ಪ್ರೇರಣಾರ ಹುಟ್ಟುಹಬ್ಬ ಆಚರಿಸೋಕೆ ಅಂತ ಅಭಿಮಾನಿಗಳು ಮನೆ ಹತ್ರ ಬಂದ್ರೆ ಧೃವ ಹೇಳಿದ್ದೇನು ಗೊತ್ತಾ?

Source Credit RJ News Kannada

ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರು ನವೆಂಬರ್ 24 ರಂದು ತಮ್ಮ ಬಾಲ್ಯದ ಗೆಳತಿ ಪ್ರೇರಣಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.. ಮದುವೆಯಾದ ಕೆಲ ದಿನಗಳಲ್ಲಿಯೇ ನಿಶ್ಚಿತಾರ್ಥದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಪತ್ನಿಗೆ ದುಬಾರಿ ಬೆಲೆಯ ಪೋರ್ಶೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು..

ಇದೀಗ ಸಂಭ್ರಮದ ಮೇಲೆ ಸಂಭ್ರಮ ಎನ್ನುವಂತೆ ಪ್ರೇರಣಾರ ಹುಟ್ಟುಹಬ್ಬ ಕೂಡ ಇದೇ ತಿಂಗಳಿನಲ್ಲಿ ಬಂದಿದ್ದು, ಹುಟ್ಟುಹಬ್ಬದ ಅಂಗವಾಗಿ ಧೃವ ಅವರು ಪತ್ನಿಯನ್ನು ಹಾರ್ಸ್ ರೈಡ್ ಗೆ ಕರೆದುಕೊಂಡು ಹೋಗಿದ್ದು ವೀಡಿಯೋವನ್ನು ಹಂಚಿಕೊಂಡಿದ್ದರು..

ನಿನ್ನೆ ಧೃವ ಸರ್ಜಾ ಅವರ ಅಭಿಮಾನಿಗಳು ಧೃವ ಅವರ ಮನೆಯ ಬಳಿ ತೆರಳಿ ಅದ್ಧೂರಿಯಾಗಿ ಪ್ರೇರಣಾರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ..

ಆದರೆ ಪತ್ನಿಯ ಹುಟ್ಟು ಹಬ್ಬ ಆಚರಿಸಲು ಬಂದ ಅಭಿಮಾನಿಗಳಿಗೆ ಧೃವ ಸರ್ಜಾ ಅವರು ಹೇಳಿದ್ದೇ ಬೇರೆ.. ಹೌದು.. ಸುಮ್ಮನೆ ಯಾರೂ ಕೂಡ ಈ ರೀತಿ ಹೆಚ್ಚು ಹಣ ಕೊಟ್ಟು ಕೇಕ್ ಆಗಲಿ ಹಾರಗಳನ್ನಾಗಲಿ ತರಬೇಡಿ.. ಇದೇ ದುಡ್ಡಿನಲ್ಲಿ ನಿಮ್ಮ ಕುಟುಂಬದವರಿಗೆ ಏನಾದರೂ ಕೊಡಿಸಿ.. ಅಥವಾ ಬಡ ಮಕ್ಕಳಿಗೆ ಸಹಾಯ ಮಾಡಿ.. ಅದೆಲ್ಲಾ ಬಿಟ್ಟು ಈ ರೀತಿ ಕೇಕ್ ಹಾಗೂ ಹಾರಗಳಿಗೆ ಈ ರೀತಿ ನಿಮ್ಮ ಹಣ ಖರ್ಚು ಮಾಡಬೇಡಿ..

ಇನ್ನು ಮುಂದೆ ಯಾರೂ ಕೂಡ ಪ್ರೇರಣಾರ ಹುಟ್ಟುಹಬ್ಬಕ್ಕೆ ಈ ರೀತಿಯಾಗಿ ಮಾಡಬೇಡಿ.. ನೀವೆಲ್ಲರೂ ಪ್ರೀತಿಯಿಂದ ನಮ್ಮನ್ನು ಹಾರೈಸಿ ಅದೇ ನಮಗೆ ದೊಡ್ಡ ಉಡುಗೊರೆ.. ಅದಕ್ಕಿಂತ ಹೆಚ್ಚಿಗೆ ಇನ್ನೇನು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಆಕ್ಷನ್ ಪ್ರಿನ್ಸ್ ಮಾತಿಗೆ ಅಭಿಮಾನಿಗಳು ತಲೆಬಾಗಿದ್ದಾರೆ.. ಧೃವ ಅವರ ಮಾತು ಅಕ್ಷರಶಃ ಸತ್ಯ.. ಸ್ಟಾರ್ ಗಳಿಗೆ ಅಭಿಮಾನಿಗಳಿಂದ ಪ್ರೀತಿಯ ಹಾರೈಕೆ ಬಿಟ್ಟರೆ ಮತ್ತೇನು ಬೇಡ… ನಿಜಕ್ಕೂ ಅದೇ ಅವರಿಗೆ ದೊಡ್ಡ ಉಡುಗೊರೆ.. ಅಭಿಮಾನಿಗಳ ಬಗ್ಗೆ ಕಾಳಜಿ ವಹಿಸಿ ಈ ರೀತಿ ಮನವಿ ಮಾಡಿದ ಧೃವ ಸರ್ಜಾ ಅವರಿಗೆ ಧನ್ಯವಾದಗಳು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮುಂದಿನ 2 ದಿನ ಮಂಗಳೂರು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂಟರ್ ನೆಟ್ ಸೇವೆ ಬಂದ್

Thu Dec 19 , 2019
Source Credit TheMangaloreMirror.in ಮುಂದಿನ 2 ದಿನ ಮಂಗಳೂರು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂಟರ್ ನೆಟ್ ಸೇವೆ ಬಂದ್ ಮಂಗಳೂರು ಡಿಸೆಂಬರ್ 19: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ಗಲಭೆ ಘರ್ಷಣೆ ನಡೆದ ಹಿನ್ನಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಇಂಟರ್ ನೆಟ್ ಸೇವೆಗಳನ್ನು ಸ್ಥಬ್ದಗೊಳಿಸಲಾಗಿದೆ. Pin it Email https://nirantharanews.com/%e0%b2%aa%e0%b3%8d%e0%b2%b0%e0%b3%87%e0%b2%b0%e0%b2%a3%e0%b2%be%e0%b2%b0-%e0%b2%b9%e0%b3%81%e0%b2%9f%e0%b3%8d%e0%b2%9f%e0%b3%81%e0%b2%b9%e0%b2%ac%e0%b3%8d%e0%b2%ac-%e0%b2%86%e0%b2%9a%e0%b2%b0%e0%b2%bf/#aW50ZXJuZXQtc3R ಮಂಗಳೂರಿನಲ್ಲಿ ಪೌರತ್ವ ಮಸೂದೆ ವಿರೋಧಿಸಿ ಇಂದು ನಡೆದ ಗಲಭೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿರುವುದು ಪ್ರಮುಖ ಕಾರಣವಾಗಿದ್ದು, ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links