ಫಿಟ್ನೆಸ್‌ಗಾಗಿ ಚಳಿಗಾಲದಲ್ಲಿ ಈ 5 ಯೋಗಾಸನ ಬೆಸ್ಟ್

Source Credit Kannada.boldsky.com

1. ಬಾಲಾಸನ

ಬಾಲಾಸನ ಅಂದರೆ ಮಗುವಿನ ರೀತಿ ಮಲಗುವ ಯೋಗ ಭಂಗಿಯಾಗಿದೆ. ಈ ಆಸನ ಮಾಡಲು ಯೋಗ ಮ್ಯಾಟ್ ಮೇಲೆ ಮಂಡಿ ಮಡಚಿ ಕೈಗಳನ್ನು ಮುಂದೆಕ್ಕೆ ಚಾಚಿ ತಲೆಯನ್ನು ಮ್ಯಾಟ್‌ಗೆ ತಾಗಿಸಿ ವಿರಮಿಸಿ. ಉಸಿರಾಟ ಸಾಮಾನ್ಯ ಸ್ಥಿತಿಯಲ್ಲಿ ಇರಲಿ. ಈ ರೀತಿ ಒಂದು ನಿಮಿಷವಿದ್ದು ನಂತರ ಮಕರಾಸನದಲ್ಲಿ ವಿರಮಿಸಿ.

ಪ್ರಯೋಜನಗಳು

* ಈ ಯೋಗಾಸನ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

* ಬೆನ್ನು ಮೂಳೆಯ ಅರೋಗ್ಯಕ್ಕೆ ಒಳ್ಳೆಯದು

* ದಿನಪೂರ್ತಿ ಲವಲವಿಕೆಯಿಂದ ಇರಲು ಸಹಕಾರಿ.

2. ಬೆಕ್ಕು ಹಸುವಿನ ಭಂಗಿ

ಈ ಯೋಗ ಭಂಗಿ ಮಾಡುವಾಗ ನಿಮ್ಮ ಗಲ್ಲವನ್ನು ಮ್ಯಾಟ್‌ಗೆ ತಾಗಿಸಿ ಹಾಗೂ ಶರೀರವನ್ನು ಮೇಜಿನ ಸ್ಥಿತಿಗೆ ತನ್ನಿ. ಈಗ ಮೊಣಕಾಲುಗಳನ್ನು ಮಡಚಿ, ನಿಮ್ಮ ಮೊಣಕೈ ಮತ್ತು ಭುಜ ಸಮಾನಾಂತರವಾಗಿರವಾಗಿ ಇಟ್ಟು ಕೊಳ್ಳಿ, ಆಗ ನಿಮ್ಮ ಇಡೀ ದೇಹ ನೆಲಕ್ಕೆ ಸಮಾನಾಂತರವಾಗಿರುತ್ತದೆ. ಈಗ ಈ ಭಂಗಿಯಲ್ಲಿ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳಿ, ಹೀಗೆ ಉಸಿರನ್ನು ತೆಗೆದುಕೊಲ್ಳುವಾಗ ಹೊಟ್ಟೆಯನ್ನು ಒಳಗೆ ಎಳೆದುಕೊಂಡು ತಲೆ ಎತ್ತಬೇಕು. ಇದೇ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಕೂತು ನಂತರ ಬೆಕ್ಕಿನ ಭಂಗಿಗೆ ತನ್ನಿ.

ಬೆಕ್ಕಿನ ಭಂಗಿಯ ಆಸನ ಹಸುವಿನ ಆಸನ ಮಾಡಿದ ನಂತರ ಅದೇ ಸರಣಿಯಲ್ಲಿ ಉಸಿರನ್ನು ಬಿಡುತ್ತಾ ನಿಮ್ಮ ಬೆನ್ನು ಹುರಿಯನ್ನು ಬಗ್ಗಿಸಿ ತಲೆಯನ್ನು ಕೆಳಕ್ಕೆ ತರಬೇಕು, ನಂತರ ಬೆನ್ನು ಮೂಳೆಯನ್ನು ಸಮನಾಂತರ ಮಾಡಿಕೊಂಡು ತಲೆಯನ್ನು ಮೇಲಕ್ಕೆ ಎತ್ತಬೇಕು. ಈ ರೀತಿ 2-3 ಬಾರಿ ಮಾಡಿ. ಈ ಎರಡು ಅಸನಗಳನ್ನು ಸರನಿಯಾಗಿ 5 ನಿಮಿಷ ಅಭ್ಯಾಸ ಮಾಡಿ.

