ಪ್ರೇಮಿಗಳ ದಿನದಂದೇ ತಂದೆಯಾದ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ.. ಯಾವ ಮಗು ಗೊತ್ತಾ?

Source Credit RJ News Kannada

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದ ನಟ ವಿಜಯ್ ಸೂರ್ಯ ಸದ್ಯ ಪ್ರೇಮಲೋಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ..

ಇನ್ನು ಪ್ರೇಮಿಗಳ ದಿನವಾದ ಇಂದು ವಿಜಯ್ ಸೂರ್ಯ ಅವರು ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ವಿಜಯ್ ಸೂರ್ಯ ಹಾಗೂ ಚೈತ್ರಾ ದಂಪತಿಗೆ ಗಂಡು ಮಗುವಾಗಿದ್ದು ವಿಜಯ್ ಸೂರ್ಯ ಬಾಳಲ್ಲಿ ಹೊಸ ಕಿರಣದ ಆಗಮನವಾಗಿದೆ..

ಕಳೆದ ವರ್ಷ ಇದೇ ದಿನ ಅಂದರೆ 2019 ರ ಫೆಬ್ರವರಿ 14 ರಂದು ವಿಜಯ್ ಹಾಗೂ ಚೈತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇಂದು ಅದೇ ದಿನ ಮನೆಗೆ ಹೊಸ ಪುಟ್ಟ ಸದಸ್ಯನ ಆಗಮನವಾಗಿದ್ದು, ಚೈತ್ರಾ ಅವರು ಇಂದು ನನಗೆ ನನ್ನ ಜೀವನದ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ ಎಂದು ಸಂತೋಷ ಹಂಚಿಕೊಂಡಿದ್ದಾರೆ..

ಇನ್ನು ಅಗ್ನಿಸಾಕ್ಷಿ ಧಾರಾವಾಹಿ ಸಮಯದಿಂದಲೂ ಫೀಮೇಲ್ ಫಾಲೋವರ್ಸ್ ಗಳೇ ಹೆಚ್ಚಿದ್ದ ವಿಜಯ್ ಸೂರ್ಯ ಅವರಿಗೆ ಬಹಳಷ್ಟು ಮದುವೆ ಪ್ರಪೋಸಲ್ ಗಳು ಬಂದಿದ್ದವು.. ಆದರೆ ವಿಜಯ್ ಮಾತ್ರ ತಮ್ಮ ಅಮ್ಮ ತೋರಿದ ದೂರದ ಸಂಬಂಧಿ ಹುಡುಗಿ ಚೈತ್ರಾ ಅವರ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದರು..

ಇದೀಗ ವಿಜಯ್ ಹಾಗೂ ಚೈತ್ರಾ ಅವರ ಪ್ರೇಮಲೋಕಕ್ಕೆ ನೂತನ ಮೆಂಬರ್ ಆಗಮನವಾಗಿದೆ.. ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚೈತ್ರಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಯೋಧರ ಬಲಿದಾನದ ಕಥೆಗಳನ್ನು ಮನೆ ಮಕ್ಕಳಿಗೆ ತಿಳಿಸಿ – ಶಾಸಕ ಕಾಮತ್

Fri Feb 14 , 2020
Source Credit TheMangaloreMirror.in ಯೋಧರ ಬಲಿದಾನದ ಕಥೆಗಳನ್ನು ಮನೆ ಮಕ್ಕಳಿಗೆ ತಿಳಿಸಿ – ಶಾಸಕ ಕಾಮತ್ ಮಂಗಳೂರು ಫೆಬ್ರವರಿ 14: ಪುಲ್ವಾಮ ದುರ್ಘಟನೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. Pin it Email https://nirantharanews.com/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf%e0%b2%97%e0%b2%b3-%e0%b2%a6%e0%b2%bf%e0%b2%a8%e0%b2%a6%e0%b2%82%e0%b2%a6%e0%b3%87-%e0%b2%a4%e0%b2%82%e0%b2%a6%e0%b3%86%e0%b2%af%e0%b2%be%e0%b2%a6/#eUg1QkFFQUFBQUF ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಸುಖ ನಿದ್ರೆಯ ಹಿಂದೆ ನಿದ್ದೆಗೆಟ್ಟು ಗಡಿ ಕಾಯುವ ಯೋಧರ ಪರಿಶ್ರಮವಿದೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಮೂಲಕ ಯೋಧರ ಜೊತೆ ನಾವಿದ್ದೇವೆ ಎನ್ನುವ ಸಂದೇಶ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links