು, ನನಗೆ ಕಾಡುವ (ಇದು ನಿಮ್ಮ ಸಂದೇಹವೂ ಆಗಿರಬಹುದು) ಒಂದು ಸಂದೇಹವೆಂದರೆ, ಇದು ಕನ್ನಡದ ಉತ್ಸವವೋ, ಶೋಕಾಚರಣೆಯೋ? ಕಾರಣ ನವೆಂಬರ್ ಬಂದರೆ ಎಲ್ಲರೂ ಸೂತಕ ಅಥವಾ ಶೋಕಾಚರಣೆ ರೀತಿಯಲ್ಲಿ ವರ್ತಿಸುತ್ತಾಾರೆ. ಕನ್ನಡ ರಾಜ್ಯೋೋತ್ಸವ ಎಂದ ಮೇಲೆ ಅಲ್ಲಿ ಅಲ್ಲಿ ಉತ್ಸವವಿರಬೇಕು, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links