ಪ್ರಯೋಜನಗಳು:

ಬೇಗನೆ ಸುಸ್ತು ಅನಿಸುವುದು, ಬೆನ್ನು ನೋವಿನ ಸಮಸ್ಯೆ ಇರುವವರು ಈ ಯೋಗ ಭಂಗಿ ಅಭ್ಯಾಸ ಮಾಡುವುದು ಒಳ್ಳೆಯದು.

ಈ ಭಂಗಿ ಅಭ್ಯಾಸ ಮಾಡುವ ಪರಿಣಿತರ ಮಾರ್ಗದರ್ಶನ ಪಡೆಯಿರಿ, ಏಕೆಂದರೆ ಈ ಯೋಗ ಭಂಗಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅಡ್ಡಪರಿಣಾಮ ಉಂಟಾಗುವುದು.

3. ವೀರಭದ್ರಾಸನ

ವೀರಭದ್ರಾಸನ ಹೆಸರೇ ಸೂಚಿಸಿದಂತೆ ವೀರತ್ವವನ್ನು ತರುವ ಭಂಗಿಯಾಗಿದೆ. ಈ ಯೋಗ ಅಭ್ಯಾಸ ಮಾಡಲು ಮ್ಯಾಟ್‌ ಮೇಲೆ 3-4 ಅಡಿಯಷ್ಟು ಕಾಲುಗಳನ್ನುಅಗಲವಾಗಿ ಮಾಡಿ ನೇರವಾಗಿ ನಿಲ್ಲಿ.ನಿಮ್ಮ ಬಲಪಾದ 90 ಡಿಗ್ರಿಯಷ್ಟು ಹೊರಗಡೆಗೆ ಹಾಗೂ ನಿಮ್ಮ ಎಡ ಪಾದ 15 ಡಿಗ್ರಿಯಷ್ಟು ಒಳಗಡೆ ಇರಿಸಿ. ಎರಡು ಕೈಗಳನ್ನು ನಿಮ್ಮ ಭುಜಕ್ಕೆ ಸಮವಾಗಿ ಚಾಚಿ ನಿಲ್ಲಿ, ಈಗ ಉಸಿರನ್ನು ತೆಗೆದುಕೊಳ್ಳುತ್ತಾ ಒಂದು ಕಾಲನ್ನು ಮುಂದೆಕ್ಕೆ ಚಾಚಿ ಮಂಡಿಯನ್ನು ಮಡಚಿ, ಕೈಗಳನ್ನು ಮುಂದೆಕ್ಕೆ ತಂದು ಆ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಇರಿ, ನಂತರ ಯಥಾ ಸ್ಥಿತಿಗೆ ಬಂದು ಪುನಃ ಎಡಭಾಗದ ಕಾಲನ್ನು ಮಡಚಿ ಆಸನ ಮಾಡಿ. ಈ ರೀತಿ 2-3 ಬಾರಿ ಮಾಡಿ.

ಈ ಆಸನದ ಪ್ರಯೋಜನಗಳು

* ತೋಳುಗಳು, ಕಾಲುಗಳು, ಸೊಂಟ ಬಲವಾಗುತ್ತದೆ

* ದೇಹದಲ್ಲಿ ಶಕ್ತಿ ಹೆಚ್ಚಾಗುವುದು

* ಭುಜಗಳು ಬಲವಾಗುವುದು

4. ಸೇತು ಬಂಧಾಸನ

ಈ ಆಸನದ ಹೆಸರೇ ಸೂಚಿಸುವಂತೆ ಸೇತು ಎಂದರೆ ಸೇತುವೆ ಎಂದರ್ಥ. ಶರೀರವನ್ನು ಸೇತುವೆ ರೀತಿ ಬಾಗಿಸಿ ಮಾಡುವ ಯೋಗ ಭಂಗಿ ಇದಾಗಿದೆ.

