ಪ್ರೇಮಿಗಳಿಗೆ ಜೀವ ಬೆದರಿಕೆ: ರಕ್ಷಣೆ ಕೋರುತ್ತಿರುವ ಜೋಡಿಗಳು

Source Credit Oneindia.com

Davanagere

oi-Lekhaka

By ದಾವಣಗೆರೆ ಪ್ರತಿನಿಧಿ

|

ದಾವಣಗೆರೆ, ಜನವರಿ 03: ಪ್ರೀತಿಯ ಬಲೆಯಲ್ಲಿ ಬಿದ್ದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಜೋಡಿಗಳು ಈಗ ಪೋಷಕರ ಜೀವ ಭಯದಲ್ಲಿ ಬದುಕುವಂತಾಗಿದೆ. ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು, ಈಗ ಮನೆ ಬಿಟ್ಟು ಬಂದು‌ ಮದುವೆ ಮಾಡಿಕೊಂಡಿದ್ದಾರೆ.

ಪ್ರೀತಿ ಅಂದ್ರೆನೇ ಹಾಗೆ. ಅದಕ್ಕೆ ಜಾತಿ, ಬೇಧ, ಭಾವ ಅನ್ನೋದೆ ಇರೋಲ್ಲ. ಹೀಗೆ ಪ್ರೀತಿಯ ಬಲೆಯಲ್ಲಿ ಬಿದ್ದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿಯಾದ ಪವಿತ್ರ ಹಾಗೂ ಹರಪ್ಪನಹಳ್ಳಿ ತಾಲ್ಲೂಕಿನ ಖಂಡೇಕೆರೆ ಗ್ರಾಮದ ಯುವಕ ಕೊಟ್ರೇಶ್ ಜೋಡಿಗಳು ಈಗ ಜೀವ ಭಯದಲ್ಲಿ ಬದುಕುವಂತಾಗಿದೆ.

ಹರಿಹರ ಪಟ್ಟಣದಲ್ಲಿರುವ ಪವಿತ್ರ ಮನೆ ಎದುರು ಜೆಸಿಬಿ ಚಾಲಕನಾಗಿದ್ದ ಕೊಟ್ರೇಶ್ ರೂಮ್ ಬಾಡಿಗೆ ಮಾಡಿಕೊಂಡಿದ್ದು, ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮಗಳಾದ ಪವಿತ್ರ ಹಾಗೂ ಕೊಟ್ರೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದರು. ಆದರೆ ಪವಿತ್ರ ಅವರ ಮನೆಯಲ್ಲಿ ವಿರೋಧ ವ್ಯಕ್ತವಾಗಿ, ಇವರ ಪ್ರೀತಿಗೆ ಮನೆಯವರೇ ಖಳನಾಯಕರಾಗಿದ್ದರು.

ಇದರಿಂದ ಜೋಡಿ ಹಕ್ಕಿಗಳು ಮನೆ ಬಿಟ್ಟು ಬೆಂಗಳೂರಿಗೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಇಬ್ಬರು ಬೆಂಗಳೂರಿನಲ್ಲಿರುವ ಮಾಹಿತಿ ಗೊತ್ತಾದ ಪವಿತ್ರ ಪೋಷಕರು, ಇಬ್ಬರು ಪ್ರೇಮಿಗಳನ್ನು ದೂರ ಮಾಡಿದ್ದಾರೆ. ಆದರೆ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿಸಿದ ಪ್ರೇಮಿಗಳು ಈಗ ಮತ್ತೆ ಮನೆ ಬಿಟ್ಟು ಬಂದಿದ್ದಾರೆ.

ಯುವತಿ ಪವಿತ್ರ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರು ಪದೇ ಪದೇ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಿಮ್ಮನ್ನು ಜೀವಂತವಾಗಿ ಇರಲು ಬಿಡೋದಿಲ್ಲ ಎನ್ನುವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ಆರೋಪಿಸಿದ್ದಾರೆ.

ನನ್ನ ಸ್ವ ಇಚ್ಛೆಯಿಂದ ನಾನು ಬಂದಿದ್ದೇನೆ, ಅಲ್ಲದೆ ನಾವು ಮದುವೆಯಾಗಿದ್ದೇವೆ. ನಮ್ಮ ಜೀವನ ನಾವು ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಯುವತಿ ಪೋಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.‌

ಅಲ್ಲದೆ ಯುವಕ ಕೊಟ್ರೇಶ್ ತಾಯಿ ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ದು, ತಂದೆ ಇಲ್ಲದ ಮಗನನ್ನು ಕಷ್ಟ ಪಟ್ಟು ಬೆಳೆಸಿ ದೊಡ್ಡವವನ್ನಾಗಿ ಮಾಡಿದ್ದೇನೆ, ಈಗ ನನ್ನ ಮಗನ ಜೊತೆ ಪವಿತ್ರಳನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಈ ಇಬ್ಬರ ಪ್ರೇವಿಗಳ ಜಾತಿ ಬೇರೆ ಬೇರೆಯಾಗಿದ್ದರೂ ಕೂಡ ಪ್ರೀತಿಸಿದ್ದು, ಜೀವನ ಪರ್ಯಂತ ಜೀವನ ನಡೆಸಬೇಕು, ‌ನಮ್ಮ‌ ಕುಟುಂಬದಿಂದ ರಕ್ಷಣೆ ಬೇಕು ಎಂದು ಪೊಲೀಸರಿಗೆ ಮನವಿ ನೀಡಲು ಸಿದ್ದರಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಾವು ಬದುಕಿನ ನಡುವೆ ಕನ್ನಡದ ಖ್ಯಾತ ನಟ.. ನೆರವಿಗೆ ನಿಂತ ಕನ್ನಡಿಗರು.. ಮೂರೇ ದಿನದಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?

Fri Jan 3 , 2020
Source Credit RJ News Kannada ಕನ್ನಡದ ಖ್ಯಾತ ಕಿರುತೆರೆ ನಟ ಸಂಜೀವ್ ಕುಲಕರ್ಣಿ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು..‌ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.. Pin it Email https://nirantharanews.com/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf%e0%b2%97%e0%b2%b3%e0%b2%bf%e0%b2%97%e0%b3%86-%e0%b2%9c%e0%b3%80%e0%b2%b5-%e0%b2%ac%e0%b3%86%e0%b2%a6%e0%b2%b0%e0%b2%bf%e0%b2%95%e0%b3%86/#UGhvdG9HcmlkXzE ಕಳೆದ 15 ವರ್ಷಗಳಿಂದ ಹೃದಯ ಸನಸ್ಯೆಯನ್ನು ಎದುರಿಸುತ್ತಿದ್ದ ಸಂಜೀವ್ ಕುಲಕರ್ಣಿ ಅವರು 2019 ರಲ್ಲಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಕೂಡ ಪ್ರಯೋಜನವಾಗಿಲ್ಲ.. ಇದೀಗ ಹಾರ್ಟ್ ಟ್ರಾನ್ಸ್ ಪ್ಲಾಂಟೇಷನ್ ಮಾಡಲೇಬೇಕಿದೆ.. Pin it Email https://nirantharanews.com/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf%e0%b2%97%e0%b2%b3%e0%b2%bf%e0%b2%97%e0%b3%86-%e0%b2%9c%e0%b3%80%e0%b2%b5-%e0%b2%ac%e0%b3%86%e0%b2%a6%e0%b2%b0%e0%b2%bf%e0%b2%95%e0%b3%86/#UGhvdG9HcmlkXzE ಆದರೆ ಹೃದಯ ಸಿಗುವವರೆಗೂ ಸಾಧನಗಳ ಮೂಲಕ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links