ಪ್ರವಾಹ ಪೀಡಿತರಿಗೆ ಪರಿಹಾರಕ್ಕಾಗಿ ಕಾಂಗ್ರೆಸ್ ನಿಂದ ಪ್ರಧಾನಿಗೆ ಪತ್ರ

Source Credit Oneindia.com

Hubballi

oi-Jyothi Devangamath

By ಹುಬ್ಬಳ್ಳಿ ಪ್ರತಿನಿಧಿ

|

ಹುಬ್ಬಳ್ಳಿ, ಜನವರಿ 02: ರಾಜ್ಯದ ಜನರು ಸತತವಾಗಿ ಸುರಿದ ಮಳೆ, ಪ್ರವಾಹದಿಂದ ತತ್ತರಿಸಿ‌ ಹೋಗಿದ್ದು, ಈವರೆಗೆ ಕೇಂದ್ರದಿಂದ ಸೂಕ್ತ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಚೇರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ನಗರದ ಲೋಕಸಭಾ ಸದಸ್ಯ ಕಚೇರಿಗೆ ಆಗಮಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಜನರು ಬೀದಿಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿಲ್ಲ, ಸೂಕ್ತ ಪರಿಹಾರವನ್ನೂ ಕೊಟ್ಟಿಲ್ಲ. ಅಲ್ಲದೇ ರಾಜ್ಯಕ್ಕೆ ಪ್ರವಾಸ ಕೈಕೊಳ್ಳಬೇಕೆಂದು ಹಲವಾರು ಪ್ರತಿಭಟನೆಗಳು ಕೂಡಾ ನಡೆದರೂ ರಾಜ್ಯಕ್ಕೆ ಆಗಮಿಸಲಿಲ್ಲ.

ಅಂದು ಜನರ ಜನರ ಕಷ್ಟ ಕೇಳಲು ಆಗಮಿಸದ ಪ್ರಧಾನಿ ಇದೀಗ ನೆರೆ ತಗ್ಗಿದ ಮೇಲೆ ಆಗಮಿಸಿರುವುದು ಖಂಡನೀಯ. ಕೂಡಲೇ ರಾಜ್ಯಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಬಿಳಿ ಗುಲಾಬಿ ಹೂವನ್ನು ಕೇಂದ್ರ ಸಚಿವರ ಕಚೇರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ವಿಭಿನ್ನವಾಗಿ ಮನವಿ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅನೈತಿಕ ಸಂಬಂಧದ ಜಗಳ; ಚಿತ್ರದುರ್ಗದಲ್ಲಿ ಬೆಂಕಿ ಹಚ್ಚಿಕೊಂಡು ಮೂವರ ಆತ್ಮಹತ್ಯೆ

Thu Jan 2 , 2020
Source Credit Oneindia.com Pin it Email https://nirantharanews.com/%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b9-%e0%b2%aa%e0%b3%80%e0%b2%a1%e0%b2%bf%e0%b2%a4%e0%b2%b0%e0%b2%bf%e0%b2%97%e0%b3%86-%e0%b2%aa%e0%b2%b0%e0%b2%bf%e0%b2%b9%e0%b2%be%e0%b2%b0%e0%b2%95/#eGdfYXJyb3cuanB Chitradurga oi-Chidananda M By ಚಿತ್ರದುರ್ಗ ಪ್ರತಿನಿಧಿ | Updated: Thursday, January 2, 2020, 13:48 [IST] ಚಿತ್ರದುರ್ಗ, ಜನವರಿ 02: ಕೌಟುಂಬಿಕ ಕಲಹದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಗಂಡ, ಹೆಂಡತಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ನಡೆದಿದೆ. ಪತಿ ಅರುಣಕುಮಾರ್ (43), ಪತ್ನಿ ಲತಾ (35), ಮಗಳು ಅಮೃತಾ (13) ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಬಾಗಿಲು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಮನೆಯೊಳಗೇ ಮೂವರು ಸಾವನ್ನಪ್ಪಿದ್ದಾರೆ. ಅರುಣ್ ಖಾಸಗಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links