ಮಾಡುವ ವಿಧಾನ

ಈ ಅಸನ ಮಾಡಲು ಮೊದಲಿಗೆ ಮ್ಯಾಟ್‌ ಮೇಲೆ ಅಂಗಾತ ಮಲಗಿ, ನಂತರ ಎರಡು ಕಾಲುಗಳನ್ನು ಮಡಿಸಬೇಕು. ಎರಡು ಪೃಷ್ಠಗಳ ಹತ್ತಿರ ಎರಡು ಪಾದಗಳು ಬರಬೇಕು. ಈಗ ಬಲಗೈಯಿಂದ ಬಲಗಾಲಿನ ಮಣಿಗಂಟನ್ನು, ಎಡ ಹಸ್ತದಿಂದ ಎಡಗಾಲಿನ ಮಣಿಗಂಟನ್ನು ಹಿಡಿಯಬೇಕು.ಈಗ ನಿಧಾನಕ್ಕೆ ಸೊಂಟವನ್ನು ಮೇಲಕ್ಕೆ ಎತ್ತಿ. ಮಂಡಿಯ ನೇರದಲ್ಲಿ ತೊಡೆಗಳು ಮತ್ತು ಸೊಂಟದ ಭಾಗ ಬರಬೇಕು. ಹೊಟ್ಟೆಯನ್ನು ಒಳಗಡೆ ಎಳೆದು ಎದೆಯನ್ನು ಮೇಲಕ್ಕೆ ಎತ್ತಿ ಹಿಂದಕ್ಕೆ ವಾಲಿ ನೆತ್ತಿಯನ್ನು ನೆಲಕ್ಕೆ ತಾಗಿಸಿ. ನಂತರ ಸೊಂಟವನ್ನು ನಿದಾನಕ್ಕೆ ಕೆಳಗಿಳಿಸಿ ನೆಲಕ್ಕೆ ತಾಗಿಸಿ, ನಂತರ ಕಾಲುಗಳನ್ನು ಮುಂದೆಕ್ಕೆ ಚಾಚಿ ಶವಾಸನ ಸ್ಥಿತಿಗೆ ತನ್ನಿ.

ಪ್ರಯೋಜನಗಳು

* ಈ ಆಸನ ಮಾಡುವುದರಿಂದ ಬೆನ್ನಿನ ಆರೋಗ್ಯಕ್ಕೆ ಒಳ್ಳೆಯದು.

* ಹೊಟ್ಟೆ ಬೊಜ್ಜು ಕರಗಲು ಸಹಕಾರಿ

* ಅಸ್ತಮಾ, ಮಧುಮೇಹ, ಥೈರಾಯ್ಡ್ ಸಮಸ್ಯೆ ಇರುವವರು ಈ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು.

