ಪಾರ್ಷಿಯಾಲಿಟಿ ಮಾಡ್ತಿದ್ದಾರಾ ಕಿಚ್ಚ? ಈ ಮಾತು ಬಂದಿದ್ದೇಕೆ ಗೊತ್ತಾ?

Source Credit RJ News Kannada

ಬಿಗ್ ಬಾಸ್ ಸೀಸನ್ 7 ರಲ್ಲಿ ಹಿಂದೆದೂ ಕೇಳದ ಮಾತೊಂದು ಕೇಳಿ ಬರುತ್ತಿದೆ.. ಹೌದು ಈ ಸೀಸನ್ ನಲ್ಲಿ ಕಿಚ್ಚ ಸುದೀಪ್ ಅವರು ಪಾರ್ಷಿಯಾಲಿಟಿ‌ ಮಾಡ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಇದಕ್ಕೆ ಕಾರಣ ಭೂಮಿ ಶೆಟ್ಟಿ.. ಹೌದು ಈ ಹಿಂದೆ ಯಾವ ಸೀಸನ್ ಅನ್ನು ಉದಾಹರಣೆಯಾಗಿ ನೋಡಿದರೂ ಕೂಡ ಕಿಚ್ಚ ಸುದೀಒ ಅವರು ಭೇದಭಾವ ಮಾಡಿದ ಉದಾಹರಣೆ ಸಿಗೋದಿಲ್ಲ.. ತಪ್ಪು ಮಾಡಿದವರಿಗೆ ನೇರವಾಗಿ ತಪ್ಪು ಎಂದು ಖಡಕ್ ಆಗಿ ಹೇಳ್ತಾರೆ..

ಆದರೆ ಈ ಸೀಸನ್ ನಲ್ಲಿ ಅದು ಕಾಣುತ್ತಿಲ್ಲ.. ಒಬ್ಬ ಸ್ಪರ್ಧಿಗೆ ಮಾತ್ರ ಹೆಚ್ಚು ಮೃಧುತ್ವ ಧೋರಣೆ ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಹೌದು ಭೂಮಿ ಶೆಟ್ಟಿ ಅವರು ಎಂತಹ ದೊಡ್ಡ ತಪ್ಪನ್ನು ಮಾಡಿದರೂ ಕೂಡ ಅವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು ಕಡಿಮೆ..

ಆದರೆ ಇತರ ಸದಸ್ಯರ ಸಣ್ಣ ತಪ್ಪಿಗೂ ಖಡಕ್ ಆಗಿ ವಾರ್ನಿಂಗ್ ಕೊಟ್ಟ ಕಿಚ್ಚ ಭೂಮಿ ಶೆಟ್ಟಿ ಅವರ ವಿಷಯದಲ್ಲಿ ಸಾಫ್ಟ್ ಕಾರ್ನರ್ ತೋರುವುದೇಕೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಕಾಡುತ್ತಿದೆ..

ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಮನೆಯ ಸದಸ್ಯರಿಗೆ ಕಿಚ್ಚ ಚಾಕೊಲೆಟ್ ಅನ್ನು ಕಳುಹಿಸಿಕೊಟ್ಟಿದ್ದರು.. ಯಾರೊಂದಿಗೂ ಹಂಚಿಕೊಳ್ಳಬಾರದೆಂದು ಸ್ಟ್ರಿಕ್ಟ್ ಆಗಿಯೇ ತಿಳಿಸಿದ್ದರು.. ಆದರೆ ಕಿಚ್ಚನ ಮಾತು ಮೀರಿ ನಿನ್ನೆ ಪ್ರಿಯಾಂಕ ಹಾಗೂ ಭೂಮಿ ಇಬ್ಬರೂ ಕೂಡ ಮನೆಯ ಇತರ ಸದಸ್ಯರ ಬಳಿ ಚಾಕೊಲೆಟ್ ಅನ್ನು ಕೇಳಿದ್ದರು..

