ಫೆಬ್ರವರಿ 14 ಪ್ರೇಮಿಗಳ ದಿನ ಬದಲು..ಪುಲ್ವಾಮಾ ಹುತಾತ್ಮ ದಿನವಾಗಿ ಆಚರಿಸಿ ಬಜರಂಗದಳ ಕರೆ

Source Credit TheMangaloreMirror.in

ಫೆಬ್ರವರಿ 14 ಪ್ರೇಮಿಗಳ ದಿನ ಬದಲು..ಪುಲ್ವಾಮಾ ಹುತಾತ್ಮ ದಿನವಾಗಿ ಆಚರಿಸಿ ಬಜರಂಗದಳ ಕರೆ

ಮಂಗಳೂರು ಫೆಬ್ರವರಿ 5: ಫೆಬ್ರವರಿ 14 ಹತ್ತಿರವಾಗುತ್ತಿದ್ದಂತೆ ಒಂದೆಡೆ ಯುವ ಮನಸ್ಸುಗಳಲ್ಲಿ ಪ್ರೀತಿಯ ಚಿಲುಮೆ ಪುಟಿದೇಳುತ್ತಿದೆ. ಆ ದಿನವನ್ನು ತುಂಬಾ ಸ್ಪೇಷಲ್ ಆಗಿ ಆಚರಿಸಬೇಕೆಂಬ ಮಹದಾಸೆ ಹೊತ್ತಿರುವ ಪ್ರೇಮಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಈ ದಿನವನ್ನು ವಿರೋಧಿಸುತ್ತಾ ಬಂಧಿರುವ ಹಿಂದೂಪರ ಸಂಘಟನೆಗಳು ಈ ಬಾರಿಯೂ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸದಂತೆ ಕರೆ ನೀಡಿದೆ. ಇದಕ್ಕೆ ಕಾರಣವೂ ಕೂಡ ಇದೆ.

ಫೆಬ್ರವರಿ 14ರಂದು ದೇಶ ಇವರೆಗೆ ಕಂಡು ಕೇಳರಿಯದ ಭಯೋತ್ಪಾದಕ ದಾಳಿಗೆ ಒಳಗಾದ ದಿನ. 2019ರ ಫೆಬ್ರವರಿ 14 ರಂದು ಜಮ್ಮುವಿನ ಫುಲ್ವಾಮಾದಲ್ಲಿ ಸಿಆರ್ ಪಿಎಫ್ ತುಕಡಿಯನ್ನು ಗುರಿಯಾಗಿಸಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದರೆ, 70 ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಘಟನೆ ದೇಶವನ್ನೆ ಬೆಚ್ಚಿ ಬಿಳಿಸಿತ್ತು. ಈ ದಾಳಿಗೆ ಪ್ರತಿಯಾಗಿ ಕೇಂದ್ರ ಸರಕಾರ ಬಾಲಾಕೋಟ್ ಎರ್ ಸ್ಟ್ರೈಕ್ ಹಾಗೂ ಪಿಓಕೆಯಲ್ಲಿ ಸರ್ಜಿಕಲ್ ಸ್ರ್ಟೈಕ್ ನಡೆಸಿ ಪುಲ್ವಾಮಾ ದಾಳಿಗೆ ಪ್ರತಿಕಾರ ತೀರಿಸಿತು. ಆದರೆ ಇಂದಿಗೂ ಪುಲ್ವಾಮಾ ದಾಳಿ ಆಘಾತ ದೇಶ ಮರೆತಿಲ್ಲ.
ಸಿಆರ್ ಪಿಎಫ್ ನ 44 ಯೋಧರ ಬಲಿದಾನವನ್ನ ದೇಶ ಇಂದಿಗೂ ನೆನೆಯುತ್ತಿದೆ.

ಈ ಹಿನ್ನಲೆಯಲ್ಲಿ ಫೆಬ್ರವರಿ 14 ರಂದು ಪ್ರೇಮಿಗಳ ದಿನ ಬದಲು ಪುಲ್ವಾಮಾ ಹುತಾತ್ಮರ ದಿನವನ್ನಾಗಿ ಆಚರಿಸಲು ಹಿಂದೂ ಸಂಘಟನೆಗಳು ಕರೆ ನೀಡಿವೆ. ಬಜರಂಗದಳ ಫೆಬ್ರವರಿ 14 ರಂದು ಪುಲ್ವಾಮಾ ಹುತಾತ್ಮ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದು, ಕೇಂದ್ರ ಸರಕಾರ ಫೆಬ್ರವರಿ 14 ನ್ನು ಪುಲ್ವಾಮಾ ಘಟನೆಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಗೌರವಾರ್ಥ ಹುತಾತ್ಮ ದಿನವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದೆ.

Facebook Comments

comments

Source Credit TheMangaloreMirror.in

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ದೊಡ್ಡತನ ತೋರಿದ ಶೈನ್ ಶೆಟ್ಟಿ.. ದೀಪಿಕಾ ತಾಯಿಗೆ ಹೇಳಿದ್ದೇನು ಗೊತ್ತಾ?

Wed Feb 5 , 2020
Source Credit RJ News Kannada ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಚರ್ಚೆಯಾದ ವಿಚಾರ ಹೆಚ್ಚು ಜನರಿಗೆ ಇಷ್ಟವಾದ ಜೋಡಿ ಎಂದರೆ ಅದು ಶೈನ್ ಹಾಗೂ ದೀಪಿಕಾ ಅವರ ವಿಚಾರ.. ಇದ್ದಷ್ಟು ದಿನದಲ್ಲಿ ಕೆಲವೊಂದಿಷ್ಟು ದಿನಗಳು ಶೈನ್ ದೀಪಿಕಾ ಅವರ ಹಿಂದೆ ಬಿದ್ದು ಕಾಡಿದ್ದು ಕಾಲೆಳೆದಿದ್ದು ಎಲ್ಲರಿಗೂ ಇಷ್ಟವಾಗಿತ್ತು.. Pin it Email https://nirantharanews.com/%e0%b2%ab%e0%b3%86%e0%b2%ac%e0%b3%8d%e0%b2%b0%e0%b2%b5%e0%b2%b0%e0%b2%bf-14-%e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf%e0%b2%97%e0%b2%b3-%e0%b2%a6%e0%b2%bf%e0%b2%a8-%e0%b2%ac%e0%b2%a6/#UGhvdG9HcmlkXzE ಅಷ್ಟೂ ದಿನಗಳ ಕಾಲ ದೀಪಿಕಾ ಅವರನ್ನು ಬಹಳಷ್ಟು ಜನರು ಬೆಂಬಲಿಸುತ್ತಿದ್ದರು… ಅವರ ನಡವಳಿಕೆ ಎಲ್ಲೂ ಯಾರ ಜೊತೆಯೂ ಸಲುಗೆಯಿಂದ ನಡೆದುಕೊಳ್ಳದೆ ಖಡಕ್ ಆಗಿ ಇದ್ದ ರೀತಿ ಮೆಚ್ಚುವಂತದ್ದಾಗಿತ್ತು.. Pin […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links