5. ಶವಾಸನ

ಮೇಲಿನ ಆಸನಗಳನ್ನು ಮಾಡಿದ ಬಳಿಕ ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಈ ಆಸನವನ್ನು ಮಾಡಿ. ಈ ಆಸನದಲ್ಲಿ ಮ್ಯಾಟ್‌ ಮೇಲೆ ಅಂಗಾತ ಮಲಗಬೇಕು, ಕೈಗಳು ಪಕ್ಕಕ್ಕೆ, ಆಕಾಶಕ್ಕೆ ಮುಖ ಮಾಡಿರಲಿ, ಕಾಲುಗಳು ಸ್ವಲ್ಪ ಅಗಲವಾಗಿರಲಿ, ಈಗ ಕಣ್ಣುಗಳನ್ನು ಮುಚ್ಚಿಕೊಂಡಿರಲಿ, ಉಸಿರಾಟ ನಿರಂತರವಾಗಿರಲಿ, ಈ ಸ್ಥಿತಿಯಲ್ಲಿ ‘ಅ’ಕಾರ ಹಾಗು ‘ಉ’ ಕಾರವನ್ನು ಉಚ್ಛಾರಣೆ ಮಾಡಿ, ನಂತರ ‘ಮ’ ಕಾರವನ್ನು ಉಚ್ಛಾರಣೆ ಮಾಡಿದರೆ ಒಳ್ಳೆಯದು. ಈ ರೀತಿ ಮೂರು ಬಾರಿ ನಂತರ ಓಂಕಾರ ಹೇಳಿ, ಮೆಲ್ಲನೆ ಎದ್ದು ಕುಳಿತುಕೊಳ್ಲಿ, ಕಣ್ಣುಗಳು ಮುಚ್ಚಿದ ಸ್ಥಿತಿಯಲ್ಲಿಯೇ ಇರಲಿ, ಈಗ ಕೈಗಳನ್ನು ಉಜ್ಜಿ, ಆ ಬಿಸಿಯನ್ನು ಕಣ್ಣಿಗೆ ಒತ್ತಿ ನಂತರ ನಿಧಾನಕ್ಕೆ ಕಣ್ಣು ತೆಗೆಯಿರಿ.

ಪ್ರಯೋಜನಗಳು

* ಮಾನಸಿಕ ಒತ್ತಡವನ್ನು ಹೊರಹಾಕಿ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ.

* ಶರೀರಕ್ಕೆ ಚೈತನ್ಯ ದೊರೆಯುತ್ತದೆ

* ಚೆನ್ನಾಗಿ ನಿದ್ದೆ ಬರುವುದು

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಯಾವ ತಿಂಗಳ ಗರ್ಭಧಾರಣೆಗೆ ತುಂಬಾ ಕೆಟ್ಟದು?

Thu Oct 31 , 2019
Source Credit Kannada.boldsky.com Pin it Email https://nirantharanews.com/%e0%b2%ab%e0%b2%bf%e0%b2%9f%e0%b3%8d%e0%b2%a8%e0%b3%86%e0%b2%b8%e0%b3%8d%e2%80%8c%e0%b2%97%e0%b2%be%e0%b2%97%e0%b2%bf-%e0%b2%9a%e0%b2%b3%e0%b2%bf%e0%b2%97%e0%b2%be%e0%b2%b2%e0%b2%a6%e0%b2%b2%e0%b3%8d/#MDEtMTU3MjQyMzA ಮೇನಲ್ಲಿ ಗರ್ಭಧರಿಸಿದರೆ ಅಕಾಲಿಕ ಹೆರಿಗೆ ಮೇನಲ್ಲಿ ಗರ್ಭಧರಿಸಿದರೆ ಆಗ ಖಂಡಿತವಾಗಿಯೂ ಮಗು ಅಕಾಲಿಕ ಹೆರಿಗೆಯಾಗುವುದು ಎಂದು ರಾಷ್ಟ್ರೀಯ ಅಕಾಡಮಿ ಆಫ್ ಸೈನ್ಸ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಈ ಅಧ್ಯಯನಕ್ಕಾಗಿ ಸುಮಾರು 657050 ತಾಯಂದಿರ 1.4 ಮಿಲಿಯನ್ ಮಕ್ಕಳನ್ನು ಒಳಪಡಿಸಲಾಯಿತು ಮತ್ತು ಇಲ್ಲಿ ಮಕ್ಕಳು ಜನಿಸಿದ ದಿನಾಂಕವನ್ನು ಆಧರಿಸಿಕೊಂಡು ತಾಯಂದಿರುವ ಗರ್ಭ ಧರಿಸಿದ ಸಮಯವನ್ನು ನೋಡಲಾಯಿತು. ಮೇಯಲ್ಲಿ ಗರ್ಭ ಧರಿಸಿದ ಮತ್ತು ಜನವರಿ ಮತ್ತು ಫೆಬ್ರವರಿಯಲ್ಲಿ ಮೂರನೇ ತ್ರೈಮಾಸಿಕಕ್ಕೆ ಒಳಗಾದ ತಾಯಂದಿರು ಅಕಾಲಿಕ ಹೆರಿಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links