ಆದರೆ ಬ್ರೇಕ್ ನಂತರ ಮತ್ತೆ ಬಂದ ಸುದೀಪ್ ಅವರು ಈ ವಿಚಾರ ಪ್ರಸ್ಥಾಪಿಸಿ ಪ್ರಿಯಾಂಕ ಅವರಿಗೆ ಮಾತ್ರ ಬೈದು ಭೂಮಿ ಶೆಟ್ಟಿ ಮಾಡಿದ ತಪ್ಪನ್ನು ಮಾತಿಗೂ ಸಹ ಹೇಳಲೇ ಇಲ್ಲ ಎಂಬುದು ನೋಡುಗರಿಗೆ ಕಿಚ್ಚ ಪಾರ್ಷಿಯಾಲಿಟಿ ಮಾಡುತ್ತಿದ್ದಾರೆ ಎನಿಸಿದೆ..

ಇದಿಷ್ಟೇ ಅಲ್ಲದೆ ಈ ಹಿಂದೆ ಕೂಡ ಭೂಮಿ ಶೆಟ್ಟಿ ಅವರು ಸಾಕಷ್ಟು ಬಾರಿ ಮನೆಯ ಮೂಲ ನಿಯಮ ಉಲ್ಲಂಘನೆ ಮಾಡಿದ್ದಾರೆ.. ಕಳ್ಳ ಪೊಲೀಸ್ ಟಾಸ್ಕ್ ನಲ್ಲಿ ತಮಗೆ ನೀಡಿದ್ದ ಕೆಲಸ ಮಾಡದೇ ವಾಸುಕಿಗೆ ಕಳ್ಳತನ ಮಾಡಲು ಸಹಾಯ ಮಾಡಿದ್ರು.. ಬಿಗ್ ಬಾಸ್ ಮೂರು ಬಾರಿ ಕರೆದು ವಾರ್ನಿಂಗ್ ಕೊಟ್ಟರೂ ಕೂಡ ಬಿಗ್ ಬಾಸ್ ಮಾತು ಲೆಕ್ಕಕ್ಕೇ ಇಲ್ಲವೆಂಬಂತೆ ತಮ್ಮ ಇಷ್ಟದಂತೆ ನಡೆದುಕೊಂಡರು.. ನಂತರ ಬಿಗ್ ಬಾಸ್ ಮನೆಗೆ ಬೀಗದ ಕೀ ಬದಲಿಸುವ ವ್ಯಕ್ತಿಯ ಜೊತೆ ಯಾರೂ ಮಾತನಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದರೂ ಕೂಡ ಆತನ ಬಳಿ ಭೂಮಿ ಮಾತನಾಡಿದರು.. ಈ ರೀತಿ ಬಹಳಷ್ಟು ಬಾರಿ ತಪ್ಪು ಮಾಡಿದ್ದರೂ ಕೂಡ ಕಿಚ್ಚ ಸುದೀಪ್ ಅವರು ಭೂಮಿಗೆ ಖಾರವಾಗಿ ಬೈದ ಉದಾಹರಣೆಯೇ ಇಲ್ಲ..

ಭೂಮಿ ವಯಸ್ಸಿನಲ್ಲಿ ಚಿಕ್ಕವಳೆಂದು ಈ ಮೃದುತ್ವ ಧೋರಣೆಯೋ ಅಥವಾ ಮತ್ತೇನೋ.. ಆದರೆ ಇನ್ನು ಮುಂದಿನ ದಿನಗಳಲ್ಲಾದರೂ ಈ ರೀತಿ ಆಗದಿರಲಿ ಎಂಬುದು ಪ್ರೇಕ್ಷಕರ ಆಶಯ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ಬಸ್ ನಲ್ಲೇ ಹಿಗ್ಗಾಮುಗ್ಗ ಹೊಡೆದಾಟ; ಕಾರಣ ಮಾತ್ರ ಗೊತ್ತಿಲ್ಲ

Mon Dec 23 , 2019